Widgets Magazine

ವಿದೇಶೀ ಶೂಟಿಂಗ್ ಕ್ಯಾನ್ಸಲ್ ಮಾಡುತ್ತಿರುವ ಸಿನಿಮಾ ತಂಡಗಳು

ಬೆಂಗಳೂರು| Krishnaveni K| Last Modified ಶುಕ್ರವಾರ, 15 ಮೇ 2020 (08:56 IST)
ಬೆಂಗಳೂರು: ಕೊರೋನಾವೈರಸ್ ನಿಂದಾಗಿ ಜನ ಈಗ ಮನೆಯಿಂದ ಹೊರಬರಲು ಹಿಂಜರಿಯುವಂತಾಗಿದೆ. ಸ್ಯಾಂಡಲ್ ವುಡ್ ಕತೆಯೂ ಇದಕ್ಕೆ ಭಿನ್ನವಿಲ್ಲ.

 
ಹಲವು ಸಿನಿಮಾ ತಂಡಗಳು ತಮ್ಮ ಹಾಡುಗಳ ಚಿತ್ರೀಕರಣಕ್ಕೆ ವಿದೇಶಕ್ಕೆ ಹೋಗುವ ಪ್ಲ್ಯಾನ್ ಹಾಕಿಕೊಂಡಿದ್ದವು. ಆದರೆ ಕೊರೋನಾದಿಂದಾಗಿ ವಿದೇಶ ಪ್ರವಾಸ ರಿಸ್ಕ್ ಎಂದು ಭಾರತದಲ್ಲೇ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ತೀರ್ಮಾನಿಸಿದೆ.
 
ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ’, ‘ಗಾಳಿಪಟ 2’ ಸಿನಿಮಾ ತಂಡಗಳು ವಿದೇಶಕ್ಕೆ ತೆರಳಿ ಶೂಟಿಂಗ್ ಮಾಡುವ ಬದಲು ನಮ್ಮ ರಾಜ್ಯದಲ್ಲೇ ಅತ್ಯುತ್ತಮ ತಾಣಗಳಲ್ಲಿ ಚಿತ್ರೀಕರಣ ನಡೆಸಲು ತೀರ್ಮಾನಿಸಿದೆ. ಈ ನಡುವೆ ರೆಮೋ ಚಿತ್ರತಂಡವಂತೂ ನಮ್ಮದೇ ದೇಶದ ಕಾಶ್ಮೀರಕ್ಕೆ ಹೋಗಲು ಸಾಧ‍್ಯವಾಗದೇ ಗ್ರಾಫಿಕ್ಸ್ ನಲ್ಲೇ ತೋರಿಸಲು ತೀರ್ಮಾನಿಸಿದೆ. ಹೀಗಾಗಿ ಕೊರೋನಾ ಚಿತ್ರತಂಡಗಳ ವಿದೇಶೀ ಕನಸಿಗೆ ತಣ್ಣೀರೆರಚಿದೆ.
ಇದರಲ್ಲಿ ಇನ್ನಷ್ಟು ಓದಿ :