ಜೈಲಿನ ಜತೆಗೆ ಮಗಳ ಸುಪರ್ದಿಯನ್ನೂ ಕಳೆದುಕೊಳ್ಳಲಿದ್ದಾರಾ ನಟ ದಿಲೀಪ್?

Kocchi, ಬುಧವಾರ, 12 ಜುಲೈ 2017 (11:33 IST)

ಕೊಚ್ಚಿ: ಬಹುಭಾಷಾ ತಾರೆಯ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿತರಾಗಿರುವ ಮಲಯಾಳಂ ನಟ ದಿಲೀಪ್ ವೈಯಕ್ತಿಕ ಜೀವನದಲ್ಲೂ ಸಂಕಷ್ಟಕ್ಕೀಡಾಗುವ ಸಾಧ್ಯತೆಯಿದೆ.


 
ಮೊದಲ ಪತ್ನಿ, ನಟಿ ಮಂಜು ವಾರಿಯರ್ ರಿಂದ ವಿಚ್ಛೇದನಗೊಂಡ ಬಳಿಕವೂ ಪುತ್ರಿ ದಿಲೀಪ್ ಬಳಿಯಲ್ಲೇ ಇದ್ದರು. ಆದರೆ ಇದೀಗ ಮಂಜು ವಾರಿಯರ್ ಮಗಳ ಭವಿಷ್ಯದ ದೃಷ್ಟಿಯಿಂದ ಆಕೆಯನ್ನು ತನ್ನ ಸುಪರ್ದಿಗೆ ಒಪ್ಪಿಸಬೇಕೆಂದು ನ್ಯಾಯಾಲಯ ಮೊರೆ ಹೋಗುವ ಸಾಧ್ಯತೆಯಿದೆ ಎಂದು ಮಲಯಾಳಂ ಮಾಧ್ಯಮ ವರದಿಗಳು ತಿಳಿಸಿವೆ.
 
ಇದೀಗ ಚಿತ್ರರಂಗದ ಪ್ರಮುಖ ನಾಯಕ ನಟರೂ ಅವರ ವಿರುದ್ಧ ಮಾತನಾಡಿದ್ದಾರೆ. ದಿಲೀಪ್ ಗೆ ಮೊದಲಿನಿಂದಲೂ ಬೆಂಬಲವಾಗಿ ನಿಂತಿದ್ದ ನಟ ಮುಖೇಶ್ ಕೂಡಾ ಇದೀಗ ದಿಲೀಪ್ ನನ್ನ ಸಹೋದರನಂತಿದ್ದರು. ಇಂತಹ ಕೆಲಸ ಮಾಡಬಹುದು ಎಂದುಕೊಂಡಿರಲಿಲ್ಲ ಎಂದಿದ್ದಾರೆ.
 
ಅಲ್ಲದೆ, ಇನ್ನೊಬ್ಬ ಸೂಪರ್ ಸ್ಟಾರ್, ದಿಲೀಪ್ ನಿಕಟವರ್ತಿಯಾಗಿದ್ದ ಜಯರಾಂ ಕೂಡಾ ದಿಲೀಪ್ ರಿಂದ ಇಂತಹ ವರ್ತನೆ ನಿರೀಕ್ಷಿಸಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ಮಲಯಾಳಂ ಸಿನಿಮಾ ಸಂಘಟನೆಗಳಿಂದಲೂ ವಜಾಗೊಂಡಿರುವ ದಿಲೀಪ್ ಏಕಾಂಗಿಯಾಗಿದ್ದಾರೆ.
 
ಇದನ್ನೂ ಓದಿ.. ಆಪಲ್ ನಲ್ಲಿರುವ ವಿಷಾಂಶ ತೆಗೆಯಲು ಒಂದೊಳ್ಳೆ ಐಡಿಯಾ
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕೆಲಸ ಬೇಕೆಂದರೆ ನನ್ನ ಜೊತೆ ಮಲಗು ಎನ್ನುತ್ತಿದ್ದ ಆಂಟಿಯರು.. ಕಾಸ್ಟಿಂಗ್ ಕೌಚ್ ಕರಾಳ ಮುಖ ಬಿಚ್ಚಿಟ್ಟ ನಟ

ಆರ್ ಯೂ ಕಂಫರ್ಟಬಲ್ ಇನ್ ಬೆಡ್..? ಈ ಮಾತನ್ನ ಯಾರು ಕೇಳಿದ್ದು ಗೊತ್ತಾ..? ಬಾಲಿವುಡ್ ಪಾದಾರ್ಪಣೆಯ ...

news

ಮತ್ತೆ ಜೋಗದ ಗುಂಡಿಗೆ ಹೊಕ್ಕ ಗಣೇಶ್-ಭಟ್ಟರ ಜೋಡಿ

ಬೆಂಗಳೂರು: ಯೋಗರಾಜ್ ಭಟ್ ಮತ್ತು ಗಣೇಶ್ ಜೋಡಿಯ ಸಿನಿಮಾಗಳೆಂದರೆ ನೆನಪಾಗುವುದು ಜೋಗದ ಗುಂಡಿ. ಜೋಗ್ ಫಾಲ್ಸ್ ...

news

ಕಿಚ್ಚ ಸುದೀಪ್ ಮಾಡಿದ ಭೀಷ್ಮ ಪ್ರತಿಜ್ಞೆ ಏನದು?

ಬೆಂಗಳೂರು: ಶಿವರಾಜ್ ಕುಮಾರ್ ಈ ವರ್ಷ ಬರ್ತ್ ಡೇ ಆಚರಿಸಿಕೊಳ್ಳಲ್ಲ ಎಂದು ಘೋಷಿಸಿದ ಬೆನ್ನಲ್ಲೇ ಕಿಚ್ಚ ...

news

ಕತ್ರೀನಾ ಕೈಫ್ ಲಿಬಿಯಾ ಸರ್ವಾಧಿಕಾರಿ ಗಡಾಫಿ ಜೊತೆಗಿದ್ದ ಪೋಟೋ ವೈರಲ್

ಬಂಡುಕೋರರಿಂದ ಹತ್ಯೆಗೀಡಾದ ಲಿಬಿಯಾದ ಸರ್ವಾಧಿಕಾರಿ ಮುಮ್ಮರ್ ಗಡಾಫಿ ಜೊತೆ ಬಾಲಿವುಡ್`ನ ಖ್ಯಾತ ನಟಿ ...

Widgets Magazine