ತೆಲುಗು ಸ್ಟಾರ್ ನಟನ ಜೊತೆ ನಟಿಸುವ ಅವಕಾಶ ಪಡೆದ ನಟಿ ರಾಧಿಕಾ ಕುಮಾರಸ್ವಾಮಿ

ಬೆಂಗಳೂರು, ಶನಿವಾರ, 18 ಆಗಸ್ಟ್ 2018 (06:36 IST)

ಬೆಂಗಳೂರು : ಸ್ಯಾಂಡಲ್ ವುಡ್ ನ ನಟಿ ರಾಧಿಕಾ ಕುಮಾರಸ್ವಾಮಿ ಅವರು ಈಗ ಟಾಲಿವುಡ್ ನ ಸ್ಟಾರ್ ನಟರೊಬ್ಬರ ಜೊತೆ ನಟಿಸುವ ಅವಕಾಶವನ್ನು ಪಡೆದುಕೊಂಡಿದ್ದಾರಂತೆ.


ಈ ಹಿಂದೆ ಸ್ಯಾಂಡಲ್ ವುಡ್ ನಲ್ಲಿ ಮಿಂಚಿ ಮರೆಯಾದ ನಟಿ ರಾಧಿಕಾ ಕುಮಾರಸ್ವಾಮಿ ಅವರು ನಂತರ ಮದುವೆಯಾಗಿ ಒಂದು ಮಗುವಿನ ತಾಯಿಯಾದ ನಂತರ ಮತ್ತೆ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಇವರು ಸಿನಿಮಾ ರಂಗದಲ್ಲಿ ಮೊದಲಿನಷ್ಟು ಸಕ್ರೀಯರಾಗಿಲ್ಲವಾದರೂ ಕೂಡ ಸದ್ಯಕ್ಕೆ ಕನ್ನಡದಲ್ಲಿ ಕೆಲವೊಂದು ಸಿನಿಮಾಗಳಲ್ಲಿ ಕನ್ನಡದ ಸ್ಟಾರ್ ನಟರ ಜೊತೆ ನಟಿಸುತ್ತಿದ್ದಾರೆ.


ಆದರೆ ಇದೀಗ ಇವರನ್ನು ತೆಲುಗಿನ ಸ್ಟಾರ್ ನಟ ಮೆಗಾಸ್ಟಾರ್ ಚಿರಂಜೀವಿ ಅವರ 152 ಸಿನಿಮಾಗೆ ನಾಯಕಿಯಾಗಿ ಆಯ್ಕೆ ಮಾಡಲಾಗಿದ್ಯಂತೆ. ತೆಲುಗಿನ ಸ್ಟಾರ್ ಡೈರೆಕ್ಟರ್ ಕೊರಟಾಲಶಿ ನಿರ್ದೇಶಿಸುತ್ತಿರುವ ಈ ಸಿನಿಮಾದಲ್ಲಿ ಚಿರಂಜೀವಿ ಅವರಿಗೆ ನಾಯಕಿಯಾಗಿ ರಾಧಿಕಾ ನಟಿಸುತ್ತಿದ್ದಾರಂತೆ. ಸದ್ಯದಲ್ಲೇ ಈ ಚಿತ್ರ ಸೆಟ್ಟೇರಲಿದೆಯಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ತಾಯಿಯಾದರೂ ನಟಿ ಕರೀನಾ ಗೆ ಡಿಮ್ಯಾಂಡ್ ಸ್ವಲ್ಪವೂ ಕಡಿಮೆಯಾಗಿಲ್ಲ ಎಂಬುದಕ್ಕೆ ಇದೇ ಸಾಕ್ಷಿ

ಮುಂಬೈ : ಸಿನಿಮಾ ನಟಿಯರು ಮದುವೆ ಆದ ಮೇಲೆ ಅವರಿಗೆ ಡಿಮ್ಯಾಂಡ್ ಕಡಿಮೆಯಾಗುತ್ತದೆ. ಆದರೆ ಬಾಲಿವುಡ್ ನಟಿ ...

news

ನಿರ್ದೇಶಕ ಮಂಜು ಮೇಲೆ 'ಕಾಸ್ಟಿಂಗ್ ಕೌಚ್' ಆರೋಪ ಸುಳ್ಳು; ಕ್ಷಮೆಯಾಚಿಸಿದ ನಟಿ ಜಯಶ್ರೀ

ಬೆಂಗಳೂರು : 'ನಟ ನಟಿಯರು ಬೇಕಾಗಿದ್ದಾರೆ' ಚಿತ್ರದ ನಿರ್ದೇಶಕ ಮಂಜು ಹೆದ್ದೂರು ಮೇಲೆ ನಟಿ ಬಿಗ್ ಬಾಸ್ ...

news

ನಿಕ್ ಮತ್ತು ಪಿಗ್ಗಿ ನಿಶ್ಚಿತಾರ್ಥದ ಪಾರ್ಟಿ ಈ ವಾರದ ಕೊನೆಯಲ್ಲಿ..!!

ಕಳೆದ ಸುಮಾರು ದಿನಗಳಿಂದ ನಿಕ್ ಜೊನಾಸ್ ಹಾಗೂ ಪಿಗ್ಗಿ ನಿಶ್ಚಿತಾರ್ಥದ ವಿಷಯವೇ ಹರಿದಾಡುತ್ತಿದೆ. ದಿನನಿತ್ಯ ...

news

ಮನೀಶಾ ಕೊಯಿರಾಲಾ ಬರ್ತಡೇ ಪಾರ್ಟಿಯಲ್ಲಿ ಶಾರೂಖ್ ಖಾನ್...!

ಇಂದು ಮನೀಶಾ ತಮ್ಮ 48 ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಮೂಲಗಳ ಪ್ರಕಾರ ಇದರ ...

Widgets Magazine
Widgets Magazine