ರೆಪೋ ದರದ ಆಧಾರದ ಮೇಲೆ ಸಾಲ ಒದಗಿಸಲು ಬ್ಯಾಂಕುಗಳಿಗೆ ಸೂಚನೆ ನೀಡಿದ ಆರ್ ಬಿ ಐ

ನವದೆಹಲಿ, ಗುರುವಾರ, 6 ಡಿಸೆಂಬರ್ 2018 (11:11 IST)

ನವದೆಹಲಿ : ಬ್ಯಾಂಕುಗಳು ತಮಗಿಷ್ಟ ಬಂದಂತೆ ಸಾಲ ನೀಡುವುದು ಹಾಗೂ ಬಡ್ಡಿದರ ವಿಧಿಸುವುದಕ್ಕೆ ಕಡಿವಾಣ ಹಾಕಲು ಇದೀಗ ಭಾರತೀಯ ರಿಸರ್ವ್ ಬ್ಯಾಂಕ್ ಸಾಲದ ಬಡ್ಡಿದರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿದೆ.


ಈ ಮೂಲಕ ಆರ್.ಬಿ.ಐ. ಎಂಸಿಎಲ್‌ಆರ್, ಬೇಸ್ ರೇಟ್, ಪಿಎಲ್‌ಆರ್ ಮತ್ತು ಬಿಪಿಎಲ್‌ಆರ್ ಅಡಿಯಲ್ಲಿ ಸಾಲ ನೀಡುವ ವ್ಯವಸ್ಥೆಯನ್ನು ರದ್ದು ಮಾಡಿದೆ. ಆದ್ದರಿಂದ  2019 ಏಪ್ರಿಲ್ 1 ರ ನಂತರ ಬ್ಯಾಂಕುಗಳು ಗೃಹ ಸಾಲ, ಮತ್ತು ವೈಯಕ್ತಿಕ ಸಾಲ ನೀಡುವ ನಿಯಮದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂದು ತಿಳಿಸಿದೆ.


ಹಾಗೇ ಎಂಎಸ್‌ಎಂಇ ಸಾಲ ನೀಡುವ ವ್ಯವಸ್ಥೆ ಬದಲಾಗುತ್ತಿದೆ. ಇನ್ಮುಂದೆ ಬ್ಯಾಂಕ್ ಗಳು ಆರ್ಬಿಐನ ರೆಪೋ ದರದ ಆಧಾರದ ಮೇಲೆ ಸಾಲ ಒದಗಿಸಬೇಕಾಗುತ್ತದೆ. ತಮಗಿಷ್ಟ ಬಂದಂತೆ ಸಾಲ ನೀಡುವುದಾಗಲಿ, ಬಡ್ಡಿದರ ವಿಧಿಸುವುದಾಗಲಿ ಮಾಡುವಂತಿಲ್ಲ ಎಂದು ಆರ್.ಬಿ.ಐ. ಸೂಚಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 

 



ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ವಾಹನಸವಾರರಿಗೊಂದು ಶಾಕಿಂಗ್ ನ್ಯೂಸ್. ಸದ್ಯದಲ್ಲೇ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಸಾಧ್ಯತೆ

ನವದೆಹಲಿ : ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಇಳಿಕೆ ನೋಡಿ ಸಂತಸದಲ್ಲಿರುವ ವಾಹನಸವಾರರಿಗೊಂದು ಶಾಕಿಂಗ್ ...

news

ವೋಡಾಫೋನ್ ನೀಡ್ತಿದೆ 159 ರೂಪಾಯಿಯ ಹೊಸ ಪ್ಲಾನ್

ಬೆಂಗಳೂರು : ಏರ್ಟೆಲ್ ಹಾಗೂ ಜಿಯೋದ 149 ರೂಪಾಯಿ ಪ್ಲಾನ್ ಗೆ ಟಕ್ಕರ್ ನೀಡಲು ವೋಡಾಫೋನ್ 159 ರೂಪಾಯಿಯ ಹೊಸ ...

news

ಹೊಸ ಗ್ರಾಹಕರಿಗಾಗಿ ಬಿ.ಎಸ್‌.ಎನ್‌.ಎಲ್. ನಿಂದ ಬಂಪರ್ ಆಫರ್

ಬೆಂಗಳೂರು : ದೇಶದ ಏಕೈಕ ಸರ್ಕಾರಿ ಟೆಲಿಕಾಂ ಕಂಪನಿ ಬಿ.ಎಸ್‌.ಎನ್‌.ಎಲ್. ತನ್ನ ಗ್ರಾಹಕರಿಗಾಗಿ ಹೊಸ ಪ್ಲಾನ್ ...

news

ಅಂತ್ಯಕ್ರಿಯೆಗೆ ಬೇಕಾದ ಎಲ್ಲಾ ಸಾಮಗ್ರಿಗಳು ಆನ್‌ಲೈನ್ ಸ್ಟಾರ್ಟಪ್ ಕಂಪನಿಯಲ್ಲಿ ಸಿಗಲಿದೆಯಂತೆ

ಬೆಂಗಳೂರು : ಇನ್ನುಮುಂದೆ ಅಂತ್ಯಕ್ರಿಯೆಗೆ ಬೇಕಾದ ಸಾಮಗ್ರಿಗಳಿಗಾಗಿ ಜನರು ಪರದಾಡಬೇಕಾಗಿಲ್ಲ. ಯಾಕೆಂದರೆ ಈ ...

Widgets Magazine