‘ಪಡ್ಡೆಹುಲಿ’ ಗೆ ನಿಶ್ವಿಕಾ ನಾಯ್ಡು ನಾಯಕಿಯಾಗಿ ಮಿಂಚಲಿದ್ದಾರೆ !!

ಅತಿಥಾ 

ಬೆಂಗಳೂರು, ಬುಧವಾರ, 7 ಮಾರ್ಚ್ 2018 (19:17 IST)

Widgets Magazine

ಕನ್ನಡದ ಖ್ಯಾತ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಅವರ ಚೊಚ್ಚಲ ಚಿತ್ರ ‘ಪಡ್ಡೆಹುಲಿ’ಗೆ ನಿಶ್ವಿಕಾ ನಾಯ್ಡು ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

‘ವಾಸು ನಾನ್ ಪಕ್ಕಾ ಕಮರ್ಷಿಯಲ್’ ಮತ್ತು ‘ಅಮ್ಮ ಐ ಲವ್ ಯು’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ನಿಶ್ವಿಕಾ ನಾಯ್ಡು ಈಗ ‘ಪಡ್ಡೆ ಹುಲಿ’ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. 
 
ತೇಜಸ್ವಿನಿ ಎಂಟರ್ ಪ್ರೈಸಸ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ ಚಿತ್ರವನ್ನು ಎಂ.ರಮೇಶ್ ರೆಡ್ಡಿ ನಿರ್ಮಿಸುತ್ತಿದ್ದಾರೆ. "ಪಡ್ಡೆ ಹುಲಿ' ಇದೇ ತಿಂಗಳ 11ಕ್ಕೆ ಪ್ರಾರಂಭವಾಗಲಿದ್ದು ಈಗಾಗಲೇ ಶ್ರೇಯಸ್‌ನ ಮೊದಲ ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದೆ. ನಟ-ನಿರ್ದೇಶಕ ಸುದೀಪ್‌ ಅವರು ಚಿತ್ರದ ಪೋಸ್ಟರ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. 
 
"ಪಡ್ಡೆ ಹುಲಿ' ಚಿತ್ರವನ್ನು ಗುರು ದೇಶಪಾಂಡೆ ನಿರ್ದೇಶಿಸುತ್ತಿದ್ದು, ಚಿತ್ರಕ್ಕೆ ಅಜನೀಶ್‌ ಲೋಕನಾಥ್‌ ಅವರ ಸಂಗೀತ ಮತ್ತು ಕೆ.ಎಸ್‌. ಚಂದ್ರಶೇಖರ್‌ ಅವರ ಛಾಯಾಗ್ರಹಣ ಇರಲಿದೆ.Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಅರೇ…ಕ್ಯಾಮೆರಾ ನೋಡಿ ನಟಿ ರೇಖಾ ಮುಖ ಮುಚ್ಚಿಕೊಳ್ಳುವಂತದ್ದು ಏನಾಗಿದೆ…?

ಮುಂಬೈ: ಬಾಲಿವುಡ್ ನಟ, ನಟಿಯರೂ ಎಲ್ಲೇ ಹೋದರು ಕ್ಯಾಮೆರಾ ಕಣ್ಣುಗಳು ಸದಾ ಅವರನ್ನು ...

news

ನಟಿ ದೀಪಿಕಾ ಪಡುಕೋಣೆಗೆ ವೈದ್ಯರು ವಿಶ್ರಾಂತಿ ತೆಗೆದುಕೊಳ್ಳುವುದಕ್ಕೆ ಹೇಳಿದ್ದು ಯಾಕಂತೆ…?

ಮುಂಬೈ: ನಟಿ ದೀಪಿಕಾ ಪಡುಕೋಣೆ ಅನಾರೋಗ್ಯದಿಂದ ಬಳಲುತ್ತಿದ್ದಾರಂತೆ. ಪ್ರಸ್ತತ ಇರ್ಫಾನ್ ಖಾನ್ ಜೊತೆ ...

news

ಬಾಲಿವುಡ್ ತಾರೆ ಶಮ್ಮಿ ಇನ್ನಿಲ್ಲ!

ಮುಂಬೈ: ಬಾಲಿವುಡ್ ತಾರೆ ಶಮ್ಮಿ (89) ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಶಮ್ಮಿ ಅವರು ...

news

ಬಾಲಿವುಡ್ ನಟ ಇರ್ಫಾನ್ ಖಾನ್ ಗೆ ಬಂದ ವಿಚಿತ್ರ ಕಾಯಿಲೆ ಯಾವುದು ಗೊತ್ತಾ...?

ಮುಂಬೈ: ಬಾಲಿವುಡ್ ನಟ ಇರ್ಫಾನ್ ಖಾನ್ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು, ಅದರ ವಿರುದ್ಧ ಹೋರಾಟ ...

Widgets Magazine