ಗಗನಕ್ಕೇರಿದ ಬಂಗಾರದ ಬೆಲೆ

ಮುಂಬೈ, ಮಂಗಳವಾರ, 5 ಸೆಪ್ಟಂಬರ್ 2017 (09:52 IST)

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಏರುಗತಿಯಲ್ಲಿ ಸಾಗಿದೆ. ಸೋಮವಾರ ಚಿನಿವಾರಪೇಟೆಯಲ್ಲಿ ಪ್ರತೀ 10 ಗ್ರಾಂ ಬಂಗಾರದ ಬೆಲೆ 30,600 ರೂ. ದಾಖಲಾಗಿದೆ. ಶುಕ್ರವಾರದ ವಹಿವಾಟಿನಲ್ಲಿ  29,755 ರೂ. ಇದ್ದ 10 ಗ್ರಾಂ ಬಂಗಾರದ ಬೆಲೆ ದಿಢೀರ್ ಏರಿಕೆ ಕಂಡಿದೆ. ವರ್ಷಾರಂಭದಲ್ಲಿ 28,000 ರೂ. ನಷ್ಟಿದ್ದ 10 ಗ್ರಾಂ ಬಂಗಾರದ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.


ಇತ್ತ, ಬೆಳ್ಳಿ ಬೆಲೆಯಲ್ಲೂ 200 ರೂ. ಏರಿಕೆ ಕಂಡಿದದ್ದು, ಕೆ.ಜಿ ಬಂಗಾರಕ್ಕೆ 41,700 ರೂ. ಬೆಲೆ ದಾಖಲಾಗಿದೆ. ಆಮದು ಸುಂಕ ಮತ್ತು ಅಮೆರಿಕನ್ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯದ ೇರಿಳಿತವೂ ಬಂಗಾರದ ಬೆಲೆ ಏರಿಕೆಗೆ ಕಾರಣ ಎನ್ನಲಾಗುತ್ತಿದೆ.

ಅಮೆರಿಕ ಮತ್ತು ಉತ್ತರ ಕೊರಿಯಾ ನಡುವೆ ಏರ್ಪಟ್ಟಿರುವ ಪ್ರಕ್ಷುಬ್ಧ ವಾತಾವರಣದಿಂದಾಗಿ ಡಾಲರ್ ಬೇಡಿಕೆ ಏರಿಳಿತದಿಂದಾಗಿಯೂ ಬಂಗಾರದ ದರದ ಮೇಲೆ ಪರಿಣಾಮ ಬೀರುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ, ಭಾರತಕ್ಕೆ ಬೇಡಿಕೆಗೆ ತಕ್ಕಂತೆ ಬಂಗಾರದ ಆಮದು ಮಾತ್ರ ನಡೆಯುತ್ತಲೇ ಇದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಸದ್ಯಕ್ಕೆ ನಿಮಗೆ 200 ನೋಟು ಭಾಗ್ಯವಿಲ್ಲ!

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗಷ್ಟೇ 200 ರೂ. ನೋಟುಗಳನ್ನು ಬಿಡುಗಡೆ ಮಾಡಿತ್ತು. ಆದರೆ ...

news

ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಹೆಚ್ಚಳ

ನವದೆಹಲಿ: ಪ್ರಸಕ್ತ ವರ್ಷಾಂತ್ಯಕ್ಕೆ ಸಬ್ಸಿಡಿಯನ್ನು ಅಂತ್ಯಗೊಳಿಸಲು ಪ್ರತಿ ತಿಂಗಳು ಅಡುಗೆ ಅನಿಲ ದರ ...

news

ಕಾರು ಖರೀದಿದಾರರಿಗೆ ಕಾದಿದೆ ಶಾಕ್

ನವದೆಹಲಿ: ಕಾರು ಖರೀದಿ ಮಾಡಬೇಕೆಂದುಕೊಂಡಿದ್ದೀರಾ? ಹಾಗಿದ್ದರೆ ನಿಮಗೊಂದು ಶಾಕ್ ನೀಡಲು ಕೇಂದ್ರ ಸರ್ಕಾರ ...

news

ನೋಟ್ ಬ್ಯಾನ್ ಬಳಿಕ ಶೇ.99ರಷ್ಟು ಹಳೇ ನೋಟುಗಳು ವಾಪಸ್: ಮೋದಿ ಪ್ಲಾನ್ ಸಕ್ಸಸ್ ಆಯ್ತಾ..?

ಭಯೋತ್ಪಾದನೆ ಮತ್ತು ಕಪ್ಪು ಹಣ ತಡೆ ದೃಷ್ಟಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೈಗೊಂಡಿದ್ದ 500 ಮತ್ತು ...

Widgets Magazine