ಹುಡುಗಿಯರನ್ನು ಆಕರ್ಷಿಸಬೇಕೆ…? ಈ ಐದು ಅಂಶಗಳನ್ನು ಪಾಲಿಸಿ!

ಬೆಂಗಳೂರು, ಶುಕ್ರವಾರ, 29 ಡಿಸೆಂಬರ್ 2017 (06:35 IST)

ಬೆಂಗಳೂರು: ಫಸ್ಟ್ ಇಂಪ್ರೆಶನ್ ಇಸ್ ಬೆಸ್ಟ್ ಇಂಪ್ರೆಶನ್ ಎಂದು ಹೇಳುತ್ತಾರೆ. ಹಾಗೆ ಹುಡುಗಿಯರು ಹುಡುಗರನ್ನು ಮೊದಲಬಾರಿ ನೋಡಿದಾಗ ಅವನು ಎಂತಹ ವ್ಯಕ್ತಿ ಎಂಬುದನ್ನು ಜಡ್ಜ್ ಮಾಡುತ್ತಾರೆ.


ಹುಡುಗಿಯರು ಹುಡುಗರನ್ನು ಮೊದಲು ನೋಡಿದಾಗ ಗಮಸಿಸುವುದೆ ಅವರ ನಡೆನುಡಿ. ಅವರು ಯಾವ ರೀತಿ ಮಾತನಾಡುತ್ತಾರೆ, ನಡೆಯುತ್ತಾರೆ, ನಿಲ್ಲುತ್ತಾರೆ ಎಂದು ಗಮನಿಸುತ್ತಾರೆ. ಹಾಗೆ ಅವರು ಕಾನ್ಫಿಡೆಂಟ್ ಆಗಿ ಇದ್ದಾರೊ ಇಲ್ಲವೊ ಎಂದು ತಿಳಿಯಲು ಪ್ರಯತ್ನಿಸುತ್ತಾರೆ. ಎರಡನೇಯದಾಗಿ ಆ ಹುಡುಗ ಎಲ್ಲರ ಜೊತೆ ಹೇಗೆ ಬೆರೆಯುತ್ತಾನೆ, ಹೇಗೆ ನಗಿಸುತ್ತಾನೆ ಎಂಬುದರ ಜೊತೆಗೆ ಆತನ ನಗುಮುಖವನ್ನೂ ಗಮನಿಸುತ್ತಿರುತ್ತಾರೆ. ಒಂದುವೇಳೆ ಆತ ಸಿರಿಯಸ್ ಆಗಿದ್ದರೆ ಆತನನ್ನು ಆಕೆ ಇಷ್ಟಪಡುವುದಿಲ್ಲ. ಮೂರನೇಯದಾಗಿ ಹುಡುಗಿಯರು ಹುಡುಗರ ಮನಸ್ಸನ್ನು ಗಮನಿಸುತ್ತಾರೆ. ಅವರು ಬೇರೆಯವರೊಡನೆ ಮಾತನಾಡುವುದನ್ನೆ ಗಮನಿಸುವುದರ ಮೂಲಕ  ಆ ಹುಡುಗರನ ಮನಸ್ಸು ಎಂತಹದು ಎಂದು ಅನಾಲೈಸ್ ಮಾಡುತ್ತಾರೆ.


ನಾಲ್ಕನೇಯದಾಗಿ ಹುಡುಗರ ಸ್ಟೈಲ್ ನ್ನು ನೋಡುತ್ತಾರೆ. ಅವರ ಧರಿಸಿರುವ ಉಡುಪುಗಳ ಬಗ್ಗೆ ಗಮನಹರಿಸುತ್ತಾರೆ.ಹಾಗೆ ಅವರ ಹೇರ್ ಸ್ಟೈಲ್ ಹಾಗು ಅವರು ಧರಿಸಿದ್ದ ಇನ್ನಿತರ ವಸ್ತುಗಳನ್ನೂ ಕೂಡ ಗಮನಿಸುತ್ತಾರೆ. ಅವರು  ಸ್ಟೈಲ್ ಆಗಿರುವ ಹುಡುಗರನ್ನು ಹೆಚ್ಚು ಇಷ್ಟಪಡುತ್ತಾರೆ. ಐದನೇಯದಾಗಿ ಹುಡುಗರು ಉಪಯೋಗಿಸುವ ಫರ್ ಫ್ಯೂಮ್ ನ ವಾಸನೆಯನ್ನು ಗಮನಿಸುತ್ತಾರೆ. ಹಾಗಾಗಿ ಹುಡುಗರ ಶರೀರದಿಂದ ಬರುವ ಸುವಾಸನೆಗಳು ಕೂಡ ಹುಡುಗಿಯರನ್ನು ತಮ್ಮತ್ತ ಸೆಳೆಯಲು ಕಾರಣವಾಗುತ್ತವೆ. ಇದಲ್ಲದೆ ಹುಡುಗಿಯರು ಮೊದಲು ಹುಡುಗರೆ ತಮ್ಮನ್ನು ಮೊದಲು ನೋಡಬೇಕು, ಮಾತನಾಡಿಸಬೇಕು ಎಂದು ಅಂದುಕೊಳ್ಳುತ್ತಾರೆ. ಆದ್ದರಿಂದ ಹುಡುಗಿ ಇಷ್ಟವಾದ ತಕ್ಷಣವೇ ಆಕೆಯ ಬಳಿ ಹೋಗಿ ಮುಚ್ಚುಮರೆ ಇಲ್ಲದೆ ನಿಮ್ಮ ಅನಿಸಿಕೆ ಹೇಳಿದರೆ ಲೈಫ್ ಸೂಪರಾಗಿರುತ್ತದೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಅತ್ಯಧಿಕ ಪೋಷಕಾಂಶವಿರುವ ಸೀಗಡಿ ಮೀನಿನ ಫ್ರೈ

ಸಮುದ್ರ ಆಹಾರವು ಅತ್ಯಧಿಕ ಪೋಷಕಾಂಶಗಳನ್ನು ಹೊಂದಿದ್ದು ಅದರಲ್ಲಿ ಸೀಗಡಿಯು ಒಂದು. ಇದರಿಂದ ಅನೇಕ ಬಗೆಯ ...

news

ರುಚಿಕರವಾದ ಚಟ್ನಿಗಳನ್ನು ತಯಾರಿಸುವುದು ಹೇಗೆ ಗೊತ್ತಾ?

ದಿನಾ ಒಂದೇ ತರಹದ ಚಟ್ನಿಯನ್ನು ತಿಂದು ನೀವು ಬೇಸರಗೊಂಡಿದ್ದರೆ ನಿಮಗಾಗಿ ರುಚಿಕರವಾದ ಚಟ್ನಿಗಳನ್ನು ...

news

ಹಲಸಿನ ಹಣ್ಣಿನಿಂದ ಏನೆಲ್ಲಾ ಮಾಡಬಹುದು ಗೊತ್ತಾ?

ಹಲಸಿನ ಹಣ್ಣು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಹಲವಾರು ಪೋಷಕಾಂಶ ಭರಿತ ಈ ಹಣ್ಣನ್ನು ತಿನ್ನುವುದು ...

news

ಹಲವು ರೋಗಗಳಿಗೆ ರಾಮಬಾಣ ಕರಿಬೇವು

ಒಗ್ಗರಣೆ ಎಂದ ಕೂಡಲೇ ನಮಗೆ ನೆನಪಾಗುವುದು ಕರಿಬೇವು. ಕರಿಬೇವು ಇಲ್ಲದ ಒಗ್ಗರಣೆ ಎಂದಿಗೂ ...

Widgets Magazine
Widgets Magazine