ಭಾರತದ ನಡೆಯನ್ನು ಸ್ವಾಗತಿಸಿದ ಚೀನಾ!

ಬೀಜಿಂಗ್, ಮಂಗಳವಾರ, 13 ಮಾರ್ಚ್ 2018 (13:37 IST)

ಬೀಜಿಂಗ್‌: ದ್ವಿಪಕ್ಷೀಯ ಬಾಂಧವ್ಯವನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ ಭಾರತದ ನಡೆಯನ್ನು ಚೀನಾ ಸ್ವಾಗತಿಸಿದೆ.


'ಸಾಮಾನ್ಯತೆಗಳ ಆಧಾರದ ಮೇಲೆ ಪರಸ್ಪರ ಸಂಬಂಧಗಳನ್ನು ಬೆಳೆಸುವ ಭಾಗವಾಗಿ ಚೀನಾದೊಂದಿಗೆ ಮಾಡಲು ತಾನು ಸಿದ್ಧ,' ಎಂಬ ಭಾರತದ ಹೇಳಿಕೆ ಬೆನ್ನಲ್ಲೆ ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಲು ಕಾಂಗ್ಸ್‌ , ಭಾರತದ ನಡೆಯನ್ನು ಸ್ವಾಗತಿಸಿದ್ದಾರೆ.


ಚೀನಾ ವಿದೇಶಾಂಗ ವ್ಯವಹಾರಗಳ ಸಚಿವ ವಾಂಗ್‌ ಯೀ ಅವರು ‘ಮತ್ತು ಚೀನಾ ತಮ್ಮ ಅನುಮಾನಗಳನ್ನು ದೂರ ತಳ್ಳಿ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಪರಸ್ಪರ ಕೈಜೋಡಿಸಬೇಕು,'' ಎಂದು ಈ ಹಿಂದೆ ಹೇಳಿಕೆ ನೀಡಿದ್ದರು.
ಈ ಹೇಳಿಕೆಗೆ ಒಪ್ಪಿಗೆ  ಸೂಚಿಸಿರುವ  ಭಾರತ, ಚೀನಾದೊಂದಿಗಿನ ದ್ವಿಪಕ್ಷೀಯ ಉತ್ತಮ ಪಡಿಸುವ ನಿಟ್ಟಿನಲ್ಲಿ ಸಕಾರಾತ್ಮಕ ಹೆಜ್ಜೆ ಇರಿಸಿದೆ.


 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

‘ಬೇರೆ ಯಾವ ರಾಜ್ಯದಲ್ಲೂ ನಡೆಯದ್ದು ಕರ್ನಾಟಕದಲ್ಲಿ ನಡೆಯುತ್ತಿದೆ!’

ಬೆಂಗಳೂರು: ಜೆಡಿಎಸ್ ವರಷ್ಠ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಸಿಎಂ ಸಿದ್ದರಾಮಯ್ಯ ವಿರುದ್ಧ ಹಿಗ್ಗಾ ...

news

‘ಸಿಎಂ ಸಿದ್ದರಾಮಯ್ಯಗೆ ರಾವಣನ ಬುದ್ಧಿ’

ಮೈಸೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿರುವ ಶ್ರೀನಿವಾಸ ಪ್ರಸಾದ್ ...

news

ನಟಿ ಜಯಾಬಚ್ಚನ್ ಅವರು ದೇಶದ ಅತ್ಯಂತ ಶ್ರೀಮಂತ ಸಂಸದೆಯಂತೆ!

ಹೊಸದಿಲ್ಲಿ : ತಾವು ಹೊಂದಿರುವ ಆಸ್ತಿಯ ಮೌಲ್ಯ 1000 ಕೋಟಿ ರೂ ಎಂದು ಘೋಷಿಸುವುದರ ಮೂಲಕ ಸಮಾಜವಾದಿ ಪಕ್ಷದ ...

news

ದಿಡೀರ್ ಪತ್ರಿಕಾಗೋಷ್ಠಿ ನಡೆಸಿದ ವಿಆರ್ ಎಲ್ ಸಮೂಹ ಸಂಸ್ಥೆ ಮುಖ್ಯಸ್ಥ ವಿಜಯ್ ಸಂಕೇಶ್ವರ

ಬೆಂಗಳೂರು: ವಿಆರ್ ಎಲ್ ಸಮೂಹ ಸಂಸ್ಥೆ ಮುಖ್ಯಸ್ಥ ವಿಜಯ್ ಸಂಕೇಶ್ವರ ಹುಬ್ಬಳ್ಳಿಯಲ್ಲಿ ದಿಡೀರ್ ...

Widgets Magazine