ಭಾರತ-ಚೀನಾ ವಿವಾದಕ್ಕೆ ತುಪ್ಪ ಸುರಿಯಲು ಯತ್ನಿಸುತ್ತಿರುವ ಪಾಕ್

NewDelhi, ಶುಕ್ರವಾರ, 21 ಜುಲೈ 2017 (11:12 IST)

ನವದೆಹಲಿ: ಸಿಕ್ಕಿಂ ಗಡಿಯಲ್ಲಿ ಭಾರತ ಮತ್ತು ಚೀನಾ ನಡುವೆ ಸಂಘರ್ಷ ನಡೆಯುತ್ತಿದ್ದರ, ಇತ್ತ ಭಾರತದ ಶತ್ರು ರಾಷ್ಟ್ರ ಪಾಕಿಸ್ತಾನ ಮೂಗು ತೂರಿಸಲು ಹೊರಟಿರುವುದು ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿಯುವುದು ಖಚಿತವಾಗಿದೆ.


 
ಭಾರತ ಮತ್ತು ಚೀನಾ ನಡುವೆ ಉದ್ವಿಗ್ನ ವಾತಾವರಣ ಸೃಷ್ಟಿಯಾದ ಬೆನ್ನಲ್ಲೇ ಭಾರತದಲ್ಲಿರುವ ಪಾಕ್ ರಾಯಭಾರಿ ಅಬ್ದುಲ್ ಬಾಸಿತ್ ಚೀನಾ ರಾಯಭಾರಿಯನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ಹಲವರ ಹುಬ್ಬೇರುವಂತೆ ಮಾಡಿದೆ. ಸಿಕ್ಕಿಂ ಗಡಿಯಲ್ಲಿ ಚೀನಾ ಪಡೆಗಳು ರಸ್ತೆ ನಿರ್ಮಿಸಲು ಹೊರಟಿರುವುದನ್ನು ಭಾರತೀಯ ಸೇನೆ ತಡೆದಿರುವುದು ಈ ಸಂದರ್ಭದಲ್ಲಿ ಚರ್ಚೆಯಾಯಿತು ಎನ್ನಲಾಗಿದೆ.
 
ಇಷ್ಟೇ ಅಲ್ಲದೆ, ಪಾಕ್ ರಾಯಭಾರಿ ಸಿಕ್ಕಿಂ ಗಡಿಗೆ ಹೊಂದಿಕೊಂಡಿರುವ ಇನ್ನೊಂದು ರಾಷ್ಟ್ರ ಭೂತಾನ್ ರಾಯಭಾರಿಯನ್ನೂ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಮೂಲಕ ಭಾರತ-ಚೀನಾ ಗಡಿ ವಿವಾದದಲ್ಲಿ ಪಾಕ್ ಮೂಗು ತೂರಿಸುತ್ತಿರುವುದು ಇನ್ನಷ್ಟು ಅಸಮಾಧಾನಕ್ಕೆ ಕಾರಣವಾಗಬಹುದೆಂದು ವಿಶ್ಲೇಷಿಸಲಾಗಿದೆ.
 
ಇದನ್ನೂ ಓದಿ..  ರಿಲಯನ್ಸ್ ಜಿಯೋ ಫೋನ್ ಇಂದು ಘೋಷಣೆ ಮಾಡ್ತಾರಾ ಮುಕೇಶ್ ಅಂಬಾನಿ?
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಪಾಕ್ ರಾಯಭಾರಿ ಅಬ್ದುಲ್ ಬಾಸಿತ್ ಅಂತಾರಾಷ್ಟ್ರೀಯ ಸುದ್ದಿಗಳು ಭಾರತ-ಚೀನಾ ಗಡಿ ವಿವಾದ Pak Ambassador Abdul Basith International News India-china Boarder Issue

ಸುದ್ದಿಗಳು

news

ಆಪ್ ಮೂಲಕವೇ ಬಂಜೆತನಕ್ಕೆ ಚಿಕಿತ್ಸೆ ಪಡೆದವಳು ಇದೀಗ ಗರ್ಭಿಣಿ!

ನವದೆಹಲಿ: ತಾಂತ್ರಿಕವಾಗಿ ನಾವು ಇಂದು ಎಷ್ಟು ಮುಂದುವರಿದಿದ್ದೇವೆ ಎಂಬುದಕ್ಕೆ ಈ ಘಟನೆ ಮತ್ತೊಂದು ಸಾಕ್ಷಿ. ...

news

ಕುಣಿಕೆಯೊಳಗೆ ಬಾಲ್ ಹಾಕಲಾಗದೇ ಒದ್ದಾಡಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನಿನ್ನೆ ಕಂಠೀರವ ಸ್ಟೇಡಿಯಂನಲ್ಲಿ ಮೇಲ್ದರ್ಜೆಗೇರಿಸಿದ್ದ ಒಳಾಂಗಣ ...

news

ಮತ್ತೊಂದು ನೋಟ್ ಬ್ಯಾನ್ ಮಾಡ್ತಾರಾ ಮೋದಿ..? 2000 ರೂ. ನೋಟು ತೆರೆಮರೆಗೆ ಸರಿಯುತ್ತಾ..?

ನೋಟ್ ಬ್ಯಾನ್ ಬಳಿಕ ಹಣ ಬದಲಾವಣೆಗೆ ಪರದಾಡಿದ್ದನ್ನ ದೇಶದ ಜನ ಇನ್ನೂ ಮರೆತಿಲ್ಲ. ಅದಾಗಲೇ ಮತ್ತೊಂದು ನೋಟ್ ...

news

ಭಾರತದ ಹಿಂದೂ ರಾಷ್ಟ್ರೀಯವಾದಕ್ಕೆ ನಮ್ಮ ಜತೆ ಯುದ್ಧ ಬೇಕು ಎಂದ ಚೀನಾ

ಬೀಜಿಂಗ್: ಭಾರತದಲ್ಲಿರುವ ಹಿಂದೂ ರಾಷ್ಟ್ರೀಯವಾದಿಗಳಿಗೆ ನಮ್ಮೊಂದಿಗೆ ಯುದ್ಧ ಬೇಕು. ಅದಕ್ಕಾಗಿಯೇ ಸಿಕ್ಕಿಂ ...

Widgets Magazine