ಒನ್ ಲವ್ 2 ಸ್ಟೋರಿ: ಹಾಡು ಕೇಳಿದಾಗೆಲ್ಲ ಲವ್ವಾಗುತ್ತೆ!

ಬೆಂಗಳೂರು, ಸೋಮವಾರ, 12 ಆಗಸ್ಟ್ 2019 (16:56 IST)

ಒನ್ ಲವ್ 2 ಸ್ಟೋರಿ ಚಿತ್ರ ನಾನಾ ದಿಕ್ಕುಗಳಿಂದ ಪ್ರೇಕ್ಷಕರನ್ನು ಆವರಿಸಿಕೊಂಡು ಇದೇ ಹದಿನಾರನೇ ತಾರೀಕಿನಂದು ಬಿಡುಗಡೆಯಾಗಲು ರೆಡಿಯಾಗಿದೆ. ಈ ಚಿತ್ರವೀಗ ಟ್ರೈಲರ್ ಕಾರಣದಿಂದ ಸದ್ದು ಮಾಡುತ್ತಿದೆಯಾದರೂ ಅದು ಪರಿಣಾಮಕಾರಿಯಾಗಿ ಪ್ರೇಕ್ಷಕರನ್ನು ತಲುಪಿಕೊಂಡಿರೋದೇ ಹಾಡುಗಳ ಮೂಲಕ. ಪ್ರತೀ ಹಾಡುಗಳನ್ನೂ ಕೂಡಾ ಮನಸೂರೆಗೊಳ್ಳುವ ಆಮಂತ್ರಣದಂತೆಯೇ ರೂಪಿಸಲಾಗಿದೆ. ಅದಕ್ಕೆ ಜನ ಮನಸೋತು ಹದಿನಾರನೇ ತಾರೀಕಿನಂದು ಥೇಟರಿನಲ್ಲಿ ಹಾಜರಾಗೋ ಮನಸು ಮಾಡುತ್ತಿದ್ದಾರೆ.
one love 2 story
ನಿರ್ದೇಶಕ ವಸಿಷ್ಟ ಬಂಟನೂರರ ಪಾಲಿಗೆ ಇದು ಚೊಚ್ಚಲ ಚಿತ್ರ. ಆದರೆ ಪ್ರೇಕ್ಷಕರ ನಾಡಿಮಿಡಿತ ಅರಿಯುವಲ್ಲಿ ಅವರು ಪಳಗಿದ ನಿರ್ದೇಶಕರಂತೆಯೇ ಕಾರ್ಯ ನಿರ್ವಹಿಸಿದ್ದಾರೆ. ಯಾವುದರ ಮೂಲಕ ಎಷ್ಟು ಎಫೆಕ್ಟಿವ್ ಆಗಿ ಪ್ರೇಕ್ಷಕರನ್ನು ಸೆಳೆದುಕೊಳ್ಳಬಹುದೆಂಬ ಅಳತೆ ಅವರಿಗೆ ಸ್ಪಷ್ಟವಾಗಿಯೇ ಸಿಕ್ಕಿಬಿಟ್ಟಿದೆ. ಅದರ ಫಲವಾಗಿಯೇ ಅವರು ಸಿನಿಮಾದ ಪ್ರಧಾನ ಅಂಶದಂತಿರೋ ಹಾಡುಗಳನ್ನು ಚೆಂದಗೆ ರೂಪಿಸಿದ್ದಾರೆ. ಅದರಕ್ಕೆ ಕೆಲವಕ್ಕೆ ತಾವೇ ಸಾಹಿತ್ಯವನ್ನೂ ರಚಿಸಿದ್ದಾರೆ.
 
ಈ ಎಲ್ಲ ಹಾಡುಗಳಿಗೂ ಪ್ರೇಕ್ಷಕರ ಕಡೆಯಿಂದ ಸಕಾರಾತ್ಮಕವಾದ ಪ್ರತಿಕ್ರಿಯೆಗಳೇ ಸಿಕ್ಕಿವೆ. ಬಹುಮುಖ ಪ್ರತಿಭೆಯ ವಸಿಷ್ಟ ಬಂಟನೂರು ಈ ಸಿನಿಮಾಗೆ ಕೋರಿಯೋಗ್ರಫಿಯನ್ನೂ ಮಾಡಿದ್ದಾರೆ. ಸ್ವತಃ ಒಂದು ಪಾತ್ರವನ್ನೂ ನಿರ್ವಹಿಸಿದ್ದಾರೆ. ಈ ಮೂಲಕ ನಟನಾಗಿಯೂ ಟ್ರೈಲರ್ ಮೂಲಕ ಭರವಸೆ ಮೂಡಿಸಿದ್ದಾರೆ. ಇದೆಲ್ಲದರ ನಡುವೆ ತಾವೇ ಮುಂದೆ ನಿಂತು ಈ ಚಿತ್ರದ ಹಾಡುಗಳನ್ನೂ ರೂಪಿಸಿದ್ದಾರೆ. ಅವರೇ ಬರೆದಿರೋದೂ ಸೇರಿದಂತೆ ಎಲ್ಲ ಹಾಡುಗಳೂ ಕೂಡಾ ಸೂಪರ್ ಹಿಟ್ ಆಗಿವೆ. ಅದರಲ್ಲಿಯೂ ಮತ್ತೊಂದ್ ಸಲ ಲವ್ವಾಯ್ತು ಎಂಬ ಹಾಡಂತೂ ಪ್ರೇಮಿಗಳ ಪಾಲಿನ ಹೊಸ ರಾಷ್ಟ್ರಗೀತೆಯಂತೆ ಈ ಕ್ಷಣಕ್ಕೂ ಎಲ್ಲೆಡೆ ಗುನುಗುನಿಸಿಕೊಳ್ಳುತ್ತಿದೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಒನ್ ಲವ್ 2 ಸ್ಟೋರಿ ಹೀರೋಗೆ ಪವರ್ ಸ್ಟಾರ್ ರಿಯಲ್ ಹೀರೋ!

ಯಾರೊಳಗೇ ಆದರೂ ಸಿನಿಮಾ ಕನಸೊಂದು ಊಟೆಯೊಡೆಯೋದೇ ಸಿನಿಮಾಗಳ ಮೂಲಕ. ಹಾಗೆ ಸಿನಿಮಾ ನೋಡೋ ಹುಚ್ಚು ಅನೇಕರನ್ನು ...

news

ಒನ್ ಲವ್ 2 ಸ್ಟೋರಿಯಲ್ಲಿದೆಯಾ ಗಾಂಧಿನಗರದ ವಾಸ್ತವ ದರ್ಶನ?

ಗಾಂಧಿನಗರ ಅಂದರೆ ಸಿನಿಮಾ ಕನಸು ಹೊತ್ತವರ ಪಾಲಿಗೆ ಪ್ರಮುಖ ಕೇಂದ್ರ ಎಂಬಂಥಾ ವಾತಾವರಣ ಬಹು ಹಿಂದಿನಿಂದಲೂ ...

news

ಒನ್ ಲವ್ 2 ಸ್ಟೋರಿ: ಮಜವಾದ ಕಥೆಗೆ ಕನ್ನಡಿಯಾಯ್ತು ಟ್ರೇಲರ್!

ವಸಿಷ್ಟ ಬಂಟನೂರು ನಿರ್ದೇಶನದ ಒನ್ ಲವ್ 2 ಸ್ಟೋರಿ ಇದೇ ತಿಂಗಳು ಹದಿನೈದನೇ ತಾರೀಕಿನಂದು ತೆರೆಕಾಣಲಿದೆ. ...

news

ಕಪಟನಾಟಕ ಪಾತ್ರಧಾರಿ’ ಹಾಡು `ಯಾಕೆ ಅಂತಾ ಗೊತ್ತಿಲ್ಲ ಕಣ್ರೀ...’!

``ಯಾಕೆ ಅಂತಾ ಗೊತ್ತಿಲ್ಲ ಕಣ್ರೀ... ನನ್ನನ್ನು ನೋಡಿ ನಕ್ಬಿಟ್ಲು ಸುಂದ್ರಿ..’’ – `ಕಪಟನಾಟಕ ಪಾತ್ರಧಾರಿ’ ...