ಬಿ.ಎಮ್‌.ಡಬ್ಲ್ಯೂ ಕಾರಿಗೆ ಪೆಟ್ರೋಲ್ ಹಾಕಲು ಶ್ರೀಮಂತ ರೈತನೊಬ್ಬ ಮಾಡಿದ್ದೇನು ಗೊತ್ತಾ?

ಚೀನಾ, ಮಂಗಳವಾರ, 11 ಜೂನ್ 2019 (08:45 IST)

ಚೀನಾ : ಚೀನಾದಲ್ಲಿ ಶ್ರೀಮಂತ ರೈತನೊಬ್ಬ ತನ್ನ ಬಿ.ಎಮ್‌.ಡಬ್ಲ್ಯೂ ಕಾರಿಗೆ ಪೆಟ್ರೋಲ್ ಹಾಕಲು ಕೋಳಿ ಕಳ್ಳತನ ಮಾಡಿ ಸಿಕ್ಕಿಬದ್ದ ಘಟನೆ ನಡೆದಿದೆ.
ಹೌದು. ಈ ಶ್ರೀಮಂತ ರೈತನಿಗೆ ಬಿ.ಎಮ್‌.ಡಬ್ಲ್ಯೂ ಕಾರನ್ನು ಖರೀದಿಸಬೇಕೆಂಬ ಹಂಬಲವಿತ್ತು. ಅದರಂತೆ ಆತ ಕಾರನ್ನೇನೊ ಖರೀದಿಸಿದ ಆದರೆ ಈ ಕಾರಿಗೆ ಪೆಟ್ರೋಲ್ ಹಾಕಿ ಹಾಕಿ ಆತನಿಗೆ ಸಾಕಾಯ್ತು. ಹಾಗಾಗಿ ತನ್ನ ಕಾರಿಗೆ ಪೆಟ್ರೋಲ್ ಹಾಕಿಸಲು ಕೋಳಿ ಕದಿಯಲು ಶುರು ಮಾಡಿದ.


ಈತ  ಸಿಚುವಾನ್ ಪ್ರಾಂತ್ಯದಲ್ಲಿನ ಲಿಂಶುಯಿ ಗ್ರಾಮದಲ್ಲಿ ಕೋಳಿಗಳನ್ನು ಕದಿಯುತ್ತಿದ್ದ. ಮಧ್ಯರಾತ್ರಿಯಲ್ಲಿ ಬೈಕ್ ನಲ್ಲಿ ಹೋಗಿ ಕೋಳಿ ಮತ್ತು ಬಾತು ಕೋಳಿಗಳ ಕಳ್ಳತನ ಮಾಡುತ್ತಿದ್ದ. ಆದರೆ ಊರಿನಲ್ಲಿ ಕೋಳಿಗಳು ಮಾಯವಾಗುತ್ತಿರುವುದನ್ನು ಗಮನಿಸಿದ ಅಲ್ಲಿನ ಜನರು ಸಿಸಿ ಕ್ಯಾಮರಾ ಅಳವಡಿಸಿದ್ದಾರೆ. ಈ ವಿಚಾರ ತಿಳಿಯದ ಶ್ರೀಮಂತ ಮತ್ತೆ ಕೋಳಿ ಕದಿಯಲು ಹೋದಾಗ ಸಿಕ್ಕಿ ಬಿದ್ದ. ಪೊಲೀಸರು ಆತನನ್ನು ಬಂಧಿಸಿದ್ದು, ಕದಿಯಲು ಹೋಗುತ್ತಿದ್ದಾಗ ಬಳಸುತ್ತಿದ್ದ ಬೈಕ್ ಮತ್ತು ಕೋಳಿಗಳನ್ನು ವಶ ಪಡಿಸಿಕೊಂಡಿದ್ದಾರೆ.

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ವೆನೆಜುವೆಲಾದಲ್ಲಿ ಒಂದು ಪ್ಯಾಕೆಟ್ ಕಾಂಡೋಮ್ ಬೆಲೆ ಎಷ್ಟು ಗೊತ್ತಾ?

ಅಮೇರಿಕಾ : ದಕ್ಷಿಣ ಅಮೆರಿಕಾದ ದ್ವೀಪ ರಾಷ್ಟ್ರ ವೆನೆಜುವೆಲಾದಲ್ಲಿ ಒಂದು ಪ್ಯಾಕೆಟ್ ಕಾಂಡೋಮ್ ಬೆಲೆ ...

news

‘ಸಿಎಂ ದೊಂಬರಾಟ ಮಾಡೋದನ್ನ ಬಿಡಲಿ ಎಂದ ಬಿಎಎಸ್ವೈ’

ಜಿಂದಾಲ್ ಗೆ ಭೂಮಿ ನೀಡುತ್ತಿರೋ ಸರ್ಕಾರ ಕಿಕ್ ಬ್ಯಾಕ್ ಪಡೆದುಕೊಂಡು ಭೂಮಿ ನೀಡುತ್ತಿದೆ ಎಂದು ಮೈತ್ರಿ ...

news

ಕನ್ನಡ ರಂಗಭೂಮಿಯ ಕರಾಳ ದಿನ: ಉಮಾಶ್ರೀ

ಕನ್ನಡ ರಂಗಭೂಮಿಯ ದಿಗ್ಗಜರಲ್ಲೊಬ್ಬರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡದ ಹಿರಿಯ ಸಾಹಿತಿ ಡಾ. ...

news

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇದ್ದಕ್ಕಿದ್ದಂತೆ ವಿಮಾನ ಪ್ರಯಾಣ ರದ್ದುಗೊಳಿಸಿದ ಪರಿಣಾಮ ...