ಪ್ರಧಾನಿ ಮೋದಿಗೆ ಹೆದರಿ ಆಗಾಗ ನೆಲೆ ಬದಲಿಸಿದ್ದ ದಾವೂದ್

ನವದೆಹಲಿ, ಶುಕ್ರವಾರ, 22 ಸೆಪ್ಟಂಬರ್ 2017 (09:14 IST)

ನವದೆಹಲಿ: ಭಾರತದಲ್ಲಿ ಪ್ರಧಾನಿ ಮೋದಿ ಅಧಿಕಾರಕ್ಕೆ ಬರುತ್ತಿದ್ದಂತೆ ದಾಳಿಯ ಭೀತಿಯಿಂದ ಪಾಕ್ ನಲ್ಲಿ ಅಡಗಿರುವ ಭೂಗತ ಲೋಕದ ಪಾತಕಿ ದಾವೂದ್ ಇಬ್ರಾಹಿಂದ 4 ಕಡೆ ತನ್ನ ವಾಸಸ್ಥಳ ಬದಲಿಸಿದ್ದನಂತೆ! ಹಾಗಂತ ಮುಂಬೈ ಪೊಲೀಸರ ವಶದಲ್ಲಿರುವ ದಾವೂದ್ ಸಹೋದರ ಕಸ್ಕರ್ ಬಾಯ್ಬಿಟ್ಟಿದ್ದಾನೆ!


 
ಉದ್ಯಮಿಯೊಬ್ಬರಿಗೆ ಹಣಕಾಸಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬಂಧಿತನಾಗಿರುವ ಕಸ್ಕರ್ ದಾವೂದ್ ಗೆ ಸಂಬಂಧಿಸಿದ ಅನೇಕ ಸ್ಪೋಟಕ ಸತ್ಯಗಳನ್ನು ಹೊರ ಹಾಕಿದ್ದಾನೆ. ಮೋದಿ ಸರ್ಕಾರ ಅಸ್ಥಿತ್ವಕ್ಕೆ ಬಂದಾಗಿನಿಂದ ಭಯಭೀತನಾಗಿರುವ ದಾವೂದ್ ಆಗಾಗ ವಾಸಸ್ಥಳ ಬದಲಿಸಿದ್ದಾನೆ ಎಂಬುದಾಗಿ ಹೇಳಿಕೊಂಡಿದ್ದಾನೆ.
 
ಆದರೆ ಇದರ ನಡುವೆಯೇ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಕೇಂದ್ರದ ಜತೆ ದಾವೂದ್ ಒಪ್ಪಂದ ಮಾಡಿಕೊಂಡಿದ್ದಾನೆ ಎಂದು ಬಾಂಬ್ ಸಿಡಿಸಿದ್ದಾರೆ. ಪಾತಕಿ ಭಾರತಕ್ಕೆ ವಾಪಸಾಗುವ ಕುರಿತಂತೆ ಮಾತುಕತೆ ನಡೆಸಿದ್ದಾನೆ ಎಂದು ಅವರು ಹೇಳಿಕೊಂಡಿದ್ದಾರೆ. ಫೇಸ್ ಬುಕ್ ನಲ್ಲಿ ಇಂತಹದ್ದೊಂದು ವಿಚಾರವನ್ನು ಅವರು ಬರೆದುಕೊಂಡಿದ್ದಾರೆ.
 
ಇದನ್ನೂ ಓದಿ.. ಕ್ಯಾಚ್ ಹಿಡಿದರೂ ಔಟಾಗದ ಹಾರ್ದಿಕ್ ಪಾಂಡ್ಯ !
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅಥಣಿಯಿಂದ ಸ್ಪರ್ಧಿಸುವಂತೆ ಸಿಎಂ ಸಿದ್ದರಾಮಯ್ಯಗೆ ಮನವಿ: ರಮೇಶ್ ಜಾರಕಿಹೊಳಿ

ಬೆಳಗಾವಿ: ಜಿಲ್ಲೆಯ ಅಥಣಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ...

news

ನಿಗದಿತ ಅವಧಿಗೂ ಮೊದಲೇ ಕಬಿನಿ ಭರ್ತಿ: ಬಾಗಿನ ಅರ್ಪಿಸಿದ ಸಿಎಂ

ಮೈಸೂರು: ಈ ಬಾರಿ ಕೇರಳದ ವೈನಾಡಿನಲ್ಲಿ ಭಾರಿ ಮಳೆಯಾಗಿದ್ದು, ಕಬಿನಿ ಜಲಾಶಯ ಭರ್ತಿಯಾಗಿದೆ. ಈ ನಿಟ್ಟಿನಲ್ಲಿ ...

news

ಶಾಂತಿಭಂಗ ಮಾಡುತ್ತಿದ್ದ ಇಬ್ಬರು ಆರೋಪಿಗಳ ಗಡಿಪಾರು

ಹುಬ್ಬಳ್ಳಿ: ಸಮಾಜದ ಸ್ವಾಸ್ಥ್ಯ, ಸಮಾಜ ಘಾತಕ ಚಟುವಟಿಕೆಯಲ್ಲಿ ಭಾಗಿಯಾಗಿ ಶಾಂತಿ ಕದಡುತ್ತಿದ್ದ ಆರೋಪದ ಮೇಲೆ ...

news

ಇಂಜಿನಿಯರಿಂಗ್ ವಿದ್ಯಾರ್ಥಿ ಅನುಮಾನಸ್ಪದ ಸಾವು...?

ಕಲಬುರ್ಗಿ: ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಗರದ ಪಿಡಿಎ ...

Widgets Magazine
Widgets Magazine