ನಟ ದಿಲೀಪ್ ಆರೋಪಿ ಪಲ್ಸರ್ ಸುನಿಗೆ ಸುಪಾರಿ ಕೊಡುವ ವಿಡಿಯೋ ಲೀಕ್?

Kocchi, ಮಂಗಳವಾರ, 11 ಜುಲೈ 2017 (10:47 IST)

Widgets Magazine

ಕೊಚ್ಚಿ: ಬಹುಭಾಷಾ ನಟಿಯ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ದಿಲೀಪ್ ಮೂರು ವರ್ಷದ ಮೊದಲೇ ಆರೋಪಿ ಪಲ್ಸರ್ ಸುನಿಗೆ ಸುಪಾರಿ ನೀಡಿದ್ದರು ಎಂಬ ವಿಡಿಯೋ ಒಂದು ಪೊಲೀಸರ ಕೈಗೆ ಸಿಕ್ಕಿದೆ ಎಂದು ಮಲಯಾಳಂ ಟಿವಿ ಮಾಧ್ಯಮಗಳು ವರದಿ ಮಾಡಿವೆ.


 
ದಿಲೀಪ್ ಇದೀಗ ಮದುವೆಯಾಗಿರುವ ದ್ವಿತೀಯ ಪತ್ನಿ ಕಾವ್ಯಾ ಮಾಧವನ್ ಜತೆಗಿನ ಅಫೇರ್ ನ್ನು ಬಹಿರಂಗಗೊಳಿಸಿದ್ದರಿಂದ ದಿಲೀಪ್ ಸಿಟ್ಟಿಗೆದ್ದಿದ್ದರು ಎಂದು ಮಾಧ್ಯಮ ವರದಿಗಳು ಹೇಳಿವೆ. ಅದರಂತೆ ಮೂರು ವರ್ಷಗಳ ಹಿಂದೆ ಹೋಟೆಲ್ ಕೊಠಡಿಯೊಂದರಲ್ಲಿ ದಿಲೀಪ್ ಆರೋಪಿ ಪಲ್ಸರ್ ಸುನಿಗೆ ಸುಪಾರಿ ನೀಡಿದ್ದರು ಎಂದು ಮಾಧ್ಯಮಗಳು ಹೇಳಿಕೊಂಡಿವೆ.
 
ಅದರ ವಿಡಿಯೋಗಳು ಪೊಲೀಸರ ಕೈಗೆ ಸಿಕ್ಕಿವೆ. ಇದರಲ್ಲಿ ದಿಲೀಪ್ ಪ್ರಮುಖ ಆರೋಪಿಗೆ ತನಗೆ ನಟಿಯ ಫೋಟೋಗಳು ಬೇಕು ಎಂದು ಡಿಮ್ಯಾಂಡ್ ಮಾಡಿದ್ದರು ಎಂದು ಖಾಸಗಿ ವಾಹಿನಿಗಳು ಹೇಳಿವೆ. ಇದರೊಂದಿಗೆ ಈ ಪ್ರಕರಣದಲ್ಲಿ ನಟನ ವಿರುದ್ಧ ಕೇರಳಾದ್ಯಂತ ಪ್ರತಿಭಟನೆಗಳು ತಾರಕಕ್ಕೇರುವಂತೆ ಮಾಡಿವೆ. ಅಲ್ಲದೆ ಈ ಪ್ರಕರಣದಲ್ಲಿ ನಟ ದಿಲೀಪ್ ರನ್ನು ಸಮರ್ಥಿಸಿಕೊಂಡಿರುವ ಮಲಯಾಳಂ ಕಲಾವಿದರ ಸಂಘ ‘ಅಮ್ಮ’ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಇದರಿಂದಾಗಿ ನಟ ಮಮ್ಮೂಟ್ಟಿ ಸೇರಿದಂತೆ ಪ್ರಮುಖ ನಟರ ಮನೆಗೆ ಬಿಗಿ ಭದ್ರತೆ ಒದಗಿಸಲಾಗಿದೆ.
 
ಇದನ್ನೂ ಓದಿ.. ನಟ ದಿಲೀಪ್ ಬಗ್ಗೆ ತನಿಖಾ ತಂಡದ ಮೂಲಗಳನ್ನು ಆಧರಿಸಿ ಹೊರಹಾಕಿದ ಭಯಾನಕ ಸತ್ಯಗಳು!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ನಟ ದಿಲೀಪ್ ಮಲಯಾಳಂ ಸಿನಿಮಾ ಮಲಯಾಳಂ ಮಾಧ್ಯಮ Actor Dileep Malayalam Film Malayalam Media

Widgets Magazine

ಸ್ಯಾಂಡಲ್ ವುಡ್

news

ನಟ ದಿಲೀಪ್ ಬಂಧನಕ್ಕೆ ಕಾರಣವಾಯ್ತಾ ಸೆಲ್ಫೀ..? ಮಲೆಯಾಳಿ ನಟಿಗೆ ಲೈಂಗಿಕ ಕಿರುಕುಳದ ಸ್ಫೋಟಕ ಮಾಹಿತಿ ಬಹಿರಂಗ

ಮಲೆಯಾಳಂ ನಟಿಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣದಲ್ಲಿ ನಟ ದಿಲೀಪ್ ಜೈಲು ಸೇರಿದ್ದಾಗಿದೆ. ಇದೀಗ, ಈಜೊ ...

news

ನಟ ದಿಲೀಪ್ ಬಗ್ಗೆ ತನಿಖಾ ತಂಡದ ಮೂಲಗಳನ್ನು ಆಧರಿಸಿ ಮಲಯಾಳಂ ಮಾಧ್ಯಮ ಹೊರಹಾಕಿದ ಭಯಾನಕ ಸತ್ಯಗಳು!

ಕೊಚ್ಚಿ: ಮಲಯಾಳಂ ಸೂಪರ್ ಸ್ಟಾರ್ ದಿಲೀಪ್ ಬಹುಭಾಷಾ ತಾರೆಯ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ...

news

ಶಿವರಾಜ್ ಕುಮಾರ್ ಹೊಗಳುತ್ತಾ ಎಡವಟ್ಟು ಮಾಡಿಕೊಂಡ ತೆಲುಗು ನಟ ಬಾಲಕೃಷ್ಣ

ಬೆಂಗಳೂರು: ತೆಲುಗು ಸ್ಟಾರ್ ನಟ ಬಾಲಕೃಷ್ಣ ಇತ್ತೀಚೆಗೆ ಶಿವರಾಜ್ ಕುಮಾರ್ ಅಭಿನಯದ ಮಾಸ್ ಲೀಡರ್ ಅಡಿಯೋ ...

news

ಪಾಪರ್ ಆದ ವಿತರಕರ ಜೇಬು ತುಂಬಲು ಮುಂದಾದ ಸಲ್ಮಾನ್ ಖಾನ್

ಮುಂಬೈ: ಸಲ್ಮಾನ್ ಖಾನ್ ಅಭಿನಯದ ‘ಟ್ಯೂಬ್ ಲೈಟ್’ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ನಿರೀಕ್ಷಿತ ಹಣ ಗಳಿಸಲಿಲ್ಲ. ...

Widgets Magazine