ಇಂದಿನಿಂದ ಐದು ದಿನಗಳ ಕಾಲ ಬ್ಯಾಂಕುಗಳಿಗೆ ರಜೆ

ನವದೆಹಲಿ, ಶುಕ್ರವಾರ, 21 ಡಿಸೆಂಬರ್ 2018 (07:39 IST)

ನವದೆಹಲಿ : ಸರ್ಕಾರಿ ರಜೆ ಹಾಗೂ ರಾಷ್ಟ್ರವ್ಯಾಪಿ ಬ್ಯಾಂಕ್ ನೌಕರರ ಮುಷ್ಕರದ  ಹಿನ್ನಲೆಯಲ್ಲಿ ಇಂದಿನಿಂದ ಐದು ದಿನಗಳ ಕಾಲ ಬ್ಯಾಂಕುಗಳ ಬಾಗಿಲು ಮುಚ್ಚಲಿದೆ.


ಡಿಸೆಂಬರ್ 21ರಿಂದ 26ರ ವರೆಗೆ ಅದರಲ್ಲಿ ಡಿಸೆಂಬರ್ 24 ರಂದು ಹೊರತುಪಡಿಸಿ ಉಳಿದ ಐದು ದಿನಗಳ ಕಾಲ ರಾಷ್ಟ್ರವ್ಯಾಪಿ ಬ್ಯಾಂಕ್ ನೌಕರರ ಮುಷ್ಕರ ಹಾಗೂ ಹಬ್ಬದ ಹಿನ್ನೆಲೆಯಲ್ಲಿ ಬ್ಯಾಂಕುಗಳಿಗೆ ರಜೆ ಇರಲಿದೆ. ಸರಣಿ ರಜೆಗಳಿಂದಾಗಿ ಎಟಿಎಂಗಳಲ್ಲಿ ನಗದು ಕೊರತೆ ಉಂಟಾಗುವ ಸಂಭವ ಹೆಚ್ಚಿದೆ.


ವೇತನ ಪರಿಷ್ಕರಣೆ ಹಾಗು ವಿವಿಧ ಬೇಡಿಕೆ ಈಡೇರಿಕೆಗಾಗಿ ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ ಡಿಸೆಂಬರ್ 21ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಹಾಗೇ ಡಿಸೆಂಬರ್ 22ರಂದು ನಾಲ್ಕನೇ ಶನಿವಾರವಾದ್ದರಿಂದ ಬ್ಯಾಂಕುಗಳಿಗೆ ರಜೆ ಇರಲಿದೆ. ಡಿಸೆಂಬರ್ 23ರಂದು ಭಾನುವಾರದ ರಜೆ ಇದೆ.


ಡಿಸೆಂಬರ್ 24ರಂದು ಸೋಮವಾರ ಬ್ಯಾಂಕುಗಳು ಕಾರ್ಯ ನಿರ್ವಹಿಸಲಿವೆ. ಆದರೆ ಡಿಸೆಂಬರ್ 25ರಂದು ಕ್ರಿಸ್ಮಸ್ ಹಬ್ಬದ ರಜೆ ಇದೆ. ಡಿಸೆಂಬರ್ 26 ರಂದು ಬ್ಯಾಂಕ್ ಒಕ್ಕೂಟಗಳ ಮಹಾವೇದಿಕೆ ಮುಷ್ಕರಕ್ಕೆ ಕರೆ ನೀಡಿದ ಕಾರಣ ಅಂದು ಕೂಡ ಬ್ಯಾಂಕುಗಳಿಗೆ ರಜೆ ಘೋಷಿಸಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಅಗತ್ಯವಿಲ್ಲದ ಕಡೆ ಆಧಾರ ಕಾರ್ಡ್ ಕೇಳುವ ಕಂಪೆನಿಗಳಿಗೆ ಜೈಲುಶಿಕ್ಷೆ ವಿಧಿಸಲು ಮುಂದಾದ ಕೇಂದ್ರ ಸರ್ಕಾರ

ನವದೆಹಲಿ : ಇನ್ನುಮುಂದೆ ಕಂಪನಿಗಳೇನಾದರೂ ಆಧಾರ್​ ನೀಡಬೇಕೆಂದು ಒತ್ತಾಯಿಸಿದ್ದಲ್ಲಿ ಅಂತವರಿಗೆ 1 ಕೋಟಿ ...

news

ವಾಜಪೇಯಿ ಸ್ಮರಣಾರ್ಥವಾಗಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ 100 ರೂಪಾಯಿ ನಾಣ್ಯ

ನವದೆಹಲಿ : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮರಣಾರ್ಥವಾಗಿ ಶೀಘ್ರದಲ್ಲೇ 100 ರೂಪಾಯಿ ನಾಣ್ಯ ...

news

ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಆರ್ ಬಿಐನ ಗವರ್ನರ್ ಹಾಗೂ ಉಪ ಗವರ್ನರ್

ನವದೆಹಲಿ : ಆರ್ ಬಿಐನ ಗವರ್ನರ್ ಊರ್ಜಿತ್ ಪಟೇಲ್ ಹಾಗೂ ಉಪ ಗವರ್ನರ್ ವಿರಾಲ್ ಆಚಾರ್ಯ ಅವರು ತಮ್ಮ ...

news

ಡಿಸೆಂಬರ್ ತಿಂಗಳ ಈ ಎರಡು ದಿನ ಬ್ಯಾಂಕ್ ಬಂದ್ ನಡೆಯುವ ಸಾಧ್ಯತೆ ಇದೆ

ನವದೆಹಲಿ : ಡಿಸೆಂಬರ್ 21 ಹಾಗೂ 26ರಂದು ಬ್ಯಾಂಕ್ ಬಂದ್ ನಡೆಯುವ ಸಾಧ್ಯತೆ ಇದೆ ಎಂಬುದಾಗಿ ತಿಳಿದುಬಂದಿದೆ.