ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಹೊಸ ಟಿವಿಎಸ್ NTORQ 125 ಸ್ಕೂಟರ್

ಗುರುಮೂರ್ತಿ 

ಬೆಂಗಳೂರು, ಗುರುವಾರ, 8 ಫೆಬ್ರವರಿ 2018 (15:56 IST)

ಯುವಜನತೆಯನ್ನು ಗಮನದಲ್ಲಿರಿಸಿಕೊಂಡು ಟಿವಿಎಸ್ ಮೋಟಾರು ಸಂಸ್ಥೆ ತನ್ನ ಹೊಚ್ಚ ಹೊಸ ಸ್ಕೂಟರ್‌ನ್ನು ಬಿಡುಗಡೆ ಮಾಡಿದೆ. ಈ ಸ್ಕೂಟರ್ ಅನ್ನು ರೇಸಿಂಗ್ ಪೆಡಿಗ್ರಿಯನ್ನು ಆಧರಿಸಿ ತಯಾರಿಸಲಾಗಿದ್ದು ಮಾರುಕಟ್ಟೆಯಲ್ಲಿ ಸದ್ದುಮಾಡುತ್ತಿದೆ.
ಈ ಸ್ಕೂಟರ್ cc ಎಂಜಿನ್ ಅನ್ನು ಹೊಂದಿದ್ದು 9.27 bhp @ 7500 rpm ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಸದ್ಯಕ್ಕೆ ಇದರ ಎಕ್ಸ್‌ಶೋ ರೂಂ ದರ 58750 ರೂಪಾಯಿ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ ಈಗಾಗಲೇ ಉತ್ಪಾದನೆಯನ್ನು ಪ್ರಾರಂಭಿಸಿ ಮಾರಾಟಕ್ಕೆ ಸಜ್ಜಾಗಿರುವ ಟಿವಿಎಸ್ ಸಂಸ್ಥೆ ವರ್ಷದೊಳಗೆ ಸುಮಾರು 2 ಲಕ್ಷಗಳಷ್ಚು ಸ್ಕೂಟರ್ ಅನ್ನು ಮಾರಾಟಮಾಡುವ ಗುರಿಯನ್ನು ಸಹ ಹೊಂದಿದೆ.
ಈಗಾಗಲೇ ಚೆನೈನಲ್ಲಿ ಈ ಸ್ಕೂಟರ್ ಅನ್ನು ಬಿಡುಗಡೆ ಮಾಡಿದ್ದು, ಟಿವಿಎಸ್ ಕಂಪನಿ ಅಧ್ಯಕ್ಷರು ಮತ್ತು ಸಿಇಓ ಆಗಿರುವ ಕೆಎನ್ ರಾಧಾಕೃಷ್ಣನ್ ಇದೊಂದು ಟಿವಿಎಸ್‌ನ ಆಕರ್ಷಕ ಆವೃತ್ತಿಯಾಗಿದ್ದು ಇದು ಯುವ ಪೀಳಿಗೆಯ ಆಸೆ ಆಕಾಂಕ್ಷೆಗಳನ್ನು ಗಮನದಲ್ಲಿರಿಸಿಕೊಂಡು ಈ ಸ್ಕೂಟರ್ ಅನ್ನು ವಿನ್ಯಾಸಪಡಿಸಲಾಗಿದೆ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಇದೇ ಮಾದರಿಯ ಹಲವು ಬೈಕುಗಳು ಈಗಾಗಲೇ ಮಾರುಕಟ್ಟೆಯಲ್ಲಿದ್ದರೂ ಇದು ತನ್ನ ವಿಶಿಷ್ಟವಾದ ವಿನ್ಯಾಸದಿಂದ ಮೊದಲ ನೋಟದಲ್ಲೇ ಗ್ರಾಹಕರ ಗಮನ ಸೆಳೆದಿದೆ ಎಂದೇ ಹೇಳಬಹುದಾಗಿದೆ. ಸದ್ಯ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಈ ಬೈಕ್ ತನ್ನ ಪ್ರತಿಸ್ಪರ್ಧಿ ಬೈಕುಗಳಿಗೆ ಟಕ್ಕರ್ ನೀಡುತ್ತಾ ಎನ್ನುವುದೇ ಸದ್ಯದ ಕುತೂಹಲವಾಗಿದೆ.ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಅಟೋ ಎಕ್ಸ್‌ಪೋ 2018: ವಿದ್ಯುತ್ ಚಾಲಿತ ಸೂಪರ್‌ಬೈಕ್‌ಗಳ ಅನಾವರಣ

ನವದೆಹಲಿ: ಅಟೋ ಎಕ್ಸ್‌ಪೋ ಪ್ರದರ್ಶನದಲ್ಲಿ ವಿದ್ಯುತ್ ಚಾಲಿತ ಸೂಪರ್‌ಬೈಕ್‌ಗಳನ್ನು ಪ್ರದರ್ಶಿಸಲಾಗಿದ್ದು ...

news

6 ಕೋಟಿ ರೂಪಾಯಿಗೆ ಮಾರಾಟವಾದ ಈ ಬೈಕ್ ಏನಿದರ ವಿಶೇಷ...!

ಹಳೆಯ ಕಾಲದ ಕಾರುಗಳು ಹರಾಜಿನಲ್ಲಿ ಕೋಟಿಗಳಷ್ಟು ಇಲ್ಲವೇ ಲಕ್ಷಗಳಷ್ಟು ಬೆಲೆಗೆ ಮಾರಾಟವಾಗಿರುವುದನ್ನು ನೀವು ...

news

ನೀವು ಶ್ರೀಮಂತರಾ, ಬಡವರಾ ಎಂಬುದನ್ನು ಇನ್ನು ಮುಂದೆ ಫೇಸ್‌ಬುಕ್ ಹೇಳಲಿದೆ

ಲಂಡನ್: ಬಳಕೆದಾರರ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಸ್ವಯಂಚಾಲಿತವಾಗಿ ಪತ್ತೆಹಚ್ಚುವ ಮತ್ತು ಅವರನ್ನು ...

news

ಭಾರತದಲ್ಲಿ ಐಫೋನ್ ಇನ್ನಷ್ಟು ತುಟ್ಟಿ

ನೀವೇನಾದರೂ ಐಫೋನ್ ಪ್ರಿಯರೇ ಹಾಗಾದರೆ ನಿಮಗೊಂದು ಶಾಕಿಂಗ್ ಸುದ್ದಿ. ಅದೇನೆಂದರೆ ಇಂದಿನಿಂದ ಐಫೋನ್‌ಗಳ ...

Widgets Magazine