ಹಾಟ್ ದೃಶ್ಯದ ಶೂಟಿಂಗ್ ವೇಳೆ ಜಯಪ್ರದಾರನ್ನು ಬಿಗಿಯಾಗಿ ತಬ್ಬಿಕೊಂಡಿದ್ದರಂತೆ ನಟ ದಿಲೀಪ್ ತಾಹೀಲ್

ಬೆಂಗಳೂರು, ಶನಿವಾರ, 8 ಸೆಪ್ಟಂಬರ್ 2018 (06:35 IST)

ಬೆಂಗಳೂರು : ಸ್ಯಾಂಡಲ್ ವುಡ್ ನ ಖ್ಯಾತ ನಟರಾದ ರಾಜ್ ಕುಮಾರ್, ವಿಷ್ಣುವರ್ಧನ್ ಅವರ ಜೊತೆ ನಟಿಸಿದ ನಟಿ ಜಯಪ್ರದಾ ಅವರು ಬಾಲಿವುಡ್ನಲ್ಲಿ ಯೂ ಸಾಕಷ್ಟು ಹೆಸರು ಗಳಿಸಿದ್ದರು. ಇವರು ತನ್ನ ಮೂರು ದಶಕಗಳ ಸಿನಿ ವೃತ್ತಿಜೀವನದಲ್ಲಿ 200 ಕ್ಕಿಂತ ಹೆಚ್ಚಿನ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಇವರಿಗೆ ಒಮ್ಮೆ ಶೂಟಿಂಗ್ ನ ವೇಳೆ ನಟ ದಿಲೀಪ್ ತಾಹಿಲ್ ಅವರು ಇವರ ಜೊತೆ ನಡೆದುಕೊಂಡ ರೀತಿ ಈಗಲೂ ಭಯ ಹುಟ್ಟಿಸುವುದರ ಜೊತೆಗೆ ಬೇಸರವನ್ನುಂಟುಮಾಡುತ್ತದೆಯಂತೆ.


ಹೌದು ಒಮ್ಮೆ ನಟ ದಿಲೀಪ್ ತಾಹಿಲ್ ಜೊತೆಗೆ ಹಾಟ್ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದಾಗ ಅನಿರೀಕ್ಷಿತ ಘಟನೆಯೊಂದು ನಡೆಯಿತಂತೆ. ಶೂಟಿಂಗ್ ಆರಂಭವಾದಾಗ ನಟ ದಿಲೀಪ್ ತನ್ನ ನಿಯಂತ್ರಣವನ್ನು ಕಳೆದುಕೊಂಡು ನಟಿ ಜಯಪ್ರದಾರನ್ನು ಗಟ್ಟಿಯಾಗಿ ಹಿಡಿದುಕೊಂಡರಂತೆ. ಆವೇಳೆ ಅವರ ಹಿಡಿತದಿಂದ ಬಿಡಿಸಿಕೊಳ್ಳಲಾಗದೆ ನೋವು ಅನುಭವಿಸಿದ ನಟಿ ಜಯಪ್ರದಾ ದಿಲೀಪ್ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದು ನೂಕಿದ್ದರು. ಕೋಪದಿಂದ 'ದಿಲೀಪ್ ಇದು ರಿಯಲ್ ಅಲ್ಲ. ರೀಲ್. ಎಚ್ಚರದಿಂದ ನಟಿಸಿ' ಅಂತಾ ಜೋರಾಗಿ ಕಪಾಳಮೋಕ್ಷ ಮಾಡಿದ್ದರಂತೆ.


ಈ ಘಟನೆ ನನಗೆ ಉಸಿರುಗಟ್ಟಿಸುವ ರೀತಿಯಂತಿತ್ತು. ಈ ಘಟನೆಯನ್ನು ನೆನೆಸಿಕೊಂಡರೆ ಈಗಲೂ ನನಗೆ ಭಯವಾಗುತ್ತದೆ ಎಂದು ನಟಿ ಜಯಪ್ರದಾ  ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಪ್ರಿಯಾಂಕ ನಿಶ್ಚಿತಾರ್ಥ ಕುರಿತು ನಿಕ್ ಮಾಜಿ ಪ್ರೇಯಸಿ ಹೇಳಿದ್ದೇನು?

ಮುಂಬೈ: ಬಾಲಿವುಟ್ ನಟಿ ಪ್ರಿಯಾಂಕ ಚೋಪ್ರಾ ಹಾಗೂ ಅಮೆರಿಕಾ ಸಿಂಗರ್ ನಿಕ್ ಜೋನಸ್ ನಿಶ್ಚಿತಾರ್ಥ ...

news

ಹಾಟ್ ನಟಿ ಮಲ್ಲಿಕಾ ಶರಾವತ್ ಈಗ ಏನು ಮಾಡ್ತಿದ್ದಾರೆ ಗೊತ್ತಾ?

ಮುಂಬೈ : ಮರ್ಡರ್ ಚಿತ್ರದಲ್ಲಿ ಹಾಟ್ ಅವತಾರದಲ್ಲಿ ನಟಿಸಿ ಪಡ್ಡೆ ಹುಡುಗರ ನಿದ್ದೆ ಕದ್ದ ಬಾಲಿವುಡ್ ಬೆಡಗಿ ...

news

ಮಗುವಿಗಾಗಿ ಪೌಷ್ಟಿಕಾಂಶವುಳ್ಳ ಆಹಾರವನ್ನು ಸೇವಿಸುತ್ತಿರುವ ರಾಧಿಕಾ ಪಂಡಿತ್

ಬೆಂಗಳೂರು : ಸ್ಯಾಂಡಲ್ ವುಡ್ ನಟಿ ರಾಧಿಕಾ ಪಂಡಿತ್ ತಾಯಿಯಾಗುತ್ತಿರುವ ವಿಷಯ ಈಗಾಗಲೇ ಎಲ್ಲರಿಗೂ ತಿಳಿದೆ ...

news

ಸುಶಾಂತ್ ಸಿಂಗ್ ನಾಗಾಲ್ಯಾಂಡ್ ನ ಪ್ರವಾಹ ಪೀಡಿತರ ನಿಧಿಗೆ ನೀಡಿದ ಹಣವೆಷ್ಟು ಗೊತ್ತಾ?

ಮುಂಬೈ : ನಟ ಸುಶಾಂತ್ ಸಿಂಗ್ ರಜಪೂತ್ ನಾಗಾಲ್ಯಾಂಡ್ ಪ್ರವಾಹ ಪೀಡಿತರಿಗೆ ಸಹಾಯಹಸ್ತ ಚಾಚುವ ಮೂಲಕ ...

Widgets Magazine