ಹೊಸ ಚಿತ್ರ ಸೆಟ್ಟೇರಿತು! ಆದರೆ ನಾಯಕಿ ರಾಧಿಕಾ ಪಂಡಿತ್ ಮುಹೂರ್ತಕ್ಕೆ ಬಂದಿಲ್ಲವೇಕೆ?

ಬೆಂಗಳೂರು, ಭಾನುವಾರ, 3 ಡಿಸೆಂಬರ್ 2017 (09:25 IST)

ಬೆಂಗಳೂರು: ಮದುವೆ ನಂತರ ರಾಧಿಕಾ ಪಂಡಿತ್ ಮೊದಲ ಬಾರಿಗೆ ಬಣ್ಣ ಹಚ್ಚುತ್ತಿರುವ ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರ ಶುಕ್ರವಾರ ಮುಹೂರ್ತ ಕಾರ್ಯಕ್ರಮ ಮುಗಿಸಿದೆ. ಆದರೆ ನಾಯಕಿ ರಾಧಿಕಾ ಪಂಡಿತ್ ಮುಹೂರ್ತ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿಲ್ಲ.
 

ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ನಾಯಕ  ನಿರೂಪ್ ಭಂಡಾರಿ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸೇರಿದಂತೆ ತಾರಾಗಣವೇ ನೆರೆದಿತ್ತು. ಆದರೆ ರಾಧಿಕಾ ಮಾತ್ರ ಬಂದಿರಲಿಲ್ಲ. ಇದಕ್ಕೆ ರಾಧಿಕಾ ಸ್ವತಃ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ.
 
ಚಿತ್ರೀಕರಣ ಡಿಸೆಂಬರ್ 10 ರಿಂದ ಪ್ರಾರಂಭವಾಗಲಿದೆ. ಆದರೆ ನಾನು ಸ್ವಲ್ಪ ಸಮಯದ ನಂತರ ಚಿತ್ರತಂಡವನ್ನು ಕೂಡಿಕೊಳ್ಳಲಿದ್ದೇನೆ ಎಂದು ರಾಧಿಕಾ ಹೇಳಿಕೊಂಡಿದ್ದಾರೆ. ಇದಕ್ಕೆ ಕಾರಣ ಡಿಸೆಂಬರ್ 7 ರಂದು ರಾಧಿಕಾ ಮತ್ತು ಯಶ್ ಮದುವೆಯ ಮೊದಲ ಆನಿವರ್ಸರಿ. ಹೀಗಾಗಿ ಈ ಸಂಭ್ರಮದಲ್ಲಿ ರಾಧಿಕಾ ಬ್ಯುಸಿ. ಇದಾದ ಬಳಿಕ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

25 ವರ್ಷಗಳ ವೃತ್ತಿ ಜೀವನದಲ್ಲಿ ಒಮ್ಮೆ ಮಾತ್ರ ಕಾಜೋಲ್ ಶೂಟಿಂಗ್ ಕ್ಯಾನ್ಸಲ್ ಮಾಡಿದ್ದರಂತೆ!

ಮುಂಬೈ: ಬಾಲಿವುಡ್ ನ ಎವರ್ ಗ್ರೀನ್ ಹೀರೋಯಿನ್ ಕಾಜೋಲ್ ಬಾಲಿವುಡ್ ಗೆ ಕಾಲಿಟ್ಟು 25 ವರ್ಷಗಳು ತುಂಬಿವೆ. ಈ ...

news

ಹುಚ್ಚ ವೆಂಕಟ್‍‍ನನ್ನು ಹೆಲ್ಮೆಟ್‍‍ನಿಂದ ಹೊಡೆದ ವ್ಯಕ್ತಿ

ನಟ ಹುಚ್ಚ ವೆಂಕಟ್ ರಾತ್ರಿ ವೇಳೆ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ವ್ಯಕ್ತಿಯೊಬ್ಬ ಹೆಲ್ಮೆಟ್‍‍ನಿಂದ ...

news

ಸನ್ನಿ ಲಿಯೋನ್ ಹಾಟ್ ಫೋಟೋ ಗ್ಯಾಲರಿ

ಮುಂಬೈ: ಹಾಟ್ ತಾರೆ ಸನ್ನಿ ಲಿಯೋನ್ ತನ್ನ ಬೋಲ್ಡ್ ಲುಕ್ ನಿಂದಲೇ ಸೆಳೆದಾಕೆ. ಆಕೆಯ ಕೆಲವು ಬಿಕಿನಿ ಪೋಸ್ ...

news

ಪ್ರಭಾಸ್ ಕಂಟ್ರೋಲ್ ಬಟನ್ ಅನುಷ್ಕಾ ಶೆಟ್ಟಿ ಕೈಯಲ್ಲಿದೆಯಂತೆ!

ಹೈದರಾಬಾದ್: ಬಾಹುಬಲಿ ಸಿನಿಮಾ ನಂತರ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಲವ್ ಮಾಡ್ತಿದ್ದಾರೆ ಎಂಬ ಸುದ್ದಿ ...

Widgets Magazine
Widgets Magazine