ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಜೆಪಿ ಪಕ್ಷ ಸೇರಿಕೊಳ್ಳಲಿದ್ದಾರಾ...?

ಬಾಗಲಕೋಟೆ, ಶನಿವಾರ, 3 ಫೆಬ್ರವರಿ 2018 (06:15 IST)

ಬಾಗಲಕೋಟೆ : ಜೀವನದಲ್ಲಿ ಎದುರಾದ ಕಷ್ಟಗಳನ್ನು ಧೈರ್ಯದಿಂದ ಎದುರಿಸಿ ಕಷ್ಟಪಟ್ಟು ಸ್ಟಾರ್ ಪಟ್ಟ ಅಲಂಕರಿಸಿದ ಸ್ಯಾಂಡಲ್ ವುಡ್ ನ ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಜೀವನದಲ್ಲಿ ಏನಾದರೂ ಸಾಧಿಸಬೇಕಾದರೆ ಹೇಗಿರಬೇಕು ಎಂಬುದನ್ನು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.


ನಗರದ ಎಸ್.ಆರ್.ಎನ್.ಇ. ಪೌಂಡೇಶನ್ ನ ಅದ್ಧೂರಿ ಯುವ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದರ್ಶನ್ ಅವರು, ಜನರನ್ನುದ್ದೇಶಿಸಿ ಮಾತನಾಡುವಾಗ, ‘ಜೀವನದಲ್ಲಿ ಎರಡು ಕೆಲಸ ಮಾಡಬೇಡಿ. ಒಂದು ತಲೆ ಹಿಡಿಯೋದು, ಮತ್ತೊಂದು ತಲೆ ಹೊಡಿಯೋದು. ಇಲ್ಲಿ ಯಾರು ಯಾರಿಗೂ ಆಗಲ್ಲ. ಒಂದು ಗುರಿ ಇಟ್ಟುಕೊಳ್ಳಿ. ಎರಡು ದೋಣಿಯಲ್ಲಿ ಕಾಲಿಡಬೇಡಿ. ನಮ್ಮ ತೆಪ್ಪ ನಮ್ಮ ಕೋಲು ನಮ್ಮ ಕೈಯಲ್ಲಿ ಇರಬೇಕು. ಆಗ ಮಾತ್ರ ದಡ ಮುಟ್ಟೋಕೆ ಸಾಧ್ಯ ಎಂದು ತಮ್ಮ ಅಭಿಮಾನಿಗಳಿಗೆ ಕರೆನೀಡಿದ್ದಾರೆ.


ಅಲ್ಲದೆ ತಮ್ಮ ರಾಜಕೀಯದ ಮುಂದಿನ ನಡೆಯನ್ನ ಈ ವೇದಿಕೆ ಮೂಲಕ ಬಹಿರಂಗ ಪಡಿಸಿದ್ದಾರೆ. ಅಲ್ಲದೇ ಬಿಜೆಪಿ ಪಕ್ಷ ಸೇರಿಕೊಳ್ಳುವ ಮುನ್ಸೂಚನೆಯನ್ನ ನೀಡಿದ್ದಾರೆ ಎಂದು ಯುವ ಉತ್ಸವ ಕಾರ್ಯಕ್ರಮವನ್ನ ಆಯೋಜಿಸಿದ್ದ ಎಸ್.ಆರ್.ಎನ್.ಇ ಪೌಂಡೇಶನ್ ನ ಅಧ್ಯಕ್ಷ ಎಸ್. ಆರ್ ನವಲಿಹಿರೇಮಠ ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಮಗನನ್ನು ಝೀರೊ ಸೈಜ್ ಮಾಡಲು ನಟಿ ಕರೀನಾ ಕಪೂರ್ ಮಾಡಿದ್ದಾದರು ಏನು ಗೊತ್ತಾ...?

ಮುಂಬೈ : ಬಾಲಿವುಡ್ ನಟಿ ಕರೀನಾ ಕಪೂರ್ ಅವರು ಝೀರೊ ಸೈಜ್ ನಟಿ ಎಂದೇ ಪ್ರಖ್ಯಾತಿ ಪಡೆದಿದ್ದು, ಈಗ ತಮ್ಮ ...

news

150 ಕೋಟಿ ಗಳಿಕೆಯ ಸನಿಹದಲ್ಲಿ 'ಪದ್ಮಾವತ್'

ನವದೆಹಲಿ: ಭಾರತದಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಉತ್ತಮವಾದ ಗಳಿಕೆಯನ್ನು ಮುಂದುವರಿಸುತ್ತಿರುವ 'ಪದ್ಮಾವತ್', ...

news

ನಟ ಮಂಡ್ಯ ರಮೇಶ್ ಕಾರು ಅಪಘಾತ

ಬೆಂಗಳೂರು: ಖ್ಯಾತ ಪೋಷಕ ನಟ ಮಂಡ್ಯ ರಮೇಶ್ ಚಲಾಯಿಸುತ್ತಿದ್ದ ಕಾರು ಬೆಂಗಳೂರು-ಮೈಸೂರು ನಡುವಿನ ...

news

ಮುನ್ನಾಭಾಯ್ ಜೀವನಾಧಾರಿತ ಚಿತ್ರದಲ್ಲಿ ಬಣ್ಣ ಹಚ್ಚುತ್ತಿರುವುದು ಯಾರು ಗೊತ್ತಾ...!

ಬಾಲಿವೂಡ್‌ನಲ್ಲಿ ದಿನಕ್ಕೊಂದು ಹೊಸ ರೀತಿಯ ಕಥೆಗಳನ್ನು ಒಳಗೊಂಡ ಚಿತ್ರಗಳು ಬರುತ್ತಿರುವ ಬೆನ್ನಲ್ಲೇ ...

Widgets Magazine
Widgets Magazine