ನಟ ದಿಲೀಪ್ ಗೆ ಹೈಕೋರ್ಟ್ ನಲ್ಲೂ ಸಿಗಲಿಲ್ಲ ಬಿಡುಗಡೆಯ ಭಾಗ್ಯ

Kocchi, ಸೋಮವಾರ, 24 ಜುಲೈ 2017 (11:05 IST)

ಕೊಚ್ಚಿ: ಬಹುಭಾಷಾ ನಟಿಯ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿತರಾಗಿರುವ ಮಲಯಾಳಂ ನಟ ದಿಲೀಪ್ ಗೆ ಇನ್ನೂ ಬಿಡುಗಡೆಯ ಭಾಗ್ಯವಿಲ್ಲ. ಹೈಕೋರ್ಟ್ ನಲ್ಲಿ ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ.


 
ತನಿಖಾ ತಂಡದ ವಿವರಗಳನ್ನು ಅಧ್ಯಯನ ಮಾಡಿದ ಹೈಕೋರ್ಟ್ ಮೇಲ್ನೋಟಕ್ಕೆ ದಿಲೀಪ್ ಮೇಲಿನ ಆರೋಪ ನಿಜವೆಂಬುದಕ್ಕೆ ಪುಷ್ಠಿ ಸಿಗುತ್ತಿದೆ. ಇನ್ನೂ ಹೆಚ್ಚಿನ ಸಾಕ್ಷ್ಯಗಳ ವಿಚಾರಣೆ, ತನಿಖೆ ಪೂರ್ಣಗೊಳ್ಳುವವರೆಗೆ ಜಾಮೀನು ಸಾಧ್ಯವಲ್ಲ ಎಂದು ಹೈಕೋರ್ಟ್ ತಿಳಿಸಿದೆ.
 
ಇದೇ ವೇಳೆ ಘಟನೆಗೆ ಮುಖ್ಯ ಸಾಕ್ಷಿಯಾಗಿದ್ದ ಮೆಮೊರಿಕಾರ್ಡ್, ಮೊಬೈಲ್ ಫೋನ್ ಆರೋಪಿ ದಿಲೀಪ್ ಕೈವಶದಲ್ಲಿದೆ ಎಂಬ ತನಿಖಾ ತಂಡದ ವರದಿ ಸತ್ಯವಾದರೆ, ಈಗ ಆರೋಪಿಯನ್ನು ಹೊರಬಿಡುವುದರಿಂದ ಈ ಪ್ರಮುಖ ಸಾಕ್ಷ್ಯಗಳು ನಾಶವಾಗುವ ಸಾಧ್ಯತೆಯಿದೆ ಎಂಬ ಕಾರಣಕ್ಕೆ ಕೋರ್ಟ್ ಜಾಮೀನು ನಿರಾಕರಿಸಿದೆ.
 
ಈ ಹಿನ್ನಲೆಯಲ್ಲಿ ದಿಲೀಪ್ ನ್ಯಾಯಾಂಗ ಬಂಧನದಲ್ಲೇ ಮುಂದುವರಿಯಲಿದ್ದಾರೆ. ಆದರೆ ನಾಳೆ ನ್ಯಾಯಾಂಗ ಬಂಧನ ಅವಧಿ ಮುಕ್ತಾಯಗೊಳ್ಳಲಿದೆ. ಹೀಗಾಗಿ ಮತ್ತೆ ದಿಲೀಪ್ ಪರ ವಕೀಲರು ಅಂಗಮಾಲಿ ನ್ಯಾಯಾಲಯದಲ್ಲಿ ಅಥವಾ ಸುಪ್ರೀಂ ಕೋರ್ಟ್ ನಲ್ಲಿ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ.
 
ಇದನ್ನೂ ಓದಿ..  ವಿಶ್ವಕಪ್ ಸೋಲಿನ ನಂತರ ನಿವೃತ್ತಿಯಾಗ್ತಾರಾ ಮಿಥಾಲಿ ರಾಜ್? 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ನಟ ದಿಲೀಪ್ ಬಹುಭಾಷಾ ತಾರೆ ಲೈಂಗಿಕ ಕಿರುಕುಳ ಅಪರಾಧ ಸುದ್ದಿಗಳು ಮಲಯಾಳಂ ಸಿನಿಮಾ ಸುದ್ದಿಗಳು Actor Dileep Crime News Actress Sexual Harrassment Malayalam Film News

ಸ್ಯಾಂಡಲ್ ವುಡ್

news

ಭುವನ್ ತೊಡೆಗೆ ಕಚ್ಚಿದರಾ ಪ್ರಥಮ್..?

ಬಿಗ್ ಬಾಸ್`ನಲ್ಲಿ ಗಲಾಟೆ ಮೂಲಕ ಸುದ್ದಿ ಮಾಡುತ್ತಿದ್ದ ಪ್ರಥಮ್ ಧಾರಾವಾಹಿ ಶೂಟಿಂಗ್ ವೇಳೆಯೂ ಗಲಾಟೆ ...

news

ಬಿಗ್ ಬಾಸ್ ನಿಂದ ಹೊರ ನಡೆದ ಮುಮೈತ್​ ಖಾನ್

ತೆಲುಗು ಚಿತ್ರರಂಗದಲ್ಲಿ ಕೇಳಿಬಂದಿದ್ದ ಡ್ರಗ್ಸ್ ಸೇವನೆ ಪ್ರಕರಣ ಇದೀಗ ಬಿಗ್ ಬಾಸ್ ಶೋ ಮೇಲೂ ತನ್ನ ಕರಿ ...

news

ಭೀಮನ ಅಮಾವಾಸ್ಯೆ ಸಂಭ್ರಮದಲ್ಲಿ ಪ್ರಿಯಾಂಕಾ ಉಪೇಂದ್ರ

ಭೀಮನ ಅಮಾವಾಸ್ಯೆ ಮಹಿಳೆಯರು ಆಚರಿಸುವ ಅತ್ಯಂತ ಮಹತ್ವ ಪೂರ್ಣ ಹಬ್ಬಗಳಲ್ಲೊಂದು. ದಕ್ಷಿಣದಲ್ಲಿ ಇದರ ಮಹತ್ ...

news

ಅಜಯ್ ದೇವಗನ್ ಮುಂದೆ ಬೆತ್ತಲಾದರಾ ಇಲಿಯಾನಾ..?

ಸೆಪ್ಟೆಂಬರ್`ಗೆ ಬಿಡುಗಡೆಯಾಗಲು ಸಿದ್ಧವಾಗಿರುವ ಬಾದ್ ಶೋ ಚಿತ್ರದಲ್ಲಿ ಬಾಲಿವುಡ್ ನಟ ಅಜಯ್ ದೇವಗನ್ ತನಗಿಂತ ...

Widgets Magazine