ಯುರೋಪ್‌ ನಲ್ಲಿ ವಸಿಷ್ಠ ಸಿಂಹ ಹಾಗೂ ಮಾನ್ವಿತಾರನ್ನು ಲಂಡನ್‌ ಪೊಲೀಸರು ಅರೆಸ್ಟ್ ಮಾಡಿದ್ಯಾಕೆ?

ಬೆಂಗಳೂರು, ಶನಿವಾರ, 11 ಆಗಸ್ಟ್ 2018 (15:59 IST)

ಬೆಂಗಳೂರು : ಕನ್ನಡ ಖ್ಯಾತ ನಾಗತಿಹಳ್ಳಿ ಚಂದ್ರಶೇಖರ್ ಅವರ ಹೊಸ ಸಿನಿಮಾದ ಶೂಟಿಂಗ್ ವೇಳೆ ಚಿತ್ರದ ನಾಯಕ ಹಾಗೂ ನಾಯಕಿ ಮಾನ್ವಿತಾ ಅವರನ್ನು ಲಂಡನ್‌ ಪೊಲೀಸರು ಅರೆಸ್ಟ್‌ ಮಾಡಿದ್ದಾರಂತೆ.


ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಇನ್ನೂ ಹೆಸರಿಡದ ಈ ಸಿನಿಮಾದಲ್ಲಿ ವಸಿಷ್ಠ ಸಿಂಹ- ಮಾನ್ವಿತಾ ನಟಿಸ್ತಿದ್ದಾರೆ. ಇದೀಗ  ಈ ಸಿನಿಮಾದ ಶೂಟಿಂಗ್ ಗಾಗಿ  ಇಡೀ ಚಿತ್ರತಂಡ ಯುರೋಪ್‌ಗೆ ಹೋಗಿದೆ. ಅಲ್ಲಿ ನಡು ರಸ್ತೆಯಲ್ಲಿ ಸ್ಟೆಪ್ ಹಾಕಿದ ಮಾನ್ವಿತಾ ಡಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿತ್ತು.


ಆದರೆ ಶೂಟಿಂಗ್ ವೇಳೆ ಮಾನ್ವಿತಾ, ವಸಿಷ್ಠ ಹಾಡುತ್ತಾ, ಕುಣಿಯುತ್ತಾ, ಲವರ್‌ಗಳಂತೆ ಫೋಸ್‌ ಕೊಟ್ಟಿದ್ದಾರೆ. ಇದನ್ನ ನೋಡಿದ್ದ ಲಂಡನ್‌ ಪೊಲೀಸರು ಇದು ಸಾರ್ವಜನಿಕ ಸ್ಥಳ ಇಲ್ಲಿ ಹೀಗೆಲ್ಲಾ ಮಾಡಲು ಅನುಮತಿ ಇಲ್ಲ. ಇದು ಅಪರಾಧ  ಎಂದು ಇವರಿಬ್ಬರನ್ನೂ ಅರೆಸ್ಟ್‌ ಮಾಡಿದ್ದಾರಂತೆ. ನಂತರ ಇದು ಸಿನಿಮಾ ಶೂಟಿಂಗ್‌ ಎಂದು ಗೊತ್ತಾಗಿ, ಮಾನ್ವಿತಾ ಮತ್ತು ವಸಿಷ್ಠ ಜೊತೆಗೆ ಒಂದು ಒಂದು ಫೊಟೋ ತೆಗೆಸಿಕೊಂಡು ಹೊರಟ್ಟಿದ್ದಾರಂತೆ. ಈ ವಿಚಾರವನ್ನ ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ಫೇಸ್‌ಬುಕ್‌ ಪೇಜ್‌ ನಲ್ಲಿ ಬರೆದುಕೊಂಡಿದ್ದಾರೆ.


ಆದರೆ ಈ ಸುದ್ದಿ ಸುಳ್ಳು. ಇದು ಸಿನಿಮಾ ಗಿಮ್ಮಿಕ್ ಅಂತ ಹೇಳಲಾಗ್ತಾ ಇದೆ. ಜೊತೆಗೆ ಸಿನಿಮಾ ಪ್ರಚಾರ ತಗೊಳೋ ನಿಟ್ಟಿನಲ್ಲಿ ಹೀಗೆ ಮಾಡಿದ್ದಾರೆ ಎನ್ನಲಾಗ್ತಾ ಇದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಬೆಂಗಳೂರು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ವಸಿಷ್ಠ ಸಿಂಹ ಮಾನ್ವಿತಾ Bangalore Director Manvitha Vasistta Simha Nagathihalli Chandra Shekar

ಸ್ಯಾಂಡಲ್ ವುಡ್

news

ಕರೀನಾ ಕಪೂರ್ ಬ್ಯಾಗ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ!

ಮುಂಬೈ: ಬಾಲಿವುಡ್ ತಾರೆ ಕರೀನಾ ಕಪೂರ್ ಇತ್ತೀಚೆಗೆ ಪಾರ್ಟಿಯೊಂದಕ್ಕೆ ತೆಗೆದುಕೊಂಡು ಹೋಗಿದ್ದ ಹ್ಯಾಂಡ್ ...

news

ಶ್ರೀದೇವಿ ಪುತ್ರಿ ಜಾಹ್ನವಿಯ ರಿಯಲ್ ಕಹಾನಿ ಕೇಳಿದ್ರೆ ಶಾಕ್ ಆಗ್ತೀರಾ!

ಮುಂಬೈ: ಬಾಲಿವುಡ್ ನಟಿ ಶ್ರೀದೇವಿ ತೀರಿಕೊಂಡರೂ ಅವರ ಪುತ್ರಿ ಜಾಹ್ನವಿ ತೆರೆ ಮೇಲೆ ಧಡಕ್ ಸಿನಿಮಾ ಮೂಲಕ ...

news

ಕರಣ್ ಜೋಹರ್ ಈ ಚಿತ್ರದಲ್ಲಿ ನಟಿಸಲಿದ್ದಾರಂತೆ ಈ ಮೂವರು

ಮುಂಬೈ: ಬಾಲಿವುಡ್ ನಿರ್ದೇಶಕ ನಟ ಕರಣ್ ಜೋಹರ್ ಈಗ ದೊಡ್ಡ ಪ್ರಾಜೆಕ್ಟ್ ನ ತಯಾರಿಯಲ್ಲಿ ...

news

ಪತಿಗೆ ಗೇಟ್ ಪಾಸ್ ಕೊಟ್ಟ ಸೋಫಿಯಾ ಈಗ ಇರುವುದು ಯಾರ ತೆಕ್ಕೆಯಲ್ಲಿ ಗೊತ್ತಾ?

ಮುಂಬೈ: ಬಾಲಿವುಡ್ ನಟಿ ಸೋಫಿಯಾ ಹಯಾತ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಪತಿಯಿಂದ ದೂರವಾಗಿರುವ ಸೊಫಿಯಾ ...

Widgets Magazine
Widgets Magazine