ಇಂದು ನಟಿ ಅಮೂಲ್ಯಗೆ ಹುಟ್ಟುಹಬ್ಬದ ಸಂಭ್ರಮ

ಬೆಂಗಳೂರು, ಶುಕ್ರವಾರ, 14 ಸೆಪ್ಟಂಬರ್ 2018 (15:40 IST)

ಬೆಂಗಳೂರು : ಸ್ಯಾಂಡಲ್ ವುಡ್ ನಟಿ (ಇಂದು) ತಮ್ಮ ಹುಟ್ಟುಹಬ್ಬವನ್ನು ಮನೆಯವರ ಸಮ್ಮುಖದಲ್ಲಿ ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ.


ಗುರುವಾರ ಗೌರಿ-ಗಣೇಶ ಹಬ್ಬಕ್ಕೆಂದು ರಾಜರಾಜೇಶ್ವರಿ ನಗರದ ತಮ್ಮ ತವರು ಮನೆಗೆ ಬಂದ ನಟಿ ಅಮೂಲ್ಯ ಅಲ್ಲೇ ತಮ್ಮ ಪತಿ ಮನೆಯವರು ಮತ್ತು ಅಭಿಮಾನಿಗಳ ಮುಂದೆ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅಂದು ಮಧ್ಯರಾತ್ರಿಯೇ ಅವರ ಅಮ್ಮ, ಅಣ್ಣ ಮತ್ತು ಕುಟುಂಬದ ಆಪ್ತರು ಕೇಕ್ ತಂದು ಕತ್ತರಿಸಿ ಶುಭಾಶಯವನ್ನು ತಿಳಿಸಿದ್ದಾರೆ. ಬೆಳಿಗ್ಗೆ ಅವರ ಪತಿ ಜಗದೀಶ್ ಮತ್ತು ಅತ್ತೆ, ಮಾವ ಎಲ್ಲರು ಕೇಕ್ ಕತ್ತರಿಸಿ ಶುಭಾ ಕೋರಿದ್ದಾರೆ.


ನಟಿ ಅಮೂಲ್ಯ ತಮ್ಮ ಹುಟ್ಟುಹಬ್ಬದ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಅವುಗಳನ್ನು ತಮ್ಮ ಫೇಸ್‍ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಹಾಗೇ ಗೌರಿ-ಗಣೇಶ ಹಬ್ಬದ ಶುಭಾಶಯವನ್ನು ತಿಳಿಸಿ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸಲ್ಮಾನ್ ಖಾನ್ ‘ಧೂಮ್ 4’ ಚಿತ್ರದಿಂದ ಹೊರನಡೆಯಲು ಇವರೇ ಕಾರಣವಂತೆ!

ಮುಂಬೈ : ಬಾಲಿವುಡ್ ನಲ್ಲಿ ‘ಧೂಮ್ 4’ ಚಿತ್ರದ ತಯಾರಿ ನಡೆಯುತ್ತಿದ್ದು, ಇದೀಗ ಈ ಚಿತ್ರದಲ್ಲಿ ...

news

ವಂಚಕ ರಘು ಮೇಲೆ ಕಿರುತೆರೆ ನಟಿಯಿಂದ ಹಲ್ಲೆ

ಬೆಂಗಳೂರು : ಕಿರಿತೆರೆ ನಟಿಯೊಬ್ಬಳು ಮಹಿಳಾ ಸಂಘದ ಹಣಕ್ಕಾಗಿ ಕಾರ್ಯಕರ್ತರೊಬ್ಬರ ಮೇಲೆ ಹಲ್ಲೆ ಮಾಡಿ ಹಣ ...

news

ನಟ ಸಲ್ಮಾನ್ ಖಾನ್ ವಿರುದ್ಧ ಎಫ್ ಐ ಆರ್ ದಾಖಲಿಸಲು ಆದೇಶಿಸಿದ ನ್ಯಾಯಾಲಯ

ಮುಂಬೈ : ನವರಾತ್ರಿಯ ದಿನದಂದು ಬಿಡುಗಡೆ ಮಾಡಲು ಸಿದ್ಧವಾದ ಸಲ್ಮಾನ್ ಖಾನ್ ಅವರ ‘ಲವರಾತ್ರಿ’ ಸಿನಿಮಾ ಇದೀಗ ...

news

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರುತೆರೆ ನಟಿ ಕಾವ್ಯ

ಬೆಂಗಳೂರು : ಕಿರುತೆರೆಯ ನಟಿ ಕಾವ್ಯ ತನ್ನ ಬಹುಕಾಲದ ಸ್ನೇಹಿತ ಮಹದೇವ್ ಅವರ ಜೊತೆ ದಾಂಪತ್ಯ ಜೀವನಕ್ಕೆ ...

Widgets Magazine