ಸರಿಗಮಪ ಲಿಟಲ್ ಚಾಂಪ್ಸ್ 14 ರಲ್ಲಿ ರಾಜೇಶ್ ಕೃಷ್ಣನ್ ಸ್ಥಾನಕ್ಕೆ ಬರಲಿರುವ ತೀರ್ಪುಗಾರರು ಯಾರು ಗೊತ್ತಾ?

ಬೆಂಗಳೂರು, ಶುಕ್ರವಾರ, 24 ನವೆಂಬರ್ 2017 (11:08 IST)

ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ 13 ಕಂತು ಮುಗಿಸಿರುವ ಸರಿಗಮಪ ಲಿಟಲ್ ಚಾಂಪ್ಸ್ ಕಾರ್ಯಕ್ರಮದಲ್ಲಿ ರಾಜೇಶ್ ಕೃಷ್ಣನ್ ತೀರ್ಪುಗಾರರಾಗಿದ್ದರು. ಆದರೆ 14 ನೇ ಕಂತಿಗೆ ಅವರು ತೀರ್ಪುಗಾರರಾಗಿರುವುದಿಲ್ಲ. ಅವರ ಬದಲಿಗೆ ಆ ಸ್ಥಾನಕ್ಕೆ ಬರುವವರು ಯಾರು ಗೊತ್ತಾ?
 

ಮೊದಲಿಗೆ ರಾಜೇಶ್ ಕೃಷ್ಣನ್ ಬದಲಿಗೆ ಸಂಗೀತ ನಿರ್ದೇಶಕ, ಗಾಯಕ ರಘು ದೀಕ್ಷಿತ್ ಬರುತ್ತಾರೆಂಬ ಸುದ್ದಿಗಳಿತ್ತು. ಆದರೆ ಅದೆಲ್ಲಾ ವದಂತಿಗಳಿಗೆ ತೆರೆ ಬಿದ್ದಿದ್ದು, ರಾಜೇಶ್ ಸ್ಥಾನಕ್ಕೆ ನಾದಬ್ರಹ್ಮ ಹಂಸಲೇಖಾ ತೀರ್ಪುಗಾರರಾಗುವುದು ಖಚಿತವಾಗಿದೆ.
 
ಹಂಸಲೇಖಾ ಇದಕ್ಕೂ ಮೊದಲೂ ಸರಿಗಮಪ ಕಾರ್ಯಕ್ರಮದ ತೀರ್ಪುಗಾರರಾಗಿ ಕೆಲಸ ಮಾಡಿದ್ದರು. ಅಷ್ಟೇ ಅಲ್ಲದೆ, ಪ್ರತೀ ಕಂತಿನ ಫೈನಲ್ ಎಪಿಸೋಡ್ ನಲ್ಲಿ ವಿಶೇಷ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದರು. ಇನ್ನು ಮುಂದೆ ಪ್ರತೀ ಎಪಿಸೋಡ್ ನಲ್ಲೂ ಅವರೇ ಇರಲಿದ್ದಾರೆ.
 
ರಾಜೇಶ್ ಕೃಷ್ಣನ್ ಈ ಕಂತಿನಲ್ಲಿ ಹೊರಗುಳಿದಿರುವುದು ಅವರ ಅಭಿಮಾನಿಗಳಿಗೆ ತೀವ್ರ ಬೇಸರ ಉಂಟು ಮಾಡಿದೆ. ಇವರ ಹೊರತಾಗಿ ವಿಜಯ್ ಪ್ರಕಾಶ್ ಮತ್ತು ಅರ್ಜುನ್ ಜನ್ಯಾ ತೀರ್ಪುಗಾರರಾಗಿ ಮುಂದುವರಿಯಲಿದ್ದು, ಅನುಶ್ರೀ ನಿರೂಪಿಸಲಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಸರಿಗಮಪ ಲಿಟಲ್ ಚಾಂಪ್ಸ್ ಜೀ ಕನ್ನಡ ವಾಹಿನಿ ಕನ್ನಡ ಕಿರುತೆರೆ Zee Kannada Kannada Tv Saregamapa Little Champs

ಸ್ಯಾಂಡಲ್ ವುಡ್

news

ನಟಿ ರಮ್ಯಾಗೆ ಮದರ್ ಥೆರೇಸಾ ಅವಾರ್ಡ್

ನವದೆಹಲಿ: ನಟಿ ರಮ್ಯಾ ಸಮಾಜಸೇವೆ ಪರಿಗಣಿಸಿ ಪ್ರತಿಷ್ಠಿತಿ ಮದರ್ ಥೆರೇಸಾ ಅವಾರ್ಡ್ ನೀಡಿ ಗೌರವಿಸಲಾಗಿದೆ. ...

news

ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಗಳಿಗೆ ಅನಾರೋಗ್ಯ!

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಗಳು ಒಬ್ಬರಾದ ಮೇಲೆ ಒಬ್ಬರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ...

news

ಉಸ್ಸಪ್ಪಾ…! ಕೊನೆಗೂ ‘ಅಮೃತವರ್ಷಿಣಿ’ ಕತೆ ಮುಗಿಯಿತು!

ಬೆಂಗಳೂರು: ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತವರ್ಷಿಣಿ ಅದೆಷ್ಟು ಹೆಣ್ಣುಮಕ್ಕಳ ...

news

ಲಕ್ಷ್ಮೀ ರೈ ಬೋಲ್ಡ್ ಸೀನ್ ಲೀಕ್ ಹಿಂದೆ ನಡೆದಿದೆಯಾ ಸಂಚು?!

ಮುಂಬೈ: ಬಾಲಿವುಡ್ ನಟಿ ಲಕ್ಷ್ಮೀ ರೈ ಮುಖ್ಯಪಾತ್ರದಲ್ಲಿ ಅಭಿನಯಿಸಿರುವ ಜೂಲಿ 2 ಸಿನಿಮಾದ ಕೆಲವು ಬೋಲ್ಡ್ ...

Widgets Magazine