ನಟ ಧ್ರುವ ಸಾವು ಆತ್ಮಹತ್ಯೆಯೇ?

ಬೆಂಗಳೂರು, ಮಂಗಳವಾರ, 1 ಆಗಸ್ಟ್ 2017 (10:24 IST)

ಬೆಂಗಳೂರು: ಸ್ಯಾಂಡಲ್ ವುಡ್ ಸಾವಿಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಬಹುಅಂಗಾಂಗ ವೈಕಲ್ಯದಿಂದಾಗಿ ಧ್ರುವ ಇಂದು ಬೆಳಿಗ್ಗೆ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿತ್ತು. ಆದರೆ ಇದು ಆತ್ಮಹತ್ಯೆಯಾಗಿರಬಹುದು ಎಂಬ ಅನುಮಾನಕ್ಕೆಡೆ ಮಾಡಿಕೊಡುವಂತಹ ವರದಿ ಸಿಕ್ಕಿದೆ ಎಂದು ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗಿದೆ.


 
ಇತ್ತೀಚೆಗೆ ಧ್ರುವಗಾಗಿ ತಂದೆ ಒಂದು ಕಂಪನಿ ಮಾಡಿಕೊಟ್ಟಿದ್ದರು. ಆದರೆ ಆ ಕಂಪನಿ ನಷ್ಟದಲ್ಲಿತ್ತು. ಈ ಲಾಸ್ ನಿಂದಾಗಿ ಅವರು ದಿಕ್ಕು ತೋಚದಂತಾಗಿದ್ದರು. ಹೀಗಾಗಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಬಗ್ಗೆ ಧ್ರುವ ತಂದೆ ಬೆಂಗಳೂರು ಪೊಲೀಸರಿಗೆ ತನ್ನ ಮಗ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ದೂರು ಕೊಟ್ಟಿದ್ದರು ಎಂದು ಖಾಸಗಿ ವಾಹಿನಿ ಹೇಳಿದೆ.
 
ಆಸ್ಪತ್ರೆಗೆ ಸೇರಿಸುವಾಗ ಆತನ ದೇಹದಲ್ಲಿ ವಿಷ ಸೇರಿಕೊಂಡಿತ್ತು. ಆಗಲೇ ಎಲ್ಲಾ ಅಂಗಾಂಗಳಿಗೂ ವಿಷ ತಟ್ಟಿತ್ತು ಎಂದು ಆಸ್ಪತ್ರೆ ಮೂಲಗಳಿಂದಲೂ ತಿಳಿದುಬಂದಿದೆ ಎಂದು ವಾಹಿನಿ ವರದಿ ಮಾಡಿದೆ. ಈ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾಗಬೇಕಿದೆ ಎಂದೂ ವಾಹಿನಿ ಹೇಳಿದೆ.
 
ಇದನ್ನೂ ಓದಿ..  ಆರು ಮಂದಿಯಲ್ಲಿ ಪಾಕಿಸ್ತಾನಕ್ಕೆ ಯಾರು?
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕಾಜೋಲ್ ಗೆ ಪ್ರತಿದಿನ ಬೈತಾರಂತೆ ಪತಿ ಅಜಯ್ ದೇವಗನ್!

ಮುಂಬೈ: ಬಾಲಿವುಡ್ ನಟಿ ಕಾಜೋಲ್ ಮತ್ತು ಅಜಯ್ ದೇವಗನ್ 18 ವರ್ಷಗಳಿಂದ ಗಂಡ-ಹೆಂಡಿರಾಗಿ ಬದುಕುತ್ತಿದ್ದಾರೆ. ...

news

ನಟ, ಸಿಸಿಎಲ್ ಆಟಗಾರ ಧ್ರುವ ಶರ್ಮಾ ಇನ್ನಿಲ್ಲ.

ನಟ, ಸಿಸಿಎಲ್ ಆಟಗಾರ ಧ್ರುವ ಶರ್ಮಾ ಇನ್ನಿಲ್ಲ. ವಿಕಲಚೇತನರಿಗೆ ಸ್ಫೂರ್ತಿಯಾಗಿದ್ದ ಧ್ರುವ ಶರ್ಮಾ ...

news

ಕಮಲ್ ಹಾಸನ್ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ

ತಮಿಳಿನ ಬಿಗ್ ಬಾಸ್ ಶೋ ನಡೆಸಿಕೊಡುತ್ತಿರುವ ತಮಿಳಿನ ಸೂಪರ್ ಸ್ಟಾರ್ ಕಮಲ್ ಹಾಸನ್ ಅವರಿಗೆ ಮತ್ತೊಂದು ...

news

ದರ್ಶನ್ ಜತೆ ಅಭಿನಯಿಸದ್ದಕ್ಕೆ ಶಿವರಾಜ್ ಕುಮಾರ್ ಬೇಸರ

ಬೆಂಗಳೂರು: ಮುನಿರತ್ನ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಮಹತ್ವಾಕಾಂಕ್ಷೆಯ ‘ಕುರುಕ್ಷೇತ್ರ’ ಚಿತ್ರ ಭಾರೀ ...

Widgets Magazine