ಹೊಂಬಣ್ಣ ಚಿತ್ರದ ನಾಯಕ ನಟನ ವಿರುದ್ಧ ಅತ್ಯಾಚಾರ ಪ್ರಕರಣ

ಬೆಂಗಳೂರು, ಗುರುವಾರ, 28 ಡಿಸೆಂಬರ್ 2017 (20:15 IST)

Widgets Magazine

ಹೊಂಬಣ್ಣ ಚಿತ್ರದ ನಾಯಕ ಸುಬ್ರಮಣ್ಣ ಅವರು ತಂಪು ಪಾನೀಯದಲ್ಲಿ ಮತ್ತು ಬರೋ ಔಷಧಿ ಬೆರೆಸಿ ಎಸಗಿದ್ದಾನೆ ಎಂದು ಸಂತ್ರೆಸ್ತೆ ದೂರು ನೀಡಿದ್ದಾಳೆ.
 
ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ಸಂತ್ರಸ್ತೆ ನೀಡಿರುವ ದೂರಿನಲ್ಲಿ, ಸುಬ್ರಮಣ್ಯ ನವೆಂಬರ್ 1 ರಂದು ತನ್ನ ಅಕ್ಕನ ಮನೆಯಲ್ಲಿ ಪಾರ್ಟಿ ಇದೆ ಎಂದು ಹೇಳಿ ಕರೆದುಕೊಂಡು ಹೋದ. ಆದರೆ ಆತನ ಅಕ್ಕನ ಮನೆಗೆ ಬದಲು ತನ್ನ ರೂಮಿಗೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ಕುಡಿಯಲು ಜ್ಯೂಸ್ ಕೊಟ್ಟು ಪ್ರಜ್ಞೆ ತಪ್ಪುವಂತೆ ಔಷಧ ಬೆರೆಸಿದ್ದಾನೆ. ನನಗೆ ಎಚ್ಚರವಾದಾಗ ಅವನ ಮತ್ತು ನನ್ನ ಮೈಮೇಲೆ ಬಟ್ಟೆ ಇರಲಿಲ್ಲ. ನನ್ನ ಅನುಮತಿ ಇಲ್ಲದೆ ಅತ್ಯಾಚಾರ ಮಾಡಿದ್ದಾನೆ. ನಾನು ಪ್ರಶ್ನೆ ಮಾಡಿದ್ದಕ್ಕೆ ನಿನ್ನನ್ನೇ ನಾನು ಮದುವೆಯಾಗುತ್ತೇನೆ ಎಂದು ಹೇಳುತ್ತಿದ್ದ. ಆದರೆ ಕೆಲವು ದಿನಗಳಾದ ಬಳಿಕ ನನ್ನನ್ನು ನಿರ್ಲಕ್ಷ್ಯ ಮಾಡುತ್ತಿದ್ದಾನೆ ಎಂದು ಉಲ್ಲೇಖಿಸಿದ್ದಾಳೆ.
 
ಕಳೆದ 2 ವರ್ಷಗಳಿಂದ ನನಗೂ ನಮ್ಮ ಕುಟುಂಬದವರಿಗೆ ಸುಬ್ರಮಣ್ಯನ ಪರಿಚಯವಿದೆ. ಕುಟುಂಬದವರ ಜೊತೆ ಮಾತನಾಡಿ ಮದುವೆಯಾಗುವುದಾಗಿ ಹೇಳಿದ್ದ. ಈ ವಿಚಾರ ಆತನ ಪೋಷಕರಿಗೂ ತಿಳಿದಿತ್ತು. ಯಾಕೆ ನನ್ನನ್ನು ನೀನು ಮದುವೆಯಾಗುತ್ತಿಲ್ಲ ಎಂದು ಕೇಳಿದಾಗ ನೀವು ಬಡವರು ನನಗೆ 20 ಲಕ್ಷ ಹಾಕಿ ಸಿನಿಮಾ ತೆಗೆಯುವಂತಹ ಹುಡುಗಿ ಬೇಕು. ಸಿನಿಮಾ ರಂಗದವರು ಬಂದರೆ ಅವರ ಜೊತೆ ಸಹಕರಿಸು ಎಂದು ಹೇಳಿದ್ದ. ಇದಕ್ಕೆ ನಿರಾಕರಿಸಿದ ನಂತರ ಇಲ್ಲಸಲ್ಲದ ಆರೋಪ ಮಾಡಿ ತೇಜೋವಧೆ ಮಾಡಿ, ಜೀವ ಬೆದರಿಕೆ ಹಾಕಿದ್ದಾನೆ ಎಂದಿದ್ದಾರೆ.
 
ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಸುಬ್ರಮಣ್ಯ ಬೆಂಗಳೂರು ಬಿಟ್ಟು ಪರಾರಿಯಾಗಿದ್ದಾನೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
ಇದರಲ್ಲಿ ಇನ್ನಷ್ಟು ಓದಿ :  
ನಟ ಸಿನಿಮಾ ಅತ್ಯಾಚಾರ Actor Cinema Rape

Widgets Magazine

ಸ್ಯಾಂಡಲ್ ವುಡ್

news

ಮಹದಾಯಿ ಸಭೆಯಲ್ಲಿ ಪರಭಾಷಿಕರ ಮೇಲೆ ಸಿಟ್ಟು ಹೊರ ಹಾಕಿದ ಶಿವರಾಜ್ ಕುಮಾರ್

ಬೆಂಗಳೂರು: ಮಹದಾಯಿ ನದಿ ನೀರಿಗಾಗಿ ರೈತರು ನಡೆಸುತ್ತಿರುವ ಹೋರಾಟದಲ್ಲಿ ಕೈ ಜೋಡಿಸಲು ವಾಣಿಜ್ಯ ಮಂಡಳಿಯಲ್ಲಿ ...

news

ಗುಟ್ಟಾಗಿ ಇಟಲಿಯಲ್ಲಿ ಮದುವೆಯಾದ್ರಂತೆ ಈ ನಟಿಮಣಿ

ಶಿವರಾಜ್ ಕುಮಾರ್ ಅಭಿನಯದ ಪರಮೇಶ ಪಾನ್ ವಾಲ್ ಚಿತ್ರದಲ್ಲಿ ಅಭಿನಯಿಸಿದ ನಾಯಕಿ ಸುರ್ವೀನ್ ಚಾವ್ಲಾ ತಮ್ಮ ...

news

ಪ್ರಿಯಾಂಕ ಚೋಪ್ರಾಗೆ ಎಷ್ಟು ಮಕ್ಕಳು ಬೇಕಂತೆ ಗೊತ್ತಾ…? ಕೇಳಿದ್ರೆ ಹುಬ್ಬೇರಿಸುತ್ತೀರಿ!

ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರ ಅವರು ಒಂದು ಕ್ರಿಕೆಟ್ ಟೀಂ ಗೆ ಬೇಕಾಗುವಷ್ಟು ಮಕ್ಕಳು ತನಗೆ ಬೇಕು ...

news

ಸಮೀರ್ ಆಚಾರ್ಯ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರ ಕಳುಹಿಸಿದ್ದು ಯಾಕೆ ಗೊತ್ತಾ...?

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಬಿಗ್ ಬಾಸ್ ದಿನಕ್ಕೊಂದು ಟ್ವಿಸ್ಟ್ ಗಳನ್ನು ಕೊಡುತ್ತಿದ್ದು ನಿನ್ನೆಯ ...

Widgets Magazine