ಮದುವೆ ಆಗಿ ವರ್ಷ ತುಂಬುವ ಮೊದಲೇ ರಾಧಿಕಾ ಪಂಡಿತ್ ಗುಡ್ ನ್ಯೂಸ್!

ಬೆಂಗಳೂರು, ಶುಕ್ರವಾರ, 1 ಡಿಸೆಂಬರ್ 2017 (10:12 IST)

ಬೆಂಗಳೂರು: ರಾಧಿಕಾ ಪಂಡಿತ್ ಮತ್ತು ರಾಕಿಂಗ್ ಸ್ಟಾರ್ ಯಶ್ ಮದುವೆಯಾಗಿ ಡಿಸೆಂಬರ್ 9 ಕ್ಕೆ ಒಂದು ವರ್ಷ ಪೂರ್ತಿಯಾಗಲಿದೆ. ಆದರೆ ಮೊದಲ ವರ್ಷದ ಆನಿವರ್ಸರಿಗೆ ಮೊದಲೇ ರಾಧಿಕಾ ಕಡೆಯಿಂದ ಅಭಿಮಾನಿಗಳಿಗೆ ಶುಭ ಸುದ್ದಿ ಬಂದಿದೆ.
 

ಗುಡ್ ನ್ಯೂಸ್ ಎಂದಾಕ್ಷಣ ಏನೇನೋ ಯೋಚನೆ ಬೇಡ. ಮದುವೆಗೆ ಮೊದಲು ಯಶ್ ಜತೆ ಸಂತು ಸ್ಟ್ರೈಟ್ ಫಾರ್ವರ್ಡ್ ಸಿನಿಮಾದಲ್ಲಿ ಅಭಿನಯಿಸಿದ್ದ ರಾಧಿಕಾ ಮತ್ತೆ ಬಣ್ಣ ಹಚ್ಚಿರಲಿಲ್ಲ. ಇತ್ತೀಚೆಗೆ ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರದಲ್ಲಿ ರಾಧಿಕಾ ಅಭಿನಯಿಸುತ್ತಿದ್ದಾರೆ ಎಂದು ಸುದ್ದಿ ಬಂದಿದ್ದರೂ ಸೆಟ್ಟೇರಿರಲಿಲ್ಲ.
 
ಅದಕ್ಕೀಗ ಕಾಲ ಕೂಡಿ ಬಂದಿದೆ. ಇಂದು ಆ ಸಿನಿಮಾದ ಮುಹೂರ್ತ ಕಾರ್ಯಕ್ರಮ ನೆರವೇರಲಿದೆ. ರಾಧಿಕಾ ಜತೆ ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿ ಅಭಿನಯಿಸುತ್ತಿದ್ದಾರೆ. ಪಕ್ಕಾ ಕಮರ್ಷಿಯಲ್ ಚಿತ್ರದಲ್ಲಿ ನಾಯಕನ ಪಾತ್ರದಷ್ಟೇ ನಾಯಕಿಯ ಪಾತ್ರಕ್ಕೂ ಪ್ರಾಮುಖ್ಯತೆ ಇದೆ ಎಂದು ರಾಧಿಕಾ ಈ ಮೊದಲೇ ಹೇಳಿಕೊಂಡಿದ್ದರು. ಅಂತೂ ಮದುವೆಯ ನಂತರ ರಾಧಿಕಾರನ್ನು ಮತ್ತೆ ತೆರೆ ಮೇಲೆ ಕಾಣಲು ಕಾಯುತ್ತಿದ್ದ ಅಭಿಮಾನಿಗಳಿಗೆ ಇದು ಸಂತೋಷದ ವಿಚಾರವೇ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ವಿಶ್ವಸುಂದರಿ ಮಾನುಷಿ ಚಿಲ್ಲರ್ ಗೆ ಹೊಡೀತು ಬಂಪರ್ ಲಕ್?!

ಮುಂಬೈ: ಇತ್ತೀಚೆಗಷ್ಟೇ ವಿಶ್ವಸುಂದರಿಯಾಗಿ ಆಯ್ಕೆಯಾದ ಹರ್ಯಾಣದ ಚೆಲುವೆ ಮಾನುಷಿ ಚಿಲ್ಲರ್ ಗೆ ಇದೀಗ ...

news

ಟ್ವಿಟರ್ ನಲ್ಲಿ ಮಾತನಾಡುತ್ತಾ ಭಾವುಕರಾದ ಕಿಚ್ಚ ಸುದೀಪ್

ಬೆಂಗಳೂರು: ಕಿಚ್ಚ ಸುದೀಪ್ ಅಭಿಮಾನಿಗಳೊಂದಿಗೆ ಟ್ವಿಟರ್ ಮೂಲಕ ಕನೆಕ್ಟ್ ಆಗಿರುವುದು ಎಲ್ಲರಿಗೂ ಗೊತ್ತಿರುವ ...

news

ಫೋಟೋ ಶೂಟ್ ನಲ್ಲಿ ಬೆತ್ತಲಾದ ಸನ್ನಿ ಲಿಯೋನ್!

ಮುಂಬೈ: ಹಾಟ್ ತಾರೆ ಸನ್ನಿ ಲಿಯೋನ್ ಮತ್ತು ಪತಿ ಡೇನಿಯಲ್ ವೆಬರ್ ಪ್ರಾಣಿ ದಯಾ ಸಂಘ ಪೇಟಾಗಾಗಿ ಬೆತ್ತಲಾಗಿ ...

news

ಸೂಪರ್ ಸ್ಟಾರ್ ಜೆಕೆಗೆ ಐಲವ್ ಯೂ ಎಂದರು ಶ್ರುತಿ!

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಇದೀಗ ಹುಡುಗಿಯರೆಲ್ಲಾ ಕ್ಯಾಪ್ಟನ್ ಜೆಕೆಯನ್ನು ಇಂಪ್ರೆಸ್ ಮಾಡಬೇಕಿದೆ. ...

Widgets Magazine
Widgets Magazine