Widgets Magazine
Widgets Magazine

ಮಹಿಳಾ ಕ್ರಿಕೆಟ್ ನಲ್ಲೂ ಐಪಿಎಲ್ ಹವಾ?!

ಮುಂಬೈ, ಗುರುವಾರ, 27 ಜುಲೈ 2017 (09:12 IST)

Widgets Magazine

ಮುಂಬೈ: ವಿಶ್ವಕಪ್ ನಲ್ಲಿ ಭಾರತ ತಂಡದ ಸುಧಾರಿತ ಪ್ರದರ್ಶನ ನೋಡಿದ ಮೇಲೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪುರುಷರ ಕ್ರಿಕೆಟ್ ನಲ್ಲಿರುವಂತೆ ಮಹಿಳಾ ಕ್ರಿಕೆಟ್ ನಲ್ಲೂ ಐಪಿಎಲ್ ಗೆ ಚಾಲನೆ ನೀಡಲಿದೆಯೇ?


 
ಹಾಗೆ ನೀಡಿದ್ದರೆ ಒಳ್ಳೆಯದಿತ್ತು. ಆ ದಿನಗಳಿಗೂ ಹೆಚ್ಚು ದೂರವಿರಲಿಕ್ಕಿಲ್ಲ ಎಂದು ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ ಹೇಳಿಕೊಂಡಿದ್ದಾರೆ. ವಿಶ್ವಕಪ್ ಯಾತ್ರೆ ಮುಗಿಸಿ ಭಾರತಕ್ಕೆ ಬಂದಿಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಿಥಾಲಿ ರಾಜ್ ಮಹಿಳಾ ಕ್ರಿಕೆಟಿಗರಿಗೂ ಐಪಿಎಲ್ ಶುರು ಮಾಡಿದ್ದರೆ ಒಳ್ಳೆಯದಿತ್ತು ಎಂದಿದ್ದಾರೆ.
 
ಮಹಿಳಾ ಕ್ರಿಕೆಟ್ ನಲ್ಲೂ ಐಪಿಎಲ್ ಶುರು ಮಾಡಿದ್ದರೆ, ನಮ್ಮ ಎಷ್ಟೋ ಯುವ ಆಟಗಾರ್ತಿಯರಿಗೆ ಪ್ರತಿಭೆ ಪ್ರದರ್ಶಿಸಲು ವೇದಿಕೆ ಸಿಗುತ್ತಿತ್ತು. ಅಷ್ಟೇ ಅಲ್ಲದೆ, ವಿದೇಶಿ ಆಟಗಾರರೊಂದಿಗೆ ಆಡಿ ಅನುಭವ ಹೆಚ್ಚಿಸಿಕೊಳ್ಳುತ್ತಿದ್ದರು. ಈಗಿನ ಭಾರತ ತಂಡ ಕೆಲವು ವಿದೇಶಿ ಲೀಗ್ ನಲ್ಲಿ ಆಡಿದ ಕಾರಣಕ್ಕೆ ಇಷ್ಟೊಂದು ಸುಧಾರಿತ ಪ್ರದರ್ಶನ ನೀಡಲು ಸಾಧ್ಯವಾಗಿದೆ.
 
ಇದೇ ರೀತಿ ಐಪಿಎಲ್ ಶುರು ಮಾಡಿದರೆ ಅವರಿಗೆ ಇನ್ನಷ್ಟು ವೇದಿಕೆ ಸಿಗುತ್ತದೆ. ಹಿಂದೆ ನಾನು ಆಡಲು ಪ್ರಾರಂಭಿಸಿದ ಕಾಲಕ್ಕೆ ಹೋಲಿಸಿದರೆ ಈಗ ಭಾರತದಲ್ಲಿ ಮಹಿಳಾ ಕ್ರಿಕೆಟ್ ಗೆ ಪ್ರೋತ್ಸಾಹ ದಿನೇ ದಿನೇ ಹೆಚ್ಚಾಗುತ್ತಿದೆ. ಸೌಲಭ್ಯಗಳು ಸುಧಾರಿಸುತ್ತಿವೆ. ಹಾಗಾಗಿ ಮುಂದೊಂದು ದಿನ ಐಪಿಎಲ್ ಆರಂಭವಾದರೂ ಅಚ್ಚರಿಯೇನಲ್ಲ. ಎಲ್ಲದಕ್ಕೂ ಬಿಸಿಸಿಐ ನಿರ್ಧಾರ ಮಾಡಬೇಕು ಎಂದು ಮಿಥಾಲಿ ಅಭಿಪ್ರಾಯಪಟ್ಟಿದ್ದಾರೆ.
 
ಇದನ್ನೂ ಓದಿ..  ಯಾವ ಹೊತ್ತಿನಲ್ಲಿ ಸ್ನಾನ ಮಾಡುವುದು ಉತ್ತಮ ಗೊತ್ತಾ?
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಸ್ಫೋಟಕ ಶತಕದ ಹಿಂದಿನ ನೋವಿನ ಕಥೆ ಬಿಚ್ಚಿಟ್ಟ ಶಿಖರ್ ಧವನ್

ಟೀಮ್ ಇಂಡಿಯಾ ಟೆಸ್ಟ್ ತಂಡದಿಂದ ಕೈಬಿಟ್ಟಿದ್ದು, ನನಗೆ ತುಂಬಾ ನೋವುಂಟು ಮಾಡಿತ್ತು. ಆದರೆ, ಟೆಸ್ಟ್ ...

news

ಧವನ್ ಸ್ಫೋಟಕ ಶತಕ, ಪೂಜಾರ ತಾಳ್ಮೆಯ ಸೆಂಚುರಿ: ಗಾಲೆ ಟೆಸ್ಟ್`ನಲ್ಲಿ ಭಾರತ ಮೇಲುಗೈ

ಗಾಲೆಯಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಭಾರತ ತಂಡ ...

news

ಎಡವಟ್ಟು ಮಾಡಿ ಯುವರಾಜ್ ಸಿಂಗ್ ರಿಂದ ನಗೆಪಾಟಲಿಗೀಡಾದ ಶಿಖರ್ ಧವನ್

ಕೊಲೊಂಬೋ: ಒಪೊ ಮೊಬೈಲ್ ಕಂಪನಿ ಟೀಂ ಇಂಡಿಯಾ ಪ್ರಾಯೋಜಕತ್ವ ವಹಿಸಿಕೊಂಡ ಮೇಲೆ ಇದೇ ಮೊದಲ ಬಾರಿಗೆ ಟೆಸ್ಟ್ ...

news

ಮುಂಬೈ ಏರ್ ಪೋರ್ಟ್ ನಿಂದ ಹೊರಬರಲು ಕಷ್ಟಪಟ್ಟ ಮಿಥಾಲಿ ರಾಜ್ ಮತ್ತು ಬಳಗ

ಮುಂಬೈ: ಮಹಿಳಾ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ತೆರಳುವಾಗ ಭಾರತ ತಂಡ ಹೋಗಿದ್ದೂ ಯಾರಿಗೂ ಗೊತ್ತಾಗಲೇ ಇಲ್ಲ. ...

Widgets Magazine Widgets Magazine Widgets Magazine