ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಯಶ್-ರಾಧಿಕಾ ಪಂಡಿತ್!

Bangalore, ಶುಕ್ರವಾರ, 21 ಜುಲೈ 2017 (11:34 IST)

ಬೆಂಗಳೂರು: ಮದುವೆಯಾದ ಮೇಲೆ ಕನ್ನಡದ ನಟಿಯರು ಮೊದಲಿನ ಹಾಗೇ ನಾಯಕಿಯಾಗಿ ಮಿಂಚಿದ ಉದಾಹರಣೆ ಕಡಿಮೆ. ಆದರೆ ರಾಕಿಂಗ್ ಸ್ಟಾರ್ ಯಶ್ ಕೈ ಹಿಡಿದ ರಾಧಿಕಾ ಪಂಡಿತ್ ಇದೀಗ ಅಭಿಮಾನಿಗಳಿಗೆ ಶುಭ ಸುದ್ದಿ ಕೊಡುತ್ತಿದ್ದಾರೆ.


 
ಶುಭ ಸುದ್ದಿ ಎಂದಾಕ್ಷಣ ಏನೇನೋ ಯೋಚನೆಗಳು ಬೇಡ. ರಾಧಿಕಾ ಮತ್ತೆ ಬಣ್ಣದ ಲೋಕಕ್ಕೆ ಮರಳಲು ನಿರ್ಧರಿಸಿದ್ದಾರೆ. ಅದಕ್ಕಿಂತ ದೊಡ್ಡ ಖುಷಿ ಅಭಿಮಾನಿಗಳಿಗೆ ಇನ್ನೊಂದು ಇದೆಯಾ?
 
ರಾಧಿಕಾರಂತಹ ಪ್ರತಿಭಾವಂತ ನಟಿ ಮತ್ತೆ ನಟನೆಗೆ ಮರಳಲಿದ್ದಾರೆ. ಮದುವೆಗೆ ಮೊದಲು ನಟಿಸಿದ್ದ ಸಂತು ಸ್ಟ್ರೇಟ್ ಫಾರ್ವರ್ಡ್ ಚಿತ್ರ ಅವರ ಕೊನೆಯ ಚಿತ್ರವಾಗಿತ್ತು. ನಂತರ ಫ್ಯಾಮಿಲಿ ಲೈಫ್ ನಲ್ಲಿ ಬ್ಯುಸಿಯಾಗಿದ್ದ ರಾಧಿಕಾ ಇದೀಗ ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರವೊಂದರಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ ಎಂಬ ಸುದ್ದಿ ಬಂದಿದೆ. ರಂಗಿತರಂಗ ಖ್ಯಾತಿಯ ನಿರೂಪ್ ಬಂಡಾರಿ ರಾಧಿಕಾಗೆ ನಾಯಕರಾಗಲಿದ್ದಾರೆ. ಹೆಚ್ಚಿನ ವಿವರಗಳು ಸದ್ಯದಲ್ಲೇ ಹೊರ ಬೀಳಲಿದೆ.
 
ಮದುವೆಯಾದ ಮೇಲೆ ನಟಿಯರು ಮೂಲೆ ಸೇರುತ್ತಾರೆಂಬ ಎಲ್ಲಾ ಕಟ್ಟಪಾಡುಗಳನ್ನು ಮುರಿಯಲು ಬಯಸುತ್ತೆನೆ ಎಂದು ರಾಧಿಕಾ ಆಂಗ್ಲ ಪತ್ರಿಕೆಯೊಂದರ ಸಂದರ್ಶನದಲ್ಲಿ ಹೇಳಿದ್ದಾರೆ. ಇನ್ನೊಂದೆಡೆ ಪತಿ ರಾಕಿಂಗ್ ಸ್ಟಾರ್ ಯಶ್ ಕೂಡಾ ಇದನ್ನು ರಾಧಿಕಾ ಕಮ್ ಬ್ಯಾಕ್ ಎಂದು ಬರೆಯಬೇಡಿ. ಆಕೆ ಮದುವೆ ನಂತರ ಆರು ತಿಂಗಳು ಬ್ರೇಕ್ ತೆಗೆದುಕೊಂಡು ಮರಳುತ್ತಿದ್ದಾಳಷ್ಟೆ ಎಂದಿದ್ದಾರೆ.
 
ಇದನ್ನೂ ಓದಿ..  ಭಾರತ-ಚೀನಾ ವಿವಾದಕ್ಕೆ ತುಪ್ಪ ಸುರಿಯಲು ಯತ್ನಿಸುತ್ತಿರುವ ಪಾಕ್
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಹೆಣ್ಣುಮಗುವನ್ನು ದತ್ತು ಪಡೆದ ಸನ್ನಿಲಿಯೋನ್-ಡೆನಿಯಲ್‌ ವೆಬರ್‌ ದಂಪತಿ

ಬಾಲಿವುಡ್‌ ನಟಿ ಸನ್ನಿ ಲಿಯೋನ್‌ ಮತ್ತು ಪತಿ ಡೆನಿಯಲ್‌ ವೆಬರ್‌ ಹೆಣ್ಣುಮಗುವೊಂದನ್ನು ದತ್ತು

news

ಲಿಂಕಿನ್‌ ಪಾರ್ಕ್‌ ಸಿಂಗರ್ ಚೆಸ್ಟರ್‌ ಬೆನ್ನಿಂಗ್ಟನ್‌ ಆತ್ಮಹತ್ಯೆ..!

ಲಿಂಕಿನ್‌ ಪಾರ್ಕ್‌ ರಾಕ್‌ ಹಾಡುಗಳ ಗಾಯಕ ಚೆಸ್ಟರ್‌ ಬೆನ್ನಿಂಗ್ಟನ್‌ ಆತ್ಮಹತ್ಯೆಗೆ ಶರಣಾಗಿದ್ದಾರೆ. ...

news

ಮಲೆಯಾಳಿ ನಟಿಗೆ ಲೈಂಗಿಕ ಕಿರುಕುಳ: ಮತ್ತಷ್ಟು ಸ್ಫೋಟಕ ಮಾಹಿತಿ ಬಹಿರಂಗ

ಮಲೆಯಾಳಿ ನಟಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ನಟ ದಿಲೀಪ್ ...

news

ಹಡೆಯದೇ ಮಗು ಬೇಕು ಅಂತಿದ್ದಾಳೆ ಸನ್ನಿ..!

ಬಾಲಿವುಡ್ ಮಮ್ಮಿಗಳಿಂದ ಸ್ಫೂರ್ತಿ ಪಡೆದಿರುವ ಸನ್ನಿ ಲಿಯೋನ್ ಮಗುವನ್ನ ಪಡೆಯಲು ನಿರ್ಧರಿಸಿದ್ದಾರಾ..? ...

Widgets Magazine