ರಾಬಿನ್ ಉತ್ತಪ್ಪ ಬಿಟ್ಟು ದಿನೇಶ್ ಕಾರ್ತಿಕ್ ರನ್ನು ಕೆಕೆಆರ್ ಕ್ಯಾಪ್ಟನ್ ಮಾಡಿದ ಶಾರುಖ್ ಖಾನ್ ಹೇಳಿದ್ದೇನು?

ಮುಂಬೈ, ಮಂಗಳವಾರ, 6 ಮಾರ್ಚ್ 2018 (10:06 IST)

ಮುಂಬೈ: ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡಕ್ಕೆ ಹೊಸದಾಗಿ ದಿನೇಶ್ ಕಾರ್ತಿಕ್ ನಾಯಕರಾಗಿ ಆಯ್ಕೆಯಾಗಿದ್ದಾರೆ. ಈ ವರ್ಷದ ಐಪಿಎಲ್ ಆವೃತ್ತಿಯಲ್ಲಿ ಕಾರ್ತಿಕ್ ತಂಡದ ನೇತೃತ್ವ ವಹಿಸಲಿದ್ದಾರೆ.
 
ತಮಿಳುನಾಡು ಮೂಲದ ದಿನೇಶ್ ಕಾರ್ತಿಕ್ ರನ್ನು ಕೆಕೆಆರ್ 7.8 ಕೋಟಿ ರೂ.ಗೆ ಖರೀದಿ ಮಾಡಿತ್ತು. ಕರ್ನಾಟಕ ಮೂಲದ, ಇದೀಗ ಸೌರಾಷ್ಟ್ರ ಪರ ಆಡುವ ಮತ್ತು ದಿನೇಶ್ ಕಾರ್ತಿಕ್ ನಡುವೆ ನಾಯಕತ್ವಕ್ಕೆ ತೀವ್ರ ಪೈಪೋಟಿಯಿತ್ತು.
 
ಅಂತಿಮವಾಗಿ ಕಾರ್ತಿಕ್ ರನ್ನು ಆಯ್ಕೆ ಮಾಡಿದ ಬಳಿಕ ಮಾಲಿಕ ಶಾರುಖ್ ಖಾನ್ ತಮ್ಮ ಟ್ವಿಟರ್ ಪೇಜ್ ನಲ್ಲಿ ನೂತನ ನಾಯಕನಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ, ಹಿಂದಿನ ನಾಯಕ ಗೌತಮ್ ಗಂಭೀರ್ ರಂತೆ ನೀವೂ ತಂಡಕ್ಕೆ ಸ್ಪೂರ್ತಿಯಾಗಿ ಮುನ್ನಡೆಸುತ್ತೀರಿ ಎಂಬ ನಂಬಿಕೆಯಿದೆ ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಟೀ ಬ್ರೇಕ್ ವೇಳೆ ಡೇವಿಡ್ ವಾರ್ನರ್-ಕ್ವಿಂಟನ್ ಡಿ ಕಾಕ್ ನಡುವೆ ನಡೆಯಿತು ವಾರ್!

ಡರ್ಬನ್: ದ.ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವೆ ಡರ್ಬನ್ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯಲ್ಲಿ ...

news

ಕೆಎಲ್ ರಾಹುಲ್ ಗೆ ಇನ್ನೂ ಬೆಂಬಿಡದ ದುರಾದೃಷ್ಟ

ಕೊಲೊಂಬೋ: ಭಾರತ ಮತ್ತು ಶ್ರೀಲಂಕಾ, ಬಾಂಗ್ಲಾದೇಶದ ನಡುವೆ ತ್ರಿಕೋನ ಟಿ20 ಸರಣಿ ಇಂದಿನಿಂದ ...

news

ತ್ರಿಕೋನ ಸರಣಿಗೆ ಲಂಕಾಗೆ ಹಾರಿದ ಟೀಂ ಇಂಡಿಯಾ

ನವದೆಹಲಿ: ಶ್ರೀಲಂಕಾ ಮತ್ತು ಬಾಂಗ್ಲಾದೇಶವನ್ನೊಳಗೊಂಡ ತ್ರಿಕೋನ ಟಿ20 ಸರಣಿ ಆಡಲು ಟೀಂ ಇಂಡಿಯಾ ಶ್ರೀಲಂಕಾಗೆ ...

news

ಬಿಸಿಸಿಐ ಹುದ್ದೆಗೆ ಕನ್ನಡಿಗ ವೆಂಕಟೇಶ್ ಪ್ರಸಾದ್ ರಾಜೀನಾಮೆ ನೀಡಿದ್ದರ ಕಾರಣ ಬಯಲು!

ಬೆಂಗಳೂರು: ಭಾರತ ಅಂಡರ್ 19 ಕ್ರಿಕೆಟ್ ಆಯ್ಕೆ ಸಮಿತಿಗೆ ಕನ್ನಡಿಗ ಬೌಲರ್ ವೆಂಕಟೇಶ್ ಪ್ರಸಾದ್ ಮೊನ್ನೆಯಷ್ಟೇ ...

Widgets Magazine
Widgets Magazine