ಫ್ಲಿಪ್‌ಕಾರ್ಟ್‌ನಲ್ಲಿ ಶೇ.20-30ರಷ್ಟು ನೇಮಕಾತಿ ಹೆಚ್ಚಳ

New Delhi, ಸೋಮವಾರ, 6 ಮಾರ್ಚ್ 2017 (08:50 IST)

ಪ್ರಮುಖ ಇ-ಕಾಮರ್ಸ್ ದಿಗ್ಗಜ ಬೆಂಗಳೂರು ಮೂಲದ ಫ್ಲಿಪ್‌ಕಾರ್ಟ್ ಕಂಪೆನಿ ಈ ವರ್ಷ ಶೇ.20-30ರಷ್ಟು ಹೆಚ್ಚಿನ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದೆ ಎಂದು ತಿಳಿಸಿದೆ. ಆದರೆ ಇನ್ನೊಂದು ಇ-ಕಾಮರ್ಸ್ ಕಂಪೆನಿ ಸ್ನ್ಯಾಪ್ ಡೀಲ್ ಉದ್ಯೋಗ ಕಡಿತಕ್ಕೆ ಮುಂದಾಗಿದೆ.
 
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಫ್ಲಿಪ್‌ಕಾರ್ಟ್ ಹೆಚ್ಚಿನ ನೇಮಕಾತಿ ಮಾಡಿಕೊಳ್ಳಲಿದೆ. ಕಳೆದ ವರ್ಷ 1,500 ಉದ್ಯೋಗಿಗಳನ್ನು ನೇಮಿಸಿಕೊಂಡಿತ್ತು. ಹಬ್ಬಗಳ ಸಂದರ್ಭದಲ್ಲಿ ಹೆಚ್ಚಿನ ವ್ಯವಹಾರ ನಡೆಸುವ ಸಲುವಾಗಿ 10,000 ತಾತ್ಕಾಲಿಕ ಸಿಬ್ಬಂದಿಯನ್ನು ನೇಮಿಸಿಕೊಂಡಿತ್ತು. 
 
ಫ್ಲಿಪ್‌ಕಾರ್ಟನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುತ್ತಿದ್ದೇವೆ. ಈ ನಿಟ್ಟಿನಲ್ಲಿ ಪ್ರತಿಭಾವಂತರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ ಎಂದಿದ್ದಾರೆ ಕಂಪೆನಿ ಸಿಇಓ ನಿತಿನ್ ಸೇಠ್. ಅಮೆರಿಕದ ಅಮೆಜಾನ್ ಜತೆಗೆ ಫ್ಲಿಪ್‌ಕಾರ್ಟ್ ಸ್ಪರ್ಧೆಗೆ ಇಳಿದಿರುವುದು ಗೊತ್ತೇ ಇದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ರೂ.30 ಸಾವಿರ ತಲುಪಿದ ಬಂಗಾರದ ಬೆಲೆ

ದೇಶೀಯ ಮತ್ತು ಅಂತಾರಾಷ್ಟ್ರೀಯವಾಗಿ ಬೇಡಿಕೆ ಇಲ್ಲದ ಕಾರಣ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಳಿಮುಖವಾಗಿದ್ದು ...

news

ರೂ.345ಕ್ಕೆ 28 ಜಿಬಿ ಡಾಟಾ ನೀಡಲಿರುವ ಏರ್‌ಟೆಲ್

ಟೆಲಿಕಾಂ ಕ್ಷೇತ್ರದಲ್ಲಿ ವಿವಿಧ ಆಫರ್‌ಗಳನ್ನು ಪ್ರಕಟಿಸುತ್ತಾ ಸಂಚಲನ ಸೃಷ್ಟಿಸುತ್ತಿರುವ ಜಿಯೋಗೆ ಪೈಪೋಟಿ ...

news

ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಫ್ಲಿಪ್‍ಕಾರ್ಟ್ ಟಾಪ್

ಭಾರತದ ಅತಿದೊಡ್ದ ಆನ್‌ಲೈನ್ ರೀಟೇಲ್ ಕಂಪೆನಿ ಫ್ಲಿಪ್‌ಕಾರ್ಟ್ ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಸಿಂಹಪಾಲನ್ನು ...

news

ಸದ್ಯಸ್ಯರಿಗೆ ಹೆಚ್ಚುವರಿ 5ಜಿಬಿ ಡಾಟಾ: ರಿಲಯನ್ಸ್ ಜಿಯೋ

ರೂ.99ಕ್ಕೆ ವಾರ್ಷಿಕ ಸದಸ್ಯತ್ವವ ಪಡೆದು ತಿಂಗಳಿಗೆ ರೂ.303 ರೀಚಾರ್ಜ್ ಮಾಡಿಕೊಳ್ಳುವವರಿಗೆ ಹೆಚ್ಚುವರಿ ...

Widgets Magazine