Widgets Magazine

ರಚಿತಾ ರಾಮ್ ಮೇಲೆ ಪ್ರಿಯಾಂಕಾ ಉಪೇಂದ್ರ ಬೇಸರ

ಬೆಂಗಳೂರು| Krishnaveni K| Last Modified ಮಂಗಳವಾರ, 11 ಜೂನ್ 2019 (09:47 IST)
ಬೆಂಗಳೂರು: ಐ ಲವ್ ಯೂ ಸಿನಿಮಾದಲ್ಲಿ ಜತೆಗೆ ನಾಯಕಿಯಾಗಿ ಕಾಣಿಸಿಕೊಂಡ ರಚಿತಾ ರಾಮ್ ಹಾಡೊಂದರಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು ಎಲ್ಲೆಡೆ ಚರ್ಚೆಯಾಗುತ್ತಿದೆ.

 
ಹಲವರು ರಚಿತಾ ರಾಮ್ ಬೋಲ್ಡ್ ಪಾತ್ರದಲ್ಲಿ ಅಭಿನಯಿಸಿದ್ದಕ್ಕೆ ಇಷ್ಟವಾಗಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇದಾದ ಬಳಿಕ ರಚಿತಾ ರಾಮ್ ಸಂದರ್ಶನವೊಂದರಲ್ಲಿ ಈ ಹಾಡಿನ ಶೂಟಿಂಗ್ ಮಾಡಿದ್ದು ಉಪೇಂದ್ರ ಎಂದು ಹೇಳಿದ್ದರಂತೆ. ಇದು ಉಪ್ಪಿ ಪತ್ನಿ ಪ್ರಿಯಾಂಕಾ ಉಪೇಂದ್ರಗೆ ಸಿಟ್ಟು ತರಿಸಿದೆ.
 
ನಿರ್ದೇಶಕ ಚಂದ್ರು ಮತ್ತು ಕೊರಿಯಾಗ್ರಾಫರ್ ಚಿನ್ನಿ ಪ್ರಕಾಶ್ ಈ ಹಾಡನ್ನು ಸಂಯೋಜಿಸಿದ್ದರು. ಉಪೇಂದ್ರರ ಹೆಸರನ್ನೂ ಎಲ್ಲಾ ಸಂದರ್ಶನಗಳಲ್ಲಿ ರಚಿತಾ ವಿನಾಕಾರಣ ಹೇಳುತ್ತಿರುವುದು ಯಾಕೆ ಎಂಬುದು ಪ್ರಿಯಾಂಕಾ ಪ್ರಶ್ನೆ. ಒಂದು ವೇಳೆ ರಚಿತಾಗೆ ಈ ಹಾಡಿದ ದೃಶ್ಯಗಳು ಇಷ್ಟವಾಗದೇ ಇದ್ದಲ್ಲಿ ಶೂಟಿಂಗ್ ಸಮಯದಲ್ಲೇ ಹೇಳಬೇಕಿತ್ತು. ಅದು ಬಿಟ್ಟು ವಿನಾಕಾರಣ ಉಪ್ಪಿ ಹೆಸರು ಎಳೆದು ತರುತ್ತಿರುವುದು ಯಾಕೆ ಎಂದು ಪ್ರಿಯಾಂಕಾ ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕಿಡಿ ಕಾರಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :