ನೇಪಾಳದಲ್ಲಿರುವ ಭಾರತದ ರಾಯಭಾರಿ ಕಚೇರಿ ಸಮೀಪ ಬಾಂಬ್‌ ಸ್ಫೋಟ

ಕಠ್ಮಂಡು, ಮಂಗಳವಾರ, 17 ಏಪ್ರಿಲ್ 2018 (16:53 IST)

ಕಠ್ಮಂಡು : ನೇಪಾಳದ ಬಿರಾತ್‌ನಗರ ಪ್ರದೇಶ‌ದಲ್ಲಿರುವ ರಾಯಭಾರಿ ಕಚೇರಿ ಸಮೀಪ ಬಾಂಬ್‌ ಸ್ಫೋಟಗೊಂಡಿರುವುದಾಗಿ ಮಾಹಿತಿ ತಿಳಿದುಬಂದಿದೆ.

ರಾತ್ರಿ 8.20ರ ಸುಮಾರಿಗೆ ಸ್ಫೋಟ ಸಂಭವಿಸಿದ್ದು, ಈ ವೇಳೆ ಕಚೇರಿಯಲ್ಲಿ ಯಾರೂ ಇರಲಿಲ್ಲಎಂಬುದಾಗಿ ತಿಳಿದುಬಂದಿದೆ.

 

ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಮೋರಾಂಗ್‌ ಜಿಲ್ಲಾ ಎಸ್‌ಪಿ ಅರುಣ್‌ಕುಮಾರ್‌ ಬಿ.ಸಿ ಅವರು, 'ಕಚೇರಿಯ ಹಿಂದೆ ಇರುವ ಖಾಲಿ ಜಾಗದಲ್ಲಿ ಸೋಮವಾರ ರಾತ್ರಿ ಸ್ಫೋಟ ಸಂಭವಿಸಿದ್ದು, ಕಾಂಪೌಂಡ್‌ಗೆ ಸಣ್ಣ ಪ್ರಮಾಣದ ಹಾನಿಯಾಗಿದೆ' ಎಂದಿದ್ದಾರೆ. ಈ ಘಟನೆ ಬಳಿಕ ಪ್ರದೇಶದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

 

ಸೋಮವಾರ ಸ್ಥಳೀಯ ರಾಜಕೀಯ ಪಕ್ಷವೊಂದು ಬಿರಾತ್‌ನಗರ ಬಂದ್‌ ಗೆ ಕರೆ ನೀಡಿದ್ದರಿಂದ ಈ ಕೃತ್ಯಕ್ಕೆ ಸ್ಥಳೀಯ ರಾಜಕೀಯ ಗುಂಪು ಕಾರಣವಿರಬಹುದು ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 



ಇದರಲ್ಲಿ ಇನ್ನಷ್ಟು ಓದಿ :  
ನೇಪಾಳ ಭಾರತ ಸೋಮವಾರ ಕಾಂಪೌಂಡ್ ಭದ್ರತೆ ರಾಜಕೀಯ ಪಕ್ಷ Nepala India Monday Compound Security Political Party

ಸುದ್ದಿಗಳು

news

ಜೆಡಿಎಸ್ ಪಕ್ಷದ ಪರ ಪ್ರಚಾರಕ್ಕೆ ನಿಂತ ನಟಿ ಅಮೂಲ್ಯ

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಸ್ಯಾಂಡಲ್ ವುಡ್ ತಾರೆಯರು ರಾಜಕೀಯ ಪ್ರಚಾರಕ್ಕೆ ...

news

ವರುಣ ಕ್ಷೇತ್ರದಲ್ಲಿ ಕಣ್ಣೀರಿಟ್ಟ ಸಿಎಂ ಸಿದ್ದರಾಮಯ್ಯ; ಕಾರಣವೇನು ಗೊತ್ತಾ...?

ಮೈಸೂರು : ಮುಂಬರುವ ಚುನಾವಣೆಗೆ ವರುಣ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ತಮ್ಮ ಮಗ ಡಾ.ಯತೀಂದ್ರ ಅವರ ...

news

ಬಿಜೆಪಿ ಎರಡನೇ ಪಟ್ಟಿ ಬಿಡುಗಡೆಯಿಂದ ನಮಗೆ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ - ಡಾ. ಜಿ ಪರಮೇಶ್ವರ್

ಬೆಂಗಳೂರು : ಬಿಜೆಪಿ ನಾಯಕರು ಹಂತ ಹಂತವಾಗಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತಿರುವುದನ್ನು ನೋಡಿ ಇದೀಗ ...

news

ಬಿಜೆಪಿ , ಜೆಡಿಎಸ್ ಪಕ್ಷಗಳನ್ನು ನಾಯಿಗೆ ಹೋಲಿಸಿದಕ್ಕೆ ಕ್ಷಮೆ ಕೇಳಿದ ಹಿರಿಯ ನಟ ಮುಖ್ಯಮಂತ್ರಿ ಚಂದ್ರು

ಬೆಂಗಳೂರು : ಇತ್ತೀಚೆಗೆ ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಮಾತನಾಡುವ ಭರದಲ್ಲಿ ಬಿಜೆಪಿ , ಜೆಡಿಎಸ್ ...

Widgets Magazine