ಮಾಸ್ಟರ್ ಆನಂದ್ ಗಾಗಿ ಹಾಡಿದ ಪುನೀತ್ ರಾಜ್ ಕುಮಾರ್

ಬೆಂಗಳೂರು, ಮಂಗಳವಾರ, 29 ಜನವರಿ 2019 (11:41 IST)

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬೇರೆಯವರ ಚಿತ್ರಗಳಿಗೂ ಹಾಡು ಹಾಡಿ ಎಷ್ಟೋ ಹಿಟ್ ಹಾಡುಗಳನ್ನು ಕೊಟ್ಟಿದ್ದಾರೆ. ಇದೀಗ ಕಿರುತೆರೆ, ಹಿರಿತೆರೆಯಲ್ಲಿ ಮಿಂಚುತ್ತಿರುವ ಮಾಸ್ಟರ್ ಆನಂದ್ ಗಾಗಿ ಒಂದು ಹಾಡು ಹಾಡಿದ್ದಾರೆ.


 
ಅದು ಯಾವ ಹಾಡು, ಯಾವ ಚಿತ್ರಕ್ಕಾಗಿ ಎನ್ನುವುದನ್ನು ಬಹಿರಂಗಪಡಿಸಿಲ್ಲ. ಆದರೆ ಇಬ್ಬರೂ ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಹಾಗೆಯೇ ತಮಗಾಗಿ ಹಾಡಿದ ಪವರ್ ಸ್ಟಾರ್ ಗೆ ಆನಂದ್ ಧನ್ಯವಾದ ಸಲ್ಲಿಸಿದ್ದಾರೆ. ಅವರ ಸರಳತೆಯನ್ನು ಕೊಂಡಾಡಿದ್ದಾರೆ.
 
‘ಈವತ್ತು ಮಾಸ್ಟರ್ ಆನಂದ್ ಗಾಗಿ ಒಂದು ಹಾಡು ಹಾಡಿದೆ. ಮಾಸ್ಟರ್ ಆನಂದ್ ಎಂದಾಗಲೆಲ್ಲಾ ನೆನಪಾಗುವುದು ಗಣೇಶನ ಮದುವೆ. ಆವತ್ತಿನಿಂದ ಇವತ್ತಿನವರೆಗೂ ಒಳ್ಳೆಯ ಕೆಲಸ ಮಾಡಿದ್ದಾರೆ. ಆಲ್ ದಿ ಬೆಸ್ಟ್ ಆನಂದ್’ ಎಂದು ಪುನೀತ್ ಟ್ವೀಟ್ ಮಾಡಿದ್ದಾರೆ. ಸದ್ಯದಲ್ಲೇ ಈ ಹಾಡಿನ ವಿವರಗಳನ್ನು ಮಾಸ್ಟರ್ ಆನಂದ್ ಅಭಿಮಾನಿಗಳಿಗೆ ನೀಡಲಿದ್ದಾರೆ. ಅಲ್ಲಿಯವರೆಗೂ ವೈಟ್ ಮಾಡಲೇಬೇಕು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಅಗ್ನಿಸಾಕ್ಷಿಯ ಸಿದ್ಧಾರ್ಥ್ ಆಯ್ತು, ಇದೀಗ ಕಲರ್ಸ್ ಕನ್ನಡ ಮತ್ತೊಬ್ಬ ಖ್ಯಾತ ನಾಯಕನಿಗೆ ಮದುವೆ!

ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅಗ್ನಿಸಾಕ್ಷಿ ಸಿದ್ಧಾರ್ಥ್ ಮದುವೆ ಸುದ್ದಿ ಬಂದ ...

news

ಬಿಡುಗಡೆಗೂ ಮುನ್ನವೇ ಪುನೀತ್ ರಾಜ್ ಕುಮಾರ್ ನಟಸಾರ್ವಭೌಮ ಭರ್ಜರಿ ಬ್ಯುಸಿನೆಸ್

ಬೆಂಗಳೂರು: ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ ಟ್ರೇಲರ್ ಈಗಾಗಲೇ ಭಾರೀ ಸೌಂಡ್ ಮಾಡುತ್ತಿದೆ. ...

news

ನಿಖಿಲ್ ಕುಮಾರಸ್ವಾಮಿ ನೋಡಿ ಕಿಚ್ಚ ಸುದೀಪ್ ಹೊಗಳಿದ್ದೇ ಹೊಗಳಿದ್ದು!

ಬೆಂಗಳೂರು: ನಿಖಿಲ್ ಕುಮಾರಸ್ವಾಮಿ ಮತ್ತು ರಚಿತಾ ರಾಂ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ ಸೀತಾರಾಮ ಕಲ್ಯಾಣ ...

news

ತಮಿಳಿಗೆ ಎಂಟ್ರಿಕೊಟ್ಟ ಹರ್ಷಿಕಾ ಪೂಣಚ್ಚ: ಕನ್ನಡ ತಾರೆಗೆ ಈಗ ರಜನಿಕಾಂತ್ ಜತೆ ನಟಿಸುವಾಸೆ

ಬೆಂಗಳೂರು: ಅಪ್ಪಟ ಕನ್ನಡತಿ, ಕೊಡಗಿನ ಚೆಲುವೆ ಹರ್ಷಿಕಾ ಪೂಣಚ್ಚ ಈಗ ತಮಿಳು ಸಿನಿಮಾದಲ್ಲಿ ಅದೃಷ್ಟ ...

Widgets Magazine