ನಟನೆಯತ್ತ ರಾಧಿಕಾ ಕುಮಾರಸ್ವಾಮಿ ಚಿತ್ತ: ಭೈರಾದೇವಿ ಶೂಟಿಂಗ್‌ಗೆ ರೆಡಿ

ಅತಿಥಾ 

ಬೆಂಗಳೂರು, ಗುರುವಾರ, 15 ಫೆಬ್ರವರಿ 2018 (13:28 IST)

ನಟಿ ರಾಧಿಕಾ ಮತ್ತೆ ಸಿನಿಮಾ ರಂಗದಲ್ಲಿ ಕಾಣಿಸಿಕೊಂಡಿದ್ದಾರೆ. ನಟನೆಯ ಜತೆಗೆ ನಿರ್ಮಾಣವನ್ನೂ ಮಾಡುತ್ತಿದ್ದಾರೆ. ತಮ್ಮ ಶಮಿಕಾ ಬ್ಯಾನರ್‌ನಡಿಯಲ್ಲಿ ಸಿನಿಮಾವೊಂದನ್ನು ನಿರ್ಮಿಸುತ್ತಿದ್ದು ಈ ತಿಂಗಳಾಂತ್ಯದಲ್ಲಿ ಕೆಲಸ ಆರಂಭವಾಗವ ಲಕ್ಷಣವಿದೆ.

ಈ ಚಿತ್ರಕ್ಕೆ ಭೈರಾದೇವಿ ಎಂದು ಹೆಸರಿಡಲಾಗಿದ್ದು, ರಮೇಶ್‌ ಅರವಿಂದ್‌ ನಾಯಕರಾಗಿದ್ದಾರೆ. ಸೋಮವಾರ ಬೆಂಗಳೂರಿನಲ್ಲಿ ಈ ಚಿತ್ರಕ್ಕೆ ಮುಹೂರ್ತ ನಡೆದಿದ್ದು, ಮೂರು ಭಾಷೆಗಳಲ್ಲಿ ಸಿನಿಮಾ ಏಕಕಾಲಕ್ಕೆ ನಿರ್ಮಾಣವಾಗಲಿದೆ. 
 
ಮೊದಲ ದೃಶ್ಯಕ್ಕೆ ರಾಧಿಕಾ ಮಗಳು ಶಮಿಕಾ ಕ್ಲಾಪ್‌ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ಅಂದಹಾಗೆ ಈ ಸಿನಿಮಾ ಜೈ ಶ್ರೀ ನಿರ್ದೇಶನದಲ್ಲಿ ಮೂಡಿ ಬರಲಿದೆ. ಅವರು ಈಗಾಗಲೇ ದುನಿಯಾ ವಿಜಯ್ ಅವರ ಆರ್ ಎಕ್ಸ್ ಸೂರಿ ಚಿತ್ರ ನಿರ್ದೇಶಿಸಿದ್ದಾರೆ. ಲಕ್ಕಿ ಮತ್ತು ಸ್ವೀಟಿ ನನ್ನ ಜೋಡಿ ಸಿನಿಮಾ ನಿರ್ಮಿಸಿದ್ದ ರಾಧಿಕಾ, ಭೈರದೇವಿಯನ್ನು ಬೇರೆ ಭಾಷೆಗಳಲ್ಲಿ ಕೂಡ ನಿರ್ಮಿಸುವ ಒಲವು ತೋರಿದ್ದಾರೆ. ಕನ್ನಡ, ತೆಲುಗು ಮತ್ತು ತಮಿಳಿನಲ್ಲಿ ಭೈರದೇವಿಯನ್ನು ನಿರ್ಮಿಸುತ್ತಿದ್ದಾರೆ. ಕಾಶಿ, ಹರಿದ್ವಾರ ಸೇರಿದಂತೆ ಹಲವು ಊರುಗಳಲ್ಲಿ ಶೂಟಿಂಗ್‌ ಮಾಡಲು ಸಿನಿಮಾ ತಂಡ ಪ್ಲಾನ್‌ ಮಾಡಿದ್ದು, ಒಟ್ಟು ಎಂಬತ್ತು ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ.
 
ಆಪ್ತಮಿತ್ರದ ಛಾಯೆ ಭೈರದೇವಿಯಲ್ಲಿ ಕಾಣಬಹುದು ಎಂದಿದ್ದಾರೆ ರಾಧಿಕಾ ಕುಮಾರಸ್ವಾಮಿ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಟೀಸರ್ ಮೂಲಕ ಮತ್ತೊಮ್ಮೆ ನಿದ್ದೆಗೆಡಿಸಿದ ಪ್ರಿಯಾ ವಾರಿಯರ್

ಪಡ್ಡೆಗಳ ಹೃದಯ ಕದ್ದ ಚೋರಿ ಮಲಯಾಳಂನ ಒರು ಆದಾರ್ ಲವ್ ಚೆಲುವೆ ಪ್ರಿಯಾ ಪ್ರಕಾಶ್ ವಾರಿಯರ್ ಮತ್ತೊಂದು ...

news

ಕಿಚ್ಚ ಸುದೀಪ್ ಗಾಗಿ ಬಿಗ್ ಬಾಸ್ ಶ್ರುತಿ ಪ್ರಕಾಶ್ ಮಾಡಿದ್ದೇನು ಗೊತ್ತಾ?

ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಮುಗಿದರೂ ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ಜತೆಗಿನ ನಂಟು ...

news

ಕೊನೆಗೂ ರಾಕಿಂಗ್ ಸ್ಟಾರ್ ಯಶ್ ಗೆ ಸಿಕ್ಕಳು ಮುದ್ದಿನ ಅರಗಿಣಿ

ಬೆಂಗಳೂರು: ಪ್ರೇಮಿಗಳ ದಿನ ಆಚರಿಸಲು ಪತ್ನಿ ರಾಧಿಕಾ ಪಂಡಿತ್ ಜತೆ ಇರಲು ಅಮೆರಿಕಾಗೆ ಹಾರಿದ ರಾಕಿಂಗ್ ...

news

ಸನ್ನಿ ಲಿಯೋನ್‌‌ಗೆ ರೈತ ಮಾಡಿದ್ದು ನೋಡಿದ್ರೆ ಗಾಬರಿಯಾಗ್ತೀರಿ

ಹೈದರಾಬಾದ್: ಬಹು ದಿನಗಳಿಂದ ಸುದ್ದಿ ಮಾಧ್ಯಮಗಳಲ್ಲಿ ಕಾಣೆಯಾಗಿದ್ದ ಸನ್ನಿ ಲಿಯೋನ್ ಇದೀಗ ರೈತರ ಹೊಲದಲ್ಲಿ ...

Widgets Magazine
Widgets Magazine