ಮಾಜಿ ಪ್ರೇಯಸಿ ಮೇಲಿನ ಸಿಟ್ಟನ್ನು ಆಕೆ ಕೊಟ್ಟ ನಾಯಿಯ ಮೇಲೆ ತೀರಿಸಿಕೊಂಡ ಯುವಕ

ಕ್ಯಾಲಿಫೋರ್ನಿಯಾ, ಶುಕ್ರವಾರ, 14 ಸೆಪ್ಟಂಬರ್ 2018 (11:46 IST)

ಕ್ಯಾಲಿಪೋರ್ನಿಯಾ : ಗರ್ಲ್ ಫ್ರೆಂಡ್ ಬ್ರೇಕ್ ಅಪ್ ಮಾಡಿಕೊಂಡಳು ಎನ್ನುವ ಕೋಪಕ್ಕೆ ಆಕೆ ಉಡುಗೊರೆಯಾಗಿ ನೀಡಿದ್ದ ನಾಯಿಯನ್ನು ಕೊಂದ ಘಟನೆ  ಕ್ಯಾಲಿಪೋರ್ನಿಯಾದಲ್ಲಿ ನಡೆದಿದೆ.


24 ವರ್ಷದ ಪೀಕ್ ಎಂಬಾತ ಕೆಲ ದಿನಗಳ ಹಿಂದೆ ತನ್ನ ಪ್ರೇಯಸಿಯೊಂದಿಗೆ ಜಗಳವಾಡಿ ಬ್ರೇಕ್ ಅಪ್ ಮಾಡಿಕೊಂಡಿದ್ದ. ಆದರೆ ಆಕೆ ಉಡುಗೊರೆಯಾಗಿ ನೀಡಿದ್ದ ನಾಯಿ ಮಾತ್ರ ಈತನ ಬಳಿಯೇ ಇತ್ತು. ಹಳೇ ಗರ್ಲ್ ಫ್ರೆಂಡ್ ಗೆ ಪದೇ ಪದೇ ಕರೆ ಮಾಡಿ ನಾಯಿಯನ್ನು ತಗೆದುಕೊಂಡು ಹೋಗುವಂತೆ ಹೇಳಿದ್ದರೂ ಆಕೆ ಬಂದಿರಲಿಲ್ಲ.


ಆದರೆ ಒಂದು ದಿನ ಆ ನಾಯಿ ತಾನು ಸಾಕಿದ ನಾಯಿ ಮರಿಯ ಜೊತೆ ಕಿತ್ತಾಡಿಕೊಂಡಿದ್ದರಿಂದ, ಕೋಪಗೊಂಡ ಆತ  ಆ ನಾಯಿಯನ್ನು ಜೀವಂತವಾಗಿ ಹೂತು ಹಾಕಿದ್ದಾನೆ. ನಾಯಿಯನ್ನು ತನ್ನ ಅಪಾರ್ಟ್ಮೆಂಟ್ ನಲ್ಲಿ ಹೂತ್ತಿಟ್ಟ ಬಗ್ಗೆ ಮಾಜಿ ಪ್ರೇಯಸಿಗೆ ಹೇಳಿದಾಗಲೇ, ಪ್ರಕರಣ ಬೆಳಕಿಗೆ ಬಂದಿದೆ. ಈ  ವಿಷಯ ತಿಳಿಯುತ್ತಿದ್ದಂತೆ ಆಕೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಆತನನ್ನು ಪೊಲೀಸರು ಬಂಧಿಸಿದ್ದು, ನಂತರ ಆತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ಆದರೆ ಜಾಮೀನಿನ ಮೇಲೆ ಹೊರಬಂದಿರುವ ಈತನ ವಿರುದ್ಧ ಇದೀಗ, ಪ್ರಾಣಿ ಪ್ರಿಯರು ಸಾಮಾಜಿಕ ಜಾಲತಾಣದಲ್ಲಿ ವಾಗ್ದಾಳಿ ನಡೆಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

6 ವರ್ಷದ ಬಾಲಕಿಯ ಮೇಲೆ ಅಪ್ರಾಪ್ತ ಸಂಬಂಧಿಕನಿಂದ ಅತ್ಯಾಚಾರ; ಬಾಲಕಿಯ ಸ್ಥಿತಿ ಚಿಂತಾಜನಕ

ಭುವನೇಶ್ವರ್ : 6 ವರ್ಷದ ಬಾಲಕಿಯೊಬ್ಬಳು ಮನೆಯಲ್ಲಿ ಒಬ್ಬಳೇ ಇರುವುದನ್ನು ಕಂಡ ಆಕೆಯ 13 ವರ್ಷದ ...

news

ಮಗಳ ಮೇಲೆ ಪತಿ ಅತ್ಯಾಚಾರ ಮಾಡುವುದನ್ನು ಕಣ್ಣಾರೆ ನೋಡಿದ ಪತ್ನಿ

ಲಕ್ನೋ: ಪುತ್ರಿಯ ಮೇಲೆ ನಿರಂತರವಾಗಿ ಅತ್ಯಾಚಾರವೆಸಗುತ್ತಿದ್ದ ಪತಿಯ ವಿರುದ್ಧ ಪತ್ನಿ ಪೊಲೀಸರಿಗೆ ದೂರು ...

news

ರಾಷ್ಟ್ರಪ್ರಶಸ್ತಿ ಪಡೆದಿದ್ದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

ನವದೆಹಲಿ: ಅತ್ಯುತ್ತಮ ಶೈಕ್ಷಣಿಕ ಸಾಧನೆ ಮಾಡಿದ್ದಕ್ಕೆ ರಾಷ್ಟ್ರಪತಿಗಳಿಂದ ಪ್ರಶಸ್ತಿ ಪಡೆದಿದ್ದ 19 ವರ್ಷದ ...

news

ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಹೊಸ ಬೇಡಿಕೆ

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಂಬಂಧ ಚಟವಟಿಕೆಗಳು ಬಿರುಸಿನಿಂದ ಸಾಗಿದ್ದು, ನಾಯಕರು ತಮಗೆ ...

Widgets Magazine