ಬೌ..ಬೌ..! ಈ ನಾಯಿ ಮನುಷ್ಯರು ಮಾಡಬೇಕಾದ ಕೆಲಸ ಮಾಡುತ್ತದೆ!

ಬೀಜಿಂಗ್, ಶನಿವಾರ, 8 ಜುಲೈ 2017 (10:03 IST)

ಬೀಜಿಂಗ್: ಪರಿಸರವಾದಿಗಳು, ಕಾರ್ಯಕರ್ತರು ನಮ್ಮ ಸುತ್ತಮುತ್ತಲ ಪ್ರದೇಶ ಶುಚಿಯಾಗಿರಬೇಕು ಎಂದು ಏನೇನೋ ಕೆಲಸಗಳನ್ನು ಮಾಡುವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ನಾಯಿಯೂ ಆ ಕೆಲಸ ಮಾಡುತ್ತಿದೆ. ಅದೆಂಥಾ ನಾಯಿಯಪ್ಪಾ ಎನ್ನುತ್ತೀರಾ? ಇದನ್ನು ಓದಿ.


 
ಚೀನಾದ ಸುಝೋ ಎಂಬಲ್ಲಿ ನದಿಯೊಂದು ಇದೆ. ಇಲ್ಲಿಗೆ ನಿತ್ಯ ನೂರಾರು ಜನರು ಭೇಟಿ ನೀಡುತ್ತಾರೆ. ಆದರೆ ನಾಗರಿಕರು ಎನಿಸಿಕೊಂಡ ಮನುಷ್ಯರು ನೀರು ಕುಡಿದು ಬಾಟಲಿಗಳನ್ನು ಸಿಕ್ಕ ಸಿಕ್ಕ ಹಾಗೆ ನದಿಗೆ ಎಸೆದು ಅದನ್ನು ಮಲಿನಗೊಳಿಸುತ್ತಾರೆ. ಈ ನಾಯಿ ಆ ಬಾಟಲಿಗಳನ್ನು ತನ್ನ ಬಾಯಿಯಲ್ಲಿ ಕಚ್ಚಿ ಹೊರಗೆಳೆದು ತರುತ್ತದೆ!
 
ನಿತ್ಯ ಹೀಗೆ ಸುಮಾರು 20 ಬಾಟಲಿಗಳನ್ನು ನಾಯಿ ಬಾಯಿಯಲ್ಲಿ ಕಚ್ಚಿಕೊಂಡು ಬರುತ್ತದಂತೆ. ಅಷ್ಟೇ ಅಲ್ಲ, ನದಿ ತಟದಲ್ಲಿರುವ ಕಸದ ಬುಟ್ಟಿಗೆ ತಂದು ಹಾಕುತ್ತದಂತೆ. ಸಾಮಾನ್ಯವಾಗಿ ನಾಯಿಗಳು ನೀರಲ್ಲಿ ಈಜುವುದು ಕಡಿಮೆ. ಆದರೆ ಈ ನಾಯಿ ನೀರಿಗಿಳಿದು ತೇಲುತ್ತಿರುವ ಬಾಟಲಿಗಳನ್ನು ಎತ್ತಿ ತರುತ್ತದಂತೆ. ಹೀಗೇ ಕಳೆದ 10 ವರ್ಷಗಳಲ್ಲಿ ಈ ನಾಯಿ ಸುಮಾರು 20 ಸಾವಿರ ಬಾಟಲಿಗಳನ್ನು ಹೊರಗೆಳೆದು ತಂದಿರಬಹದು ಎಂದು ಅಂದಾಜಿಸಲಾಗಿದೆ. ಈ ಸೂಪರ್ ಡಾಗ್ ಸಾಹಸ ಇದೀಗ ಆನ್ ಲೈನ್ ನಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
 
ಇದನ್ನೂ ಓದಿ.. ಪ್ರೇಮಿ ಕೈಕೊಟ್ಟಾಗ ಮರೆಯೋದು ಹೇಗೆ?
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ನಾಯಿ ಪರಿಸರ ಸಂರಕ್ಷಣೆ ಚೀನಾ ನದಿ ಅಂತಾರಾಷ್ಟ್ರೀಯ ಸುದ್ದಿಗಳು Dog Save Nature China River International News

ಸುದ್ದಿಗಳು

news

‘ಅಣ್ಣನ ಮಗನನ್ನೇ ಬಿಡದ ಕುಮಾರಸ್ವಾಮಿ ನಮ್ಮನ್ನು ಬಿಡ್ತಾರಾ?’

ಬೆಂಗಳೂರು: ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಕಾರ್ಯಕ್ರಮವೊಂದರಲ್ಲಿ ...

news

ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಸಾವು: ಬಂಟ್ವಾಳ ಮತ್ತೆ ಉದ್ವಿಗ್ನ

ಮಂಗಳೂರು: ಮಂಗಳವಾರ ರಾತ್ರಿ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿದ್ದ ಆರ್ ಎಸ್ಎಸ್ ಕಾರ್ಯಕರ್ತ ಶರತ್ ...

news

ಕಲ್ಲಡ್ಕ ಪ್ರಭಾಕರ್‌ಗೆ ಇವತ್ತೇ ಕೊನೆಯ ದಿನ: ಫೇಸ್‌ಬುಕ್‌ನಲ್ಲಿ ಜೀವಬೆದರಿಕೆ

ಬಂಟ್ವಾಳ: ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್‌ಗೆ ಇವತ್ತೇ ಕೊನೆಯ ದಿನವಾಗಿದೆ ಎಂದು ಫೇಸ್‌ಬುಕ್‌ ...

news

ದಕ್ಷಿಣ ಕನ್ನಡ ಜಿಲ್ಲೆಯ 8 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲೇಬೇಕು: ವೇಣುಗೋಪಾಲ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ 8 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲೇಬೇಕು ಎಂದು ಕಾಂಗ್ರೆಸ್ ಪಕ್ಷದ ...

Widgets Magazine