200 ರೂ. ನೋಟು ಬಿಡುಗಡೆ: ಎಟಿಎಂಗಳಲ್ಲಿ ಸದ್ಯ ಸಿಗಲ್ಲ

ನವದೆಹಲಿ, ಶುಕ್ರವಾರ, 25 ಆಗಸ್ಟ್ 2017 (13:00 IST)

Widgets Magazine

ರಿಸರ್ವ್ ಬ್ಯಾಂಕ್ ಇಂಡಿಯಾ ಗೋಷಿಸಿದಂತೆ ಇಂನಿಂದ 200 ರೂ. ಮುಖಬೆಲೆಯ ನೋಟುಗಳನ್ನ ಚಲಾವಣೆಗೆ ತರುತ್ತಿದೆ. ಹೊಸ ನೋಟಿನ ಆಸೆಯಲ್ಲಿ ಎಟಿಎಂಗೆ ಹೋದರೆ ನಿರಾಸೆಯಾಗಬಹುದು.  


ಯಾಕೆಂದರೆ, ದೇಶದ ಬಹುತೇಕ ಕಡೆ ಇವತ್ತು ಸರ್ಕಾರಿ ರಜೆ ಇರುವುದರಿಂದ ಬ್ಯಾಂಕ್`ಗಳಿಗೆ ಹೊಸ ನೋಟುಗಳ ಸರಬರಾಜು ಆಗಿರುವುದಿಲ್ಲ. ಆದರೂ ಗಣೇಶ ಹಬ್ಬದ ವಿಶೇಷ ದಿನ ಹೊಸ ನೋಟನ್ನ ಲಾಂಚ್ ಮಾಡಲಾಗುತ್ತಿದೆ. ದೇಶಾದ್ಯಂತ 2 ಲಕ್ಷಕ್ಕೂ ಅಧಿಕ ಎಟಿಎಂ ಮೆಶಿನ್ ಇರುವುದರಿಂದ ಅವುಗಳನ್ನ ರೀಕ್ಯಾಲಿಬ್ರೇಟ್ ಮಾಡಬೇಕಿದೆ. ಹೀಗಾಗಿ, ಕೊನೆ ಪಕ್ಷ ಹೊಸ ನೋಟು ಎಟಿಎಂಗಳಲ್ಲಿ ಸಿಗಲು ಒಂದು ವಾರವಾದರೂ ಬೇಕಿದೆ, ಬ್ಯಾಂಕ್`ಗಳಲ್ಲಿ ಎರಡ್ಮೂರು ದಿನಗಳಲ್ಲಿ ಹೊಸ ನೋಟು ಸಿಗಬಹುದು.
ನೋಟಿನಲ್ಲಿ ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ಸಹಿ ಜೊತೆ ಸಾಂಚಿ ಸ್ತೂಪದ ಚಿತ್ರ, ದೇಶದ ಸಂಸ್ಕೃತಿ ಬಿಂಬಿಸುವ ಚಿತ್ರದ ವಿಶಿಷ್ಟ ಲಕ್ಷಣದ ಜೊತೆ ಬ್ರೈಟ್ ಹಳದಿ ಬಣ್ಣ ಒಳಗೊಂಡಿರುತ್ತದೆ.

ಕಳೆದ ಮಾರ್ಚ್ ತಿಂಗಳಲ್ಲೇ ಹಣಕಾಸು ಇಲಾಖೆಯ ಅನುಮತಿ ಪಡೆದು ರಿಸರ್ವ್ ಬ್ಯಾಂಕ್ 200 ರೂ. ನೋಟು ಬಿಡುಗಡೆಗೆ ಸಿದ್ಧತೆ ನಡೆಸಿದೆ. ನೋಟಿನಲ್ಲಿ ಹಲವು ಭದ್ರತಾ ಲಕ್ಷಣಗಳನ್ನ ಒಳಪಡಿಸಲಾಗಿದ್ದು,ಹಲವು ಪರೀಕ್ಷೆಗೆ ಒಳಪಡಿಸಲಾಗಿದೆ.

ನವೆಂಬರ್`ನಲ್ಲಿ ಪ್ರಧಾನಿ ನರೇಂದ್ರಮೊದಿ ನೋಟ್ ಬ್ಯಾನ್ ಘೋಷಣೆ ಮಾಡಿದ ಬಳಿಕ ರಿಸರ್ವ್ ಬ್ಯಾಂಕ್ ಘೋಷಿಸಿದ 4ನೇ ಹೊಸ ನೋಟು ಇದಾಗಿದ್ದು, ನೋಟ್ ಬ್ಯಾನ್ ಬಳಿಕ ಉಂಟಾಗಿರುವ ಚಿಲ್ಲರೆ ಸಮಸ್ಯೆಗೆ ಈ ಹೊಸ ನೋಟು ಪರಿಹಾರ ನೀಡಲಿದೆ ಎನ್ನಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ವ್ಯವಹಾರ

news

ನಾಳೆಯೇ ಗ್ರಾಹಕರ ಕೈ ಸೇರಲಿದೆ 200 ರೂ. ನೋಟು

ಹಲವು ದಿನಗಳಿಂದ ಎದ್ದಿರುವ 200 ರೂ. ನೋಟಿನ ಕುರಿತಾದ ಊಹಾಪೋಹಕ್ಕೆ ನಾಳೆ ತೆರೆ ಬೀಳಲಿದೆ. ನೋಟು ಬಿಡುಗಡೆಗೆ ...

news

ರಿಲಯನ್ಸ್ ಜಿಯೋ ಫೋನ್ ಬುಕ್ಕಿಂಗ್ ಇಂದಿನಿಂದ ಆರಂಭ.. ಬುಕ್ ಮಾಡುವುದು ಹೇಗೆ ಗೊತ್ತಾ..?

ರಿಲಯನ್ಸ್ ಕಂಪನಿ ಮುಖ್ಯಸ್ಥ ಮುಖೇಶ್ ಅಂಬಾನಿ ಜುಲೈ 21ರಂದು ಕಂಪನಿಯ 40ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ...

news

ಸದ್ಯದಲ್ಲೇ ಬರಲಿದೆ ಹೊಸ 200 ರೂ. ನೋಟು: ಹಣಕಾಸು ಇಲಾಖೆ

ಹಲವು ಊಹಾಪೋಹಗಳ ಬಳಿಕ ಕೊನೆಗೂ 200 ರೂಪಾಯಿ ನೋಟು ಬರಲಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. 200 ...

news

ರಿಲಯನ್ಸ್ ಆಯ್ತು ಇದೀಗ ಏರ್ ಟೆಲ್ ನಿಂದ ಅಗ್ಗದ 4 ಜಿ ಸ್ಮಾರ್ಟ್ ಫೋನ್?!

ಮುಂಬೈ: ರಿಲಯನ್ಸ್ ಜಿಯೋ ಸಂಸ್ಥೆ ಅಗ್ಗದ ದರದಲ್ಲಿ 4 ಜಿ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿರುವುದು ಇತರ ...

Widgets Magazine