ಮತ್ತೆ ಜೋಗದ ಗುಂಡಿಗೆ ಹೊಕ್ಕ ಗಣೇಶ್-ಭಟ್ಟರ ಜೋಡಿ

Bangalore, ಬುಧವಾರ, 12 ಜುಲೈ 2017 (10:32 IST)

ಬೆಂಗಳೂರು: ಯೋಗರಾಜ್ ಭಟ್ ಮತ್ತು ಗಣೇಶ್ ಜೋಡಿಯ ಸಿನಿಮಾಗಳೆಂದರೆ ನೆನಪಾಗುವುದು ಜೋಗದ ಗುಂಡಿ. ಜೋಗ್ ಫಾಲ್ಸ್ ನ್ನು ಅಷ್ಟು ಅದ್ಭುತವಾಗಿ ತೋರಿಸಿದ್ದು ಇವರಿಬ್ಬರ ಕಾಂಬಿನೇಷನ್ ನ ಮುಂಗಾರು ಮಳೆ. ಇದೀಗ ಮತ್ತೆ ಇಬ್ಬರೂ ಜೋಗದ ಗುಡ್ಡವೇರಿದ್ದಾರೆ.


 
ಆದರೆ ಈ ಬಾರಿ ಚಿತ್ರೀಕರಣ ಮಾಡುವುದಕ್ಕೆ ಹೋಗಲಿಲ್ಲವಂತೆ. ಸುಮ್ಮನೇ ಹಳೆಯ ನೆನಪು ಮೆಲುಕು ಹಾಕಲು ಇಬ್ಬರೂ ಅಲ್ಲಿಗೆ ಹೋಗಿ ಬಂದಿದ್ದಾರೆ ಎನ್ನಲಾಗಿದೆ. ಮುಗುಳು ನಗೆ ಚಿತ್ರಕ್ಕಾಗಿ ಹುಬ್ಬಳ್ಳಿಗೆ ಚಿತ್ರೀಕರಣಕ್ಕೆ ಹೋಗಿದ್ದ ಭಟ್-ಗಣೇಶ್ ಜೋಡಿ ಹಾಗೂ ಚಿತ್ರತಂಡ ವಾಪಸ್ ಬರುವಾಗ ಇದೇ ಜೋಗ್ ಫಾಲ್ಸ್ ನ ದಾರಿಯಾಗಿ ವಾಪಸಾಗುತ್ತಿತ್ತಂತೆ.
 
ಆಗ ಇಬ್ಬರಿಗೂ ಜೋಗದ ತಪ್ಪಲೇರಿ ಹಳೆಯ ನೆನಪುಗಳನ್ನು ನೆನಪಿಸಿಕೊಳ್ಳುವ ಮನಸ್ಸಾಗಿದೆ. ಇದನ್ನು ಗಣೇಶ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಲೈವ್ ಮಾಡಿ ಅಭಿಮಾನಿಗಳಿಗೆ ತೋರಿಸಿದ್ದಾರೆ. ಮತ್ತೊಮ್ಮೆ ಜೋಗದ ದೃಶ್ಯಗಳೇನಾದರೂ ಮುಗುಳು ನಗೆಯಲ್ಲಿ ಕಾಣಬಹುದಾ ನೋಡಬೇಕಷ್ಟೆ.
 
ಇದನ್ನೂ ಓದಿ.. ವಿಶ್ವದಾಖಲೆಯ ಹೊಸ್ತಿಲಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕಿಚ್ಚ ಸುದೀಪ್ ಮಾಡಿದ ಭೀಷ್ಮ ಪ್ರತಿಜ್ಞೆ ಏನದು?

ಬೆಂಗಳೂರು: ಶಿವರಾಜ್ ಕುಮಾರ್ ಈ ವರ್ಷ ಬರ್ತ್ ಡೇ ಆಚರಿಸಿಕೊಳ್ಳಲ್ಲ ಎಂದು ಘೋಷಿಸಿದ ಬೆನ್ನಲ್ಲೇ ಕಿಚ್ಚ ...

news

ಕತ್ರೀನಾ ಕೈಫ್ ಲಿಬಿಯಾ ಸರ್ವಾಧಿಕಾರಿ ಗಡಾಫಿ ಜೊತೆಗಿದ್ದ ಪೋಟೋ ವೈರಲ್

ಬಂಡುಕೋರರಿಂದ ಹತ್ಯೆಗೀಡಾದ ಲಿಬಿಯಾದ ಸರ್ವಾಧಿಕಾರಿ ಮುಮ್ಮರ್ ಗಡಾಫಿ ಜೊತೆ ಬಾಲಿವುಡ್`ನ ಖ್ಯಾತ ನಟಿ ...

news

ಶಿವರಾಜ್ ಕುಮಾರ್ ಈ ಸಾರಿ ಹುಟ್ಟುಹಬ್ಬ ಆಚರಿಸಲ್ಲ

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈ ಬಾರಿ ಬರ್ತ್ ಡೇ ಆಚರಿಸಿಕೊಳ್ಳುತ್ತಿಲ್ಲ. ನಾಳೆ ಅವರ ...

news

ಟೆನ್ನೀಸ್ ತಾರೆ ಜೊಕೋವಿಕ್ - ದೀಪಿಕಾ ಡೇಟಿಂಗ್: ಜೊಕೊ ಮಾಜಿ ಗೆಳತಿ ಹೇಳಿದ್ದೇನು..?

ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಹಾಗೂ ಟೆನಿಸ್‌ನ ಮಾಜಿ ವಿಶ್ವ ನಂ.1 ತಾರೆ ನೊವಾಕ್‌ ಜೊಕೋವಿಕ್‌ ...

Widgets Magazine