ಗೂಗಲ್ ಪಿಕ್ಸೆಲ್ ಮೇಲೆ ಭಾರಿ ರಿಯಾಯಿತಿ!

New Delhi, ಬುಧವಾರ, 8 ಫೆಬ್ರವರಿ 2017 (11:23 IST)

ಆಪೆಲ್, ಸ್ಯಾಮ್‍ಸಂಗ್‌ ಕಂಪೆನಿಗಳಿಗೆ ಪ್ರತಿಸ್ಪರ್ಧಿಯಾಗಿ ಮಾರುಕಟ್ಟೆಗೆ ಬಂದ ಗೂಗಲ್ ಪಿಕ್ಸೆಲ್ ಸ್ಮಾರ್ಟ್‌ಫೋನ್ ಮೇಲೆ ಫ್ಲಿಪ್‍ಕಾರ್ಟ್ ಭಾರಿ ರಿಯಾಯಿತಿ ಘೋಷಿಸಿದೆ. ಸುಮಾರು ರೂ.26 ಸಾವಿರದಷ್ಟು ದರ ಕಡಿಮೆ ಮಾಡಿದೆ. 32 ಜಿಗಿ ವೇರಿಯಂಟ್ ಬೆಲೆ ರೂ.57 ಸಾವಿರ ಇದ್ದು, ರಿಯಾಯಿತಿ ಮೂಲಕ ರೂ.28 ಸಾವಿರಕ್ಕೇ ಫೋನ್ ಸಿಗಲಿದೆ ಎಂದು ಫ್ಲಿಪ್‍ಕಾರ್ಟ್ ತಿಳಿಸಿದೆ.
 
ಸಿಟಿ ಬ್ಯಾಂಕ್ ಕ್ರೆಡಿಟ್ ಕಾರ್ಡ್, ಎಕ್ಸೇಂಜ್ ಆಫರ್ ಮೂಲಕ ಫೋನ್ ಕೊಂಡುಕೊಳ್ಳುವವರಿಗೆ ಈ ಆಫರ್ ಅನ್ವಯಿಸಲಿದೆ. ಕ್ರೆಡಿಟ್ ಕಾರ್ಡ್ ಮೂಲಕ ಇಎಂಐಯನ್ನು ನೇರವಾಗಿ ಸಲ್ಲಿಸುವವರಿಗೆ ರೂ.9 ಸಾವಿರ ಕ್ಯಾಶ್‌ಬ್ಯಾಕ್ ಆಫರ್ ಸಹ ಇದೆ. ಮೊಬೈಲ್ ಕೊಂಡುಕೊಂಡ 90 ದಿನಗಳಲ್ಲಿ ಈ ಕ್ಯಾಶ್‍ಬ್ಯಾಕ್ ಖಾತೆಗೆ ಜಮೆ ಆಗಲಿದೆ.
 
ಒಂದು ಕಾರ್ಡ್‌ನ್ನು ಒಮ್ಮೆ ಮಾತ್ರ ಬಳಸಿ ಕೊಂಡುಕೊಳ್ಳಲು ಸಾಧ್ಯ. ಇನ್ನು ಎಕ್ಸೇಂಜ್ ಮೂಲಕ ಕೊಳ್ಳುವವರಿಗೆ ಫೋನ್ ಆಧಾರದ ಮೇಲೆ ರೂ.20 ಸಾವಿರವರೆಗೂ ರಿಯಾಯಿತಿ ಸಿಗಲಿದೆ. ಒಟ್ಟು ರೂ.29 ಸಾವಿರ ಎನ್ನಬಹುದು. ಇದೇ ಆಫಾರ್ 128 ಜಿಬಿ ವೇರಿಯಂಟ್ ಫೋನ್‌ಗೂ ಅನ್ವಯಿಸಲಿದೆ. ಈ ಮಾಡೆಲ್ ಬೆಲೆ ರೂ.66 ಸಾವಿರ ಇದ್ದು, ರಿಯಾಯಿತಿ ಕಳೆದು ರೂ.37 ಸಾವಿರಕ್ಕೆ ಲಭ್ಯವಾಗಲಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಐಫೋನ್‌ ಕಂಪೆನಿಗೆ ಯಾವುದೇ ರಿಯಾಯಿತಿ ಕೊಡಲ್ಲ

ಭಾರತದಲ್ಲಿ ಐಫೋನ್ ತಯಾರಿಕಾ ಘಟಕ ಸ್ಥಾಾಪಿಸಲು ಮುಂದಾಗಿರುವ ಆ್ಯಪಲ್ ಕಂಪೆನಿಗೆ ರಿಯಾಯಿತಿ ನೀಡುವ ಕುರಿತು ...

news

ಸಹಾರಾ ಸಮೂಹದ ರೂ.39,000 ಕೋಟಿ ಆಸ್ತಿ ಮುಟ್ಟುಗೋಲು

ಸಹಾರಾ-ಸೆಬಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋನವಲಾ, ಮಹಾರಾಷ್ಟ್ರದ ಪುಣೆಯಲ್ಲಿರುವ ಸಹಾರ ಸಮೂಹದ ರೂ. ...

news

ರಿಯಯನ್ಸ್ ಜಿಯೋ ಉಚಿತ ಕೊಡುಗೆ ವಿರುದ್ಧ ದೂರು

‘ವೆಲ್ಕಮ್ ಆಫರ್’ ಮತ್ತು ‘ಹ್ಯಾಾಪಿ ನ್ಯೂ ಇಯರ್ ಆಫರ್’ ನಡುವಿನ ವ್ಯತ್ಯಾಸ ಕುರಿತು ರಿಲಯನ್ಸ್‌ ಜಿಯೋ ...

news

ಟಾಟಾ ಸನ್ಸ್ ಮಂಡಳಿಯಿಂದ ಸೈರಸ್ ಮಿಸ್ತ್ರಿ ವಜಾ

ಟಾಟಾ ಸನ್ಸ್ ಮಂಡಳಿಯಿಂದ ಅದರ ಮಾಜಿ ಮುಖ್ಯಸ್ಥ ಸೈರಸ್ ಮಿಸ್ತ್ರಿಯನ್ನು ಸೋಮವಾರ ವಜಾ ಮಾಡಲಾಗಿದ್ದು, ...

Widgets Magazine