ಬಿಗ್ ಬಾಸ್ ಮನೆಯೊಳಗೆ ಇರುವಾಗಲೇ ಚಂದನ್ ಶೆಟ್ಟಿಗೆ ಸಿಗ್ತು ಬಿಗ್ ಆಫರ್ !

ಬೆಂಗಳೂರು, ಸೋಮವಾರ, 1 ಜನವರಿ 2018 (09:39 IST)

ಬೆಂಗಳೂರು : ಬಿಗ್ ಬಾಸ್ ಮನೆಗೆ ಸೆಲೆಬ್ರಿಟಿ ಕಡೆಯಿಂದ ಬಂದಿರುವ ಚಂದನ್ ಶೆಟ್ಟಿ ಅವರು ಬಿಗ್ ಬಾಸ್ ನಲ್ಲಿ ಒಳ್ಳೆಯ ಪ್ರತಿಸ್ಪರ್ಧಿಯಾಗಿದ್ದು, ಕೈಗೆ ಸಿಕ್ಕಿದ ವಸ್ತುಗಳನ್ನು ಹಿಡಿದು ಸಂಗೀತ ಸಂಯೋಜನೆ ಮಾಡಿ ಸಾಂಗ್ ಗಳನ್ನು ಹಾಡುವ ಅವರ ಕಲೆಗೆ ಮನೆಯ ಒಳಗೆ ಹಾಗು ಹೊರಗಿನ ಜನತೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.


ಚಂದನ್ ಶೆಟ್ಟಿ ಅವರು ಬಿಗ್ ಬಾಸ್ ಮನೆಯ ಒಳಗೆ ಇರುವಾಗಲೇ ಅವರಿಗೆ ಒಂದು ಬಿಗ್ ಆಫರ್ ಬಂದಿದೆ. ಅದೇನೆಂದರೆ ಹಾಡು ಹಾಡಲೂ ಅಥವಾ ಬರೆಯಲೂ ಅಲ್ಲ ಬದಲಾಗಿ ನಾಯಕನಟನಾಗಿ ಅಭಿನಯಿಸಲು. ಇವರು ಮನೆಯಿಂದ ಹೊರಗೆ ಬಂದ ತಕ್ಷಣವೇ ಹೀರೊ ಆಗಿ ಜನರ ಮುಂದೆ ಬರಲಿದ್ದಾರೆ.


ಇವರ  ಅಭಿನಯದ ಈ ಚಿತ್ರಕ್ಕೆ ‘ಸಂಗಮ’, ‘ಜೈಭಜರಂಗಬಲಿ’ ಚಿತ್ರಗಳನ್ನು ನಿರ್ದೇಶಿಸಿದ ರವಿವರ್ಮ ಗುಬ್ಬಿ ಅವರು ಆಕ್ಷನ್ ಕಟ್ ಹೇಳಲಿದ್ದಾರೆ. ಈಗಾಗಲೇ ಚಿತ್ರಕ್ಕೆ ಸ್ಕ್ರೀನ್ ಪ್ಲೆ ಬರೆದಿರುವ ನಿರ್ದೇಶಕರು ಚಂದನ್ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ತಕ್ಷಣವೇ ಚಿತ್ರಕ್ಕೆ ಚಾಲನೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಹೊಸ ವರ್ಷಕ್ಕೆ ವಿಶ್ ಮಾಡುವಾಗಲೂ ಬಲಪಂಥೀಯರಿಗೆ ಪರೋಕ್ಷವಾಗಿ ಚಾಟಿ ಬೀಸಿದ ಪ್ರಕಾಶ್ ರೈ

ಚೆನ್ನೈ: ಇತ್ತೀಚೆಗಿನ ದಿನಗಳಲ್ಲಿ ಬಲಪಂಥೀಯ ಸಂಘಟನೆಗಳು, ಬಿಜೆಪಿ ನಾಯಕರ ವಿರುದ್ಧ ಕಿಡಿ ಕಾರುತ್ತಿರುವ ನಟ ...

news

ಕಂಚಿಪುರಂನಲ್ಲಿ ತ್ರಿಶಾ ಅವರು ಮಾಡಿರುವ ಕೆಲಸ ಏನು ಗೊತ್ತಾ

ಕಂಚಿಪುರಂ : ದಕ್ಷಿಣ ಭಾರತದ ಫೇಮಸ್ ನಟಿ ತ್ರಿಶಾ ಅವರು ಸ್ವಚ್ಚ ಭಾರತ ಅಭಿಯಾದ ಮೂಲಕ ಸ್ವತಃ ತಾವೇ ನಿಂತು ...

news

ಕ್ಯಾಬ್ ಡ್ರೈವರ್ ವೃತ್ತಿ ನಿರ್ವಹಿಸುತ್ತಿದ್ದ ಶಂಕರ್ ಅಶ್ವತ್ಥ್ ಗೆ ಒಳ್ಳೆ ಹುಡುಗ ಪ್ರಥಮ್ ಮಾಡಿದ್ದೇನು ಗೊತ್ತಾ…?

ಬೆಂಗಳೂರು : ಕನ್ನಡ ಚಿತ್ರರಂಗದ ಅಭಿನಯಿಸಿದ ಕೆ.ಎಸ್. ಅಶ್ವತ್ಥ್ ಅವರು ಎಲ್ಲರಿಗೂ ಚಿರಪರಿಚಿತರಾದವರು. ...

news

ರಾಜಕೀಯ ಬರುವ ಆಸೆ ವ್ಯಕ್ತಪಡಿಸಿದ ಪ್ರಕಾಶ ರೈ

ಪದೇ ಪದೇ ತೊಡೆ ತಟ್ಟಿ ಕರೆದರೆ ರಾಜಕೀಯಕ್ಕೆ ಬರ್ತೇನೆ, ಅದೇನು ದೊಡ್ಡ ವಿಷಯವಲ್ಲ ಎನ್ನುವ ಮೂಲಕ ನಟ ...

Widgets Magazine