ರಿಲಯನ್ಸ್ ಜಿಯೋ ಅಗ್ಗದ 4 ಜಿ ಫೋನ್ ತಯಾರಿ ಶುರು

NewDelhi, ಗುರುವಾರ, 20 ಜುಲೈ 2017 (08:41 IST)

 ನವದೆಹಲಿ: ಟೆಲಿಕಾಂ ಕ್ಷೇತ್ರದಲ್ಲಿ ನೂತನ ಕ್ರಾಂತಿ ಹುಟ್ಟು ಹಾಕಿದ ರಿಲಯನ್ಸ್ ಸಂಸ್ಥೆ ಇದೀಗ ತನ್ನ ಜಿಯೋ ಸಿಮ್ ಬಳಸಲು ಸಾಧ್ಯವಾಗುವಂತಹ ಅಗ್ಗದ ದರದ 4 ಜಿ ಫೋನ್ ತಯಾರಿಸಲು ಇಂಟೆಕ್ಸ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.


 
ಅಗ್ಗದ ದರದಲ್ಲಿ 4 ಜಿ ಫೋನ್ ಗಳನ್ನು ಒದಗಿಸಲು ಚಿಂತನೆ ನಡೆಸಿರುವುದಾಗಿ ಸಂಸ್ಥೆ ಇತ್ತೀಚೆಗಷ್ಟೇ ಹೇಳಿಕೊಂಡಿತ್ತು. ಇದೀಗ ಪ್ರಮುಖ ಮೊಬೈಲ್ ಉತ್ಪನ್ನಕರಾದ ಇಂಟೆಕ್ಸ್ ಜತೆಗೆ ಒಪ್ಪಂದ ಮಾಡಿಕೊಂಡಿರುವ ಜಿಯೋ ಸಂಸ್ಥೆ ಹೊಸ ಫೋನ್ ಗಳ ತಯಾರಿಗೆ ಗ್ರೀನ್ ಸಿಗ್ನಲ್ ನೀಡಿದೆ.
 
ಮುಂಬರುವ ಅಗಸ್ಟ್ ತಿಂಗಳಲ್ಲಿ ಈ ಬಗ್ಗೆ ಗ್ರಾಹಕರಿಗೆ ಸ್ಪಷ್ಟವಾಗಿ ಘೋಷಣೆ ನೀಡಲಿದೆ. ಇದರೊಂದಿಗೆ ಮೊಬೈಲ್ ಉತ್ಪನ್ನ ಕ್ಷೇತ್ರದಲ್ಲಿ ರಿಲಯನ್ಸ್ ಮತ್ತಷ್ಟು ಕ್ರಾಂತಿ ಹುಟ್ಟುಹಾಕಲಿದೆ. ಸ್ಮಾರ್ಟ್ ಫೋನ್ ಉದ್ಯಮ ಈ ಬೆಳವಣಿಗೆಯಿಂದ ತಲ್ಲಣಗೊಳ್ಳಲಿದೆ. ಈಗಾಗಲೇ ಮೊಬೈಲ್ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ಇಂಟೆಕ್ಸ್ ಸಂಸ್ಥೆ, ರಿಲಯನ್ಸ್ ಸಂಸ್ಥೆ ಜತೆಗೆ ಚರ್ಚಿಸಿ ನಂತರವೇ ಅಗ್ಗದ ದರದ ಮಾಡೆಲ್ ಗಳನ್ನು ಮಾರುಕಟ್ಟೆಗೆ ಬಿಡಲು ಉದ್ದೇಶಿಸಿದೆ.
 
ಇದನ್ನೂ ಓದಿ..  ಮಾತಲ್ಲಿ ದ್ರಾವಿಡ್ ಗೆ ಜೈಕಾರ ಹಾಕಿ ಸಚಿನ್ ಬೇಕು ಎಂದರಾ ರವಿ ಶಾಸ್ತ್ರಿ?
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ರಿಲಯನ್ಸ್ ಜಿಯೋ ಇಂಟೆಕ್ಸ್ ಟೆಲಿಕಾಂ ಕ್ಷೇತ್ರ ವಾಣಿಜ್ಯ ಸುದ್ದಿಗಳು Intex Reliance Jio Telecom Company Business News

ವ್ಯವಹಾರ

news

ವಾಟ್ಸಾಪ್`ನಲ್ಲಿ ನೋಡಬಹುದು ಯೂಟ್ಯೂಬ್ ವಿಡಿಯೋ..!

ಉಚಿತ ಮೆಸೇಜ್, ಕಾಲಿಂಗ್, ವಿಡಿಯೋ ಕಾಲಿಂಗ್ ಸೇರಿದಂತೆ ವಿವಿಧ ಸೇವೆಗಳ ಮೂಲಕ ವಿಶ್ವಾದ್ಯಂತ ಗಮನ ಸೆಳೆದಿರುವ ...

news

ನ್ಯಾನೋ ಕಾರ್ ಗೆ ಸದ್ಯದಲ್ಲೇ ಟಾಟಾ?

ನವದೆಹಲಿ: ದೇಶದಲ್ಲಿ ಅಗ್ಗದ ಬೆಲೆಯ ಕಾರು ಬಿಡುಗಡೆ ಮಾಡಿ ಭಾರೀ ಸುದ್ದಿ ಮಾಡಿದ್ದ ಟಾಟಾ ಸಂಸ್ಥೆ ತನ್ನ ...

news

ವಿಶ್ವದ ಅತಿ ಚಿಕ್ಕ ಫೋನ್ ಬಿಡುಗಡೆಯಾಗಿದೆ; ಯಾವುದದು, ಬೆಲೆ ಎಷ್ಟು ಗೊತ್ತಾ..?

ವಿಶ್ವದ ಅತಿ ಸಣ್ಣ ಜಿಎಸ್ ಎಂ ಫೋನ್ ಭಾರತದಲ್ಲಿ ಬಿಡುಗಡೆಗೊಂದಿದೆ. ರಷ್ಯಾ ಮೂಲದ ಎಲರಿ ಸಂಸ್ಥೆ ...

news

ಜಿಯೋ ಸಂಸ್ಥೆಯಿಂದ ಕನಸಿನಲ್ಲೂ ಊಹಿಸದ ಭರ್ಜರಿ ಗಿಫ್ಟ್

ಭಾರತದ ನೆಟ್ವರ್ಕ್ ಕ್ಷೇತ್ರದಲ್ಲಿ ಹೊಸ ಅಲೆ ಎಬ್ಬಿಸಿರುವ ರಿಲಯನ್ಸ್ ಜಿಯೋ ಸಂಸ್ಥೆ ತನ್ನ ಗ್ರಾಹಕರಿಗೆ ...

Widgets Magazine