Widgets Magazine

ಒಂದೇ ಒಂದು ಗ್ರೂಪ್ ಫೋಟೋದಿಂದ ಅಗ್ನಿಸಾಕ್ಷಿ ಧಾರವಾಹಿ ಬಗ್ಗೆ ಶುರುವಾಗಿದೆ ರೂಮರ್!

ಬೆಂಗಳೂರು| Krishnaveni K| Last Modified ಮಂಗಳವಾರ, 4 ಜೂನ್ 2019 (09:38 IST)
ಬೆಂಗಳೂರು: ವಾಹಿನಿಯಲ್ಲಿ ಪ್ರಸಾರವಾಗುವ ಅಗ್ನಿಸಾಕ್ಷಿ ಧಾರವಾಹಿ ಯಾಕೋ ಈಗ ಮೊದಲಿನಷ್ಟು ಚೆನ್ನಾಗಿಲ್ಲ, ಒಮ್ಮೆ ಧಾರವಾಹಿ ಮುಗಿಸಿ ಎಂದು ಪ್ರೇಕ್ಷಕರು ಆಕ್ರೋಶ ವ್ಯಕ್ತಪಡಿಸಲು ಶುರು ಮಾಡಿದ್ದಾರೆ.

 
ನಂ.1 ಧಾರವಾಹಿಯಾಗಿದ್ದ ಅಗ್ನಿಸಾಕ್ಷಿಯಲ್ಲಿ ಇತ್ತೀಚೆಗೆ ಸನ್ನಿಧಿ, ಸಿದ್ಧಾರ್ಥ್ ರೊಮ್ಯಾನ್ಸ್ ಇಲ್ಲ, ಯಾವತ್ತೂ ವಿಲನ್ ಚಂದ್ರಿಕಾ ಗೆಲ್ಲೋದು ನೋಡಿ ನೋಡಿ ಪ್ರೇಕ್ಷಕರಿಗೂ ಸಾಕಾಗಿದೆ.
 
ಈ ನಡುವೆ ಅಗ್ನಿಸಾಕ್ಷಿ ಧಾರವಾಹಿ ತಂಡ ಜತೆಯಾಗಿ ನಿಂತು ಫೋಟೋ ತೆಗೆಸಿಕೊಂಡಿದ್ದು, ಅದೀಗ ಇನ್ ಸ್ಟಾಗ್ರಾಂನಲ್ಲಿ ಹರಿದಾಡುತ್ತಿದೆ. ಈ ಗ್ರೂಪ್ ಫೋಟೋ ನೋಡಿ ಇದೀಗ ಧಾರವಾಹಿ ಮುಗಿಯಿತೇ ಎಂದು ಪ್ರೇಕ್ಷಕರು ಪ್ರಶ್ನಿಸಲಾರಂಭಿಸಿದ್ದಾರೆ. ಕೊನೆಯದಾಗಿ ಸೆಂಡ್ ಆಫ್ ಮಾಡುವಾಗ ಫೋಟೋ ತೆಗೆಸಿಕೊಂಡಂತೆ ಪೋಸ್ ಕೊಟ್ಟಿರುವ ಅಗ್ನಿಸಾಕ್ಷಿ ಧಾರವಾಹಿ ನಿಜವಾಗಿಯೂ ಮುಕ್ತಾಯ ಕಾಣುತ್ತಿದೆಯೇ ಅಥವಾ ಅಭಿಮಾನಿಗಳು ಯಾರೋ ಈ ರೀತಿ ಸೆಟ್ ಗೆ ಬಂದು ಫೋಟೋ ತೆಗೆಸಿಕೊಂಡಿರುವುದೇ ಎಂಬುದು ಸ್ಪಷ್ಟವಾಗಬೇಕಿದೆಯಷ್ಟೇ.
ಇದರಲ್ಲಿ ಇನ್ನಷ್ಟು ಓದಿ :