ಅಜ್ಜಿಯ ಸೀರೆಯ ಕತೆ ಬಿಚ್ಚಿಟ್ಟ ರಶ್ಮಿಕಾ ಮಂದಣ್ಣ

ಬೆಂಗಳೂರು, ಮಂಗಳವಾರ, 6 ಮಾರ್ಚ್ 2018 (09:05 IST)

ಬೆಂಗಳೂರು: ಹೆಣ್ಣುಮಕ್ಕಳಿಗೆ ಸೀರೆ ಎಂದರೆ ತುಂಬಾ ಪ್ರೀತಿ. ಅದರಲ್ಲೂ ತಲೆಮಾರುಗಳಿಂದ ಬಂದ ಸೀರೆ ಎಂದರೆ ವಿಶೇಷವಾದ ಕಾಳಜಿ ಇರುತ್ತದೆ. ನಟಿ ರಶ್ಮಿಕಾ ಕೂಡ ಇದರಿಂದ ಹೊರತಾಗಿಲ್ಲ. ಇತ್ತೀಚೆಗೆ 'ಹೆಮ್ಮೆಯ ಕನ್ನಡಿಗ' ಪ್ರಶಸ್ತಿ ಸ್ವೀಕರಿಸಲು ಬಂದಿದ್ದಾಗ ನಟಿ ರಶ್ಮಿಕಾ ಮಂದಣ್ಣ ಕೂರ್ಗಿ ಸ್ಟೈಲ್‌ನಲ್ಲಿ ಧರಿಸಿದ್ದ ಸೀರೆಯ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ಮೆರೂನ್‌ ಬಣ್ಣದ ಸೀರೆಯಲ್ಲಿ ರಶ್ಮಿಕಾ ಮತ್ತಷ್ಟು ಸುಂದರವಾಗಿ ಕಾಣುತ್ತಿದ್ದರು. ಈ ಸೀರೆಯ ಹಿಂದಿರುವ ಒಂದು ಸೆಂಟಿಮೆಂಟಲ್ ಕತೆಯನ್ನು ರಶ್ಮಿಕಾ ಮಂದಣ್ಣ ಬಿಚ್ಚಿಟ್ಟಿದ್ದಾರೆ.

 
ಈ ಸೀರೆ 61 ವರ್ಷದಷ್ಟು ಸೀರೆಯಂತೆ. ಇದನ್ನು ರಶ್ಮಿಕಾ ಅಜ್ಜಿ ಅವರ ಮದುವೆಯಲ್ಲಿ ಧರಿಸಿದ್ದರಂತೆ. ನಂತರ ಅವರು ಅದನ್ನು ರಶ್ಮಿಕಾ ತಾಯಿಗೆ ನೀಡಿದ್ದರಂತೆ. ಈಗ ರಶ್ಮಿಕಾ ತಾಯಿ ಅದನ್ನು ತಮ್ಮ ಮಗಳಿಗೆ ನೀಡಿದ್ದಾರೆ. ಒಟ್ಟಾರೆಯಾಗಿ  ಈ ಸೀರೆ ಮೂರು ತಲೆಮಾರಿಗೆ ತಲುಪಿದಂತಾಗಿದೆ.


'ನಾನು ಬೆಳೆದಿದ್ದೆಲ್ಲಾ ಅಜ್ಜಿ ಹತ್ತಿರ. ಜೀವನದಲ್ಲಿ 'ಏನೋ ಒಂದು ಆಗುವೆ' ಎಂದು ಅಜ್ಜಿ ಯಾವಾಗಲೂ ನನಗೆ ಹೇಳುತ್ತಿದ್ದರು. ಅವರು ನಮ್ಮನ್ನು ಬಿಟ್ಟು ಹೋದಾಗ ನನಗೆ ಬಂದಿತ್ತು. ನಾವು ಅವರನ್ನು ತುಂಬಾ ಮಿಸ್‌ ಮಾಡುತ್ತಿರುವೆ. ಈಗ ಅಜ್ಜಿ ನನ್ನ ನೋಡಿ ಹೆಮ್ಮೆ ಪಡುತ್ತಿರಬಹುದು. ಅವರ ಸೀರೆ ಧರಿಸಿ ಈ ಪ್ರಶಸ್ತಿ ಸ್ವೀಕರಿಸುತ್ತಿರುವುದು ಹೆಮ್ಮೆಯಾಗಿದೆ. ನನಗೆ ಸಿಕ್ಕಿರುವುದು ನನ್ನ ಮುಂದಿನ ಪೀಳಿಗೆಗೂ ಹೋಗಬೇಕಾಗಿದೆ, ಆದ್ದರಿಂದ ಇದರ ಬಗ್ಗೆ ನನಗೆ ತುಂಬಾ ಸೆಂಟಿಮೆಂಟ್' ಎಂದಿದ್ದಾರೆ. ನಟಿ ರಶ್ಮಿಕಾ.
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಟಗರು ಸಿನಿಮಾ ಹಾಗೂ ಶಿವರಾಜ್ ಕುಮಾರ್ ಕುರಿತು ನಟ ಸುದೀಪ್ ಹೇಳಿದ್ದೇನು ಗೊತ್ತಾ…?

ಬೆಂಗಳೂರು: ಶಿವರಾಜ್ ಕುಮಾರ್ ಅಭಿನಯದ ಟಗರು ಸಿನಿಮಾದ ಕುರಿತು ಸಾಕಷ್ಟು ಜನ ಮೆಚ್ಚುಗೆ ಮಾತನಾಡಿದ್ದಾರೆ. ಈಗ ...

news

ವೈ.ಎಸ್.ರೆಡ್ಡಿ ಪಾತ್ರಕ್ಕೆ ಸಜ್ಜಾದ ಮಮ್ಮುಟ್ಟಿ

ಚೆನ್ನೈ: ಮಲೆಯಾಳಂನ ಮೆಗಾ ಸ್ಟಾರ್ ಮಮ್ಮುಟ್ಟಿ ಅವರು ಹೊಸ ಪಾತ್ರವೊಂದಕ್ಕೆ ಸಜ್ಜಾಗಿದ್ದಾರೆ. ತೆಲುಗಿನ ...

news

ಶ್ರೀದೇವಿ ಜೀವನ ಆಧಾರಿತ ಸಿನಿಮಾಕ್ಕೆ ರಾಮ್ ಗೋಪಾಲ್ ವರ್ಮಾ ಸಜ್ಜು!

ಮುಂಬೈ: ಇತ್ತೀಚೆಗಷ್ಟೇ ನಿಧನರಾದ ಬಾಲಿವುಡ್ ನ ಮೋಹಕ ತಾರೆ ಶ್ರೀದೇವಿ ಅವರ ಜೀವನ ಆಧಾರಿತ ಸಿನಿಮಾ ...

news

ಕಣ್ಸನ್ನೆ ಹುಡುಗಿ ಪ್ರಿಯಾ ಪ್ರಕಾಶ್ ಸಂಭಾವನೆ ಎಷ್ಟು ಗೊತ್ತಾ...? ಕೇಳಿದ್ರೆ ಶಾಕ್ ಆಗ್ತಿರಿ!

ಮುಂಬೈ: ಕಣ್ಸನ್ನೆ ಮೂಲಕ ಎಲ್ಲರಲ್ಲೂ ಸಂಚಲನ ಮೂಡಿಸಿರುವ ನಟಿ ಪ್ರಿಯಾ ಪ್ರಕಾಶ್ ಈಗ ಸಾಮಾಜಿಕ ಜಾಲತಾಣದಲ್ಲಿ ...

Widgets Magazine
Widgets Magazine