ಗೋಡೆಗೆ ಡಿಕ್ಕಿ ಹೊಡೆದ ಮೆಟ್ರೋ ರೈಲು

ನವದೆಹಲಿ, ಬುಧವಾರ, 20 ಡಿಸೆಂಬರ್ 2017 (14:46 IST)

ಮೆಜೆಂತಾ ಲೈನ್ ಅನ್ನು ಕಾರ್ಯಗತಗೊಳಿಸಲು ಮಂಗಳವಾರದಂದು ಪರೀಕ್ಷಾರ್ಥವಾಗಿ ಸಂಚಾರಕ್ಕೆ ಚಾಲಕ ರಹಿತವಾಗಿ ಹಳಿ ಮೇಲೆ ಇಳಿದ ದೆಹಲಿ ಮೆಟ್ರೋ ರೈಲು ಕಳಿಂದಿ ಕುಂಜ್ ಮೆಟ್ರೊ ನಿಲ್ದಾಣದಲ್ಲಿ ತಡೆಗೋಡೆಗೆ ಗುದ್ದಿ ಸ್ವಲ್ಪ ಹೊತ್ತು ಆತಂಕದ ವಾತಾವರಣ ಸೃಷ್ಟಿಸಿತ್ತು. ಯಾವುದೇ ಅನಾಹುತಗಳು ಸಂಭವಿಸಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಡಿಸೆಂಬರ್ 25 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬೊಟಾನಿಕಲ್ ಗಾರ್ಡನ್ ಮತ್ತು ಕಲ್ಕಾ ಜಿ ನಡುವಿನ ಮಾರ್ಗವನ್ನು ಉದ್ಘಾಟಿಸಲಿದ್ದಾರೆ.
 
ಇದು ಚಾಲಕ ರಹಿತವಾಗಿ ಚಾಲನೆಯಾಗುವ ಮೊದಲ ಮೆಟ್ರೊ ರೈಲು ಮಾರ್ಗವಾಗಿದೆ ಹಾಗೂ ಇದು ದೇಶದಲ್ಲಿ ಮೊದಲನೆಯದ್ದಾಗಿದೆ. ಆದಾಗ್ಯೂ, ಇದೇ ಮಾರ್ಗದಲ್ಲಿ ಪರೀಕ್ಷಾರ್ಥ ಸಂಚಾರದ ಸಮಯದಲ್ಲಿ ಸಂಭವಿಸಿದ ಏರಡನೇ ಮೆಟ್ರೊ ರೈಲು ಇದಾಗಿದೆ. ಸೋಮವಾರದಂದು, ಧೌಲಾ ಕುವಾನ್ ಮತ್ತು ದಕ್ಷಿಣ ಕ್ಯಾಂಪಸ್ ಮೆಟ್ರೊ ನಿಲ್ದಾಣದ ಪಿಂಕ್ ಲೈನ್‌ನ ನಡುವಿನ ಇನ್ನೊಂದು ಪರೀಕ್ಷಾರ್ಥ ಸಂಚಾರದ ಮೆಟ್ರೊ ರೈಲು ಹಳಿತಪ್ಪಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಜಿಎಸ್‌ಟಿ ತೆರಿಗೆ ಪಾವತಿ ಬಗ್ಗೆ ನಿಮಗೆಷ್ಟು ಗೊತ್ತು?

ನವದೆಹಲಿ: ಹೊಸ ತೆರಿಗೆ ಆಡಳಿತದ ಐಟಿ ಬೆನ್ನೆಲುಬಾಗಿರುವ ಸರಕು ಮತ್ತು ಸೇವೆಗಳ ತೆರಿಗೆ ಜಾಲವು ...

news

ವೊಡಾಫೋನ್ 4ಜಿ ಸ್ಮಾರ್ಟ್‌ಫೋನ್‌ ಇದೀಗ ಕೇವಲ 1,590 ರೂ.

ಮುಂಬೈ: ವೊಡಾಫೋನ್ ಮತ್ತು ಇಟೆಲ್ ಆರಂಭಿಕ ಹಂತದ 4ಜಿ ಸ್ಮಾರ್ಟ್‌ಫೊನ್‌ ಅನ್ನು ಪ್ರಾರಂಭಿಸಿವೆ, ಇದು A20 ...

news

ವಾವ್..! ಏರ್ ಟೆಲ್, ವೊಡಾಫೋನ್ 1 ಜಿಬಿ ಡಾಟಾ ಇಷ್ಟು ಅಗ್ಗವಾಯ್ತೇ?!

ನವದೆಹಲಿ: ಟೆಲಿಕಾಂ ಸಂಸ್ಥೆಗಳು ಪೈಪೋಟಿಗಿಳಿದು ಕಡಿಮೆ ದರದಲ್ಲಿ ಗ್ರಾಹಕರಿಗೆ ಅಗ್ಗದ ದರದಲ್ಲಿ ಡೇಟಾ ...

news

ಇನ್‌ಫೋಕಸ್ ವಿಷನ್ 3 ಮೊಬೈಲ್ ಮಾರುಕಟ್ಟೆಗೆ: ಆನ್‌ಲೈನ್‌ನಲ್ಲಿ ಮಾತ್ರ ಮಾರಾಟ

ಅಮೆರಿಕಾ ಮೂಲದ ಕಂಪನಿಯಾದ ಇನ್‌ಫೋಕಸ್ ಸಂಸ್ಥೆಯು ತನ್ನ ನೂತನ ಮೊಬೈಲಾದ ಇನ್‌ಫೋಕಸ್ ವಿಷನ್ 3 ಅನ್ನು ...

Widgets Magazine
Widgets Magazine