ಮದುವೆ ಆನಿವರ್ಸರಿಗೆ ಗೋಲ್ಡನ್ ಸ್ಟಾರ್ ಗಣೇಶ್ ಗೆ ಭರ್ಜರಿ ಗಿಫ್ಟ್ ಕೊಟ್ಟವರಾರು ಗೊತ್ತಾ?!

ಬೆಂಗಳೂರು, ಸೋಮವಾರ, 12 ಫೆಬ್ರವರಿ 2018 (09:42 IST)

ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ದಂಪತಿಗೆ ನಿನ್ನೆ ಸ್ಪೆಷಲ್ ದಿನ. ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟು ನಿನ್ನೆಗೆ 10 ವರ್ಷ. ತಮ್ಮ 10 ನೇ ವರ್ಷದ ಮದುವೆ ವಾರ್ಷಿಕೋತ್ಸವಕ್ಕೆ ಗಣೇಶ್ ಗೆ ಭರ್ಜರಿ ಗಿಪ್ಟ್ ಸಿಕ್ಕಿದೆ. ಅದನ್ನು ಕೊಟ್ಟವರು ಯಾರು ಗೊತ್ತಾ?
 

ಮಗಳು ಚಾರಿತ್ರ್ಯ ಕಡೆಯಿಂದ ಗಣೇಶ್ ಗೆ ಮರೆಯಲಾರದ ಉಡುಗೊರೆ ಸಿಕ್ಕಿದೆ. ತನ್ನ ಪ್ರೀತಿಯ ಅಪ್ಪ ಅಮ್ಮನಿಗೆ ತಾನೇ ಕೈಯಾರೆ ಗ್ರೀಟಿಂಗ್ ಮಾಡಿರುವ ಚಾರಿತ್ರ್ಯ ಅದರಲ್ಲಿ ಸುಂದರವಾಗಿ ತನ್ನದೇ ಕೈ  ಬರಹದಲ್ಲಿ ಅಪ್ಪ –ಅಮ್ಮ ಎಂದರೆ ತನಗೆ ಯಾಕಿಷ್ಟ ಎಂದು ಬರೆದುಕೊಂಡಿದ್ದಾಳೆ. ಗಿಫ್ಟ್ ನೋಡಿ ಭಾವುಕರಾದ ಗಣೇಶ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿದ್ದಾರೆ.
 
ಅಷ್ಟೇ ಅಲ್ಲದೆ, ಇದೇ ದಿನ ಗಣೇಶ್ ಅಭಿನಯದ ‘ಆರೆಂಜ್’ ಸಿನಿಮಾ ಮುಹೂರ್ತವೂ ನೆರವೇರಿದೆ. ಈ ಸಂದರ್ಭದಲ್ಲಿ ಪಕ್ಕಾ ವೈಟ್ ಆಂಡ್ ವೈಟ್ ಪಂಚೆ, ಅಂಗಿಯಲ್ಲಿ ಮಿಂಚಿದ ಗಣೇಶ್ ಗೆ ಪತ್ನಿ ಶಿಲ್ಪಾ ಕೂಡಾ ಸಾಥ್ ನೀಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ನಟಿ ಪ್ರಿಯಾಂಕ ಚೋಪ್ರಾ ಬಾಯ್ ಫ್ರೆಂಡ್ ಯಾರು ಗೊತ್ತಾ...?

ಮುಂಬೈ: ನಟಿ ಪ್ರಿಯಾಂಕ ಚೋಪ್ರಾ ಮದುವೆ, ಮಕ್ಕಳ ಕನಸಿನ ಬಗ್ಗೆ ಸಾಕಷ್ಟು ಬಾರಿ ಮಾತನಾಡಿದ್ದರು. ಈಗ ...

news

ಚುನಾವಣೆಗೆ ಸಂಬಂಧಿಸಿದಂತೆ ಜನರಿಗೆ ಕಿಚ್ಚ ಸುದೀಪ್ ನೀಡಿರುವ ಸಂದೇಶವೇನು ಗೊತ್ತಾ...?

ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರು ...

news

ಪತಿ ಕೊಹ್ಲಿ ಅವರ ಜೊತೆ ಶೋವೊಂದಕ್ಕೆ ಬರಲು ಅನುಷ್ಕಾ ನಿರಾಕರಿಸಿದ್ಯಾಕೆ...?

ಮುಂಬೈ : ಅನುಷ್ಕಾ ಅವರು ತಮ್ಮ ಪತಿ ಕೊಹ್ಲಿ ಅವರ ಜೊತೆ ಕಾಫಿ ವಿತ್ ಕರಣ್ ಶೋಗೆ ಬರಲು

news

ಪುನೀತ್ ರಾಜ್‍ಕುಮಾರ್ ಗೆ ಅಭಿಮಾನಿಯೊಬ್ಬರು ನೀಡಿರುವ ವಿಶೇಷವಾದ ಉಡುಗೊರೆ ಏನು ಗೊತ್ತಾ...?

ಬೆಂಗಳೂರು : ಸ್ಯಾಂಡಲ್ ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಅಭಿಮಾನಿಯೊಬ್ಬರು ನೀಡಿರುವ ...

Widgets Magazine
Widgets Magazine