ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ 11 ಸಾವಿರ ಕೋಟಿ ಗುಳಂ

ಗುರುಮೂರ್ತಿ 

ಮುಂಬೈ, ಗುರುವಾರ, 15 ಫೆಬ್ರವರಿ 2018 (13:05 IST)

 ಮುಂಬೈ ಶಾಖೆಯ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಸುಮಾರು 11,360 ಕೋಟಿ ರೂಪಾಯಿಗಳಷ್ಟು ಬಾರಿ ಅಕ್ರಮ ವ್ಯವಹಾರವನ್ನು ಅಧಿಕಾರಿಗಳು ಪತ್ತೆಮಾಡಿದ್ದಾರೆ.

ಈ ಕುರಿತಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಬ್ಯಾಂಕ್ ಅಧಿಕಾರಿಗಳು ಮೋಸದ ಕುರಿತಾದ ಹೇಳಿಕೆಯನ್ನು ನೀಡಿದ್ದು, ಇದರಿಂದ ಪಂಜಾಬ್ ನ್ಯಾಷನಲ್ ಬ್ಯಾಂಕ್‌ ಷೇರು ದರವು ಮುಂಬೈ ಷೇರು ಸೂಚ್ಯಂಕದಲ್ಲಿ ನಿನ್ನೆ ಮಧ್ಯಾಹ್ನ 2.15 ರ ಮುಕ್ತಾಯಕ್ಕೆ ಹೋಲಿಸಿದರೆ ಶೇಕಡಾ 8% ರಷ್ಟು ಕಡಿಮೆ ಆಗಿದೆ ಎಂದು ತಿಳಿಸಿದ್ದಾರೆ.
 
ಕೆಲವೇ ಆಯ್ದು ಗ್ರಾಹಕರೊಂದಿಗೆ ಸ್ಪಷ್ಟವಾದ ಒಪ್ಪಂದ ಮಾಡಿಕೊಂಡು ಅನುಕೂಲ ಮಾಡಿಕೊಟ್ಟಿರುವುದು ಇದಕ್ಕೆ ಮುಖ್ಯವಾದ ಕಾರಣ ಎಂಬುದು ಬ್ಯಾಂಕ್ ವಹಿವಾಟನ್ನು ಪರಿಶೀಲಿಸಿದಾಗ ತಿಳಿದುಬಂದಿದೆ. ಅಷ್ಟೇ ಅಲ್ಲ ಇದರ ಆಧಾರದ ಮೇಲೆ ವಿದೇಶದಲ್ಲಿರುವ ಗ್ರಾಹಕರಿಗೆ ಇನ್ನಿತರ ಬ್ಯಾಂಕ್‌ಗಳಲ್ಲಿ ಮುಂಗಡ ಹಣ ನೀಡಿರುವುದನ್ನು ಪತ್ತೆ ಹಚ್ಚಲಾಗಿದೆ.
 
ಈ ಮೋಸದ ಖಾತೆಗಳನ್ನು ಪತ್ತೆಹಚ್ಚಿದ ನಂತರ ಬ್ಯಾಂಕ್‌ನ ಷೇರು ಸೂಚ್ಯಂಕವು ನಿನ್ನೆಯ ಸೂಚ್ಯಂಕಕ್ಕೆ ಹೋಲಿಸಿದರೆ ಶೇಕಡಾ 6.9% ರಷ್ಟು ಕುಸಿತ ಕಂಡಿದೆ. ಪಿಎನ್‌ಬಿ ದೇಶದಲ್ಲಿಯೇ ಸಾಲ ನೀಡುವಲ್ಲಿ ಎರಡನೇ ಅತೀ ದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಗಿದ್ದು ದೇಶದಲ್ಲಿಯೇ ಹೆಚ್ಚು ಸ್ವತ್ತುಗಳನ್ನು ಹೊಂದಿರುವ ನಾಲ್ಕನೇ ಅತೀ ದೊಡ್ಡ ಬ್ಯಾಂಕ್ ಆಗಿದೆ. ಈ ಬಗ್ಗೆ ತನಿಖೆ ನಡೆಸಿರುವ ಅಧಿಕಾರಿಗಳು ಈ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ಹೆಸರನ್ನು ಹೊರಹಾಕಿಲ್ಲ. ಆದರೆ ಪ್ರಕರಣದ ಕುರಿತು ಕಾನೂನು ಜಾಗೃತ ಸಂಸ್ಥೆಗೆ ಮಾಹಿತಿ ತಿಳಿಸಲಾಗಿದೆ. ವಹಿವಾಟಿನ ಮೂಲಕ ಯಾವುದೇ ಅಕ್ರಮ ನಡೆದಿದ್ದರೆ ಅದರ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಬ್ಯಾಂಕ್ ತಿಳಿಸಿದೆ.ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಮೊಟೊ ಪ್ರೀಯರಿಗೆ ಹೊಸ ಸುದ್ದಿ: ಬಿಡುಗಡೆಯಾಗುತ್ತಿದೆ ಹೊಸ ಅತ್ಯಾಧುನಿಕ ಫೋನ್...!

ದೇಶಿಯ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದ ಮೊಟೊ ಇದೀಗ ತನ್ನ ನೂತನ ಮೊಬೈಲ್ ಆವೃತ್ತಿಯನ್ನು ಇಂದು ಬಿಡುಗಡೆ ...

news

ಬಿಎಸ್ಎನ್ಎಲ್ ನೀಡಿದ ಮತ್ತೊಂದು ಭರ್ಜರಿ ಕೊಡುಗೆ! ಗ್ರಾಹಕನಿಗೆ ಲಾಭವೋ ಲಾಭ!

ನವದೆಹಲಿ: ಮೊನ್ನೆಯಷ್ಟೇ 1099 ರೂ.ಗಳ ಭರ್ಜರಿ ಆಫರ್ ಕೊಟ್ಟಿದ್ದ ಬಿಎಸ್ಎನ್ಎಲ್ ಮತ್ತೊಂದು ಭರ್ಜರಿ ಆಫರ್ ...

news

ಕೈಗೆಟುಕುವ ದರಕ್ಕೆ ಮೊಬೈಲ್ ಬಿಡುಗಡೆಮಾಡಿದ ಇಂಟೆಕ್ಸ್

ದೇಶಿ ಮೊಬೈಲ್ ಉತ್ಪಾದಕ ಸಂಸ್ಥೆಯಾದ ಇಂಟೆಕ್ಸ್ ತನ್ನ ಗ್ರಾಹಕರಿಗೊಸ್ಕರ ಕೈಗೆಟುಕುವ ದರದಲ್ಲಿ ಮೊಬೈಲ್ ಅನ್ನು ...

news

ನಾಳೆ ಲಾಂಚ್ ಆಗಲಿದೆ ಶಿಯೋಮಿಯ ಹೊಸ ಫೋನ್...! ಹೇಗಿದೆ ಗೊತ್ತಾ...!

ದೇಶಿಯ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ತಂತ್ರಜ್ಞಾನದೊಂದಿಗೆ ಫೋನ್ ಬಿಡುಗಡೆಮಾಡಿ ...

Widgets Magazine
Widgets Magazine