ರಸ್ತೆ ಅಪಘಾತದಲ್ಲಿ ಮೃತಪಟ್ಟ ಸ್ಯಾಂಡಲ್ ವುಡ್ ನ ಯುವ ನಟ ಹೇಮಂತ್ ಕುಮಾರ್

ಬೆಂಗಳೂರು, ಗುರುವಾರ, 16 ಆಗಸ್ಟ್ 2018 (06:59 IST)

ಬೆಂಗಳೂರು : ಸ್ಯಾಂಡಲ್ ವುಡ್ ನ ಯುವ ನಟ ಹಾಗೂ ನಿರ್ದೇಶಕ ಹೇಮಂತ್ ಕುಮಾರ್ (25)  ಬುಧವಾರ (ನಿನ್ನೆ) ನೆಲಮಂಗಲದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.


ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ವೀರನಂಜೀಪುರ ಬಳಿ ಈ ಭೀಕರ ಅಪಘಾತ ಸಂಭವಿಸಿದ್ದು, ರಾಷ್ಟ್ರೀಯ ಹೆದ್ದಾರಿ 4ರ ರಸ್ತೆ ವಿಭಜಗಕ್ಕೆ ವಾಹನ ಡಿಕ್ಕಿ ಹೊಡೆದ ಪರಿಣಾಮ ಹೇಮಂತ್ ಮೃತಪಟ್ಟಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಎರಡು ಕೈಗಳಿಲ್ಲದ ಅಂಗವಿಕಲ ಹೇಮಂತ್ ಕುಮಾರ್ ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು. ತನ್ನದೇ ಆದ ಕಿರು ಚಿತ್ರಗಳಿಗೆ ನಿರ್ದೇಶನ ಮಾಡುತ್ತಿದ್ದರು. ಅರ್ಜುನ್ ಜನ್ಯ ಹಾಗೂ ದುನಿಯಾ ವಿಜಿ ಅವರ ಮೆಚ್ಚುಗೆಗೆ ಸಹ ಪಾತ್ರರಾಗಿದ್ದರು. ಹೈಕ ಎಂಬ ಕಿರುಚಿತ್ರಕ್ಕೆ ಧ್ವನಿ ಕೂಡ ನೀಡಿದ್ದರು. ಕೈಗಳು ಇಲ್ಲದಿದ್ದರೂ ಇವರು ಕಾಲುಗಳನ್ನು ಬಳಸಿಕೊಂಡು ಬೈಕ್ ಚಲಾಯಿಸುತ್ತಿದ್ದದ್ದು ವಿಶೇಷವಾಗಿತ್ತು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದ ನಟಿ ಅನುಪ್ರಭಾಕರ್

ಬೆಂಗಳೂರು : ನಟಿ ಅನುಪ್ರಭಾಕರ್ ಹಾಗೂ ನಟ ರಘು ಮುಖರ್ಜಿ ದಂಪತಿಗಳು ಸ್ವಾತಂತ್ಯ ದಿನಾಚರಣೆಯ ದಿನದಂದು ತಮ್ಮ ...

news

ಸದ್ಯದಲ್ಲೆ ಮದುವೆಯಾಗ್ತಾರಂತೆ ರಣಬೀರ್ - ಆಲಿಯಾ

ಮುಂಬೈ : ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ನಟಿ ಆಲಿಯಾ ಭಟ್ ಇಬ್ಬರು ಪ್ರೀತಿಸುತ್ತಿರುವ ವಿಷಯ ಈಗಾಗಲೇ ...

news

ನಟ ಪ್ರಭಾಸ್ ಸಂಜಯ್ ಲೀಲಾ ಬನ್ಸಾಲಿರವರ ‘ಪದ್ಮಾವತ್’ ಚಿತ್ರದ ಆಫರ್ ನಿರಾಕರಿಸಿದ್ಯಾಕೆ ಗೊತ್ತಾ?

ಹೈದರಾಬಾದ್ : ಟಾಲಿವುಡ್ ನ ಸೂಪರ್ ಸ್ಟಾರ್ ಪ್ರಭಾಸ್ ಅವರಿಗೆ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಬಾಲಿವುಡ್ ...

news

ಹೀನಾಖಾನ್ ಗಣೇಶನ ಮೂರ್ತಿ ಬಳಿ ನಿಂತು ತೆಗೆದ ಫೋಟೋ ಟ್ರೋಲ್ ಆಗಿದ್ಯಾಕೆ?

ಮುಂಬೈ : ಕಿರುತೆರೆ ನಟಿ ಹಾಗು ಬಿಗ್​ಬಾಸ್​ ಮಾಜಿ ಸ್ಪರ್ಧಿ ಹೀನಾಖಾನ್​ ಗಣೇಶನ ಮೂರ್ತಿ ಬಳಿ ನಿಂತು ತೆಗೆದ ...

Widgets Magazine