ಛೇ… ಮಾಡದ ತಪ್ಪಿಗೆ ಶೃತಿಗೆ ಶಿಕ್ಷೆ.. ಬಿಗ್ ಬಾಸ್ ನೀಡಿದ ಶೀಕ್ಷೆಯೇನು ನೋಡಿ…

ಬೆಂಗಳೂರು, ಶನಿವಾರ, 28 ಅಕ್ಟೋಬರ್ 2017 (16:56 IST)

ಬೆಂಗಳೂರು: ಕೊನೆಗೂ ವಾರಂತ್ಯದಲ್ಲಿ ಮೊಟ್ಟೆ ಗೇಮ್ ಮುಗಿದಿದೆ. ಆದರೆ ಇದರಿಂದ ಶಿಕ್ಷೆ ಅನುಭವಿಸಿದ್ದು ಮಾತ್ರ ಕ್ಯಾಪ್ಟನ್ ಶೃತಿ.


ಬಿಗ್‌ ಬಾಸ್ ಮನೆಯಲ್ಲಿ ನಿನ್ನೆ ನಡೆದ ಟಾಸ್ಕ್ ನಲ್ಲಿ ಕಳಪೆ ಪ್ರದರ್ಶನ ತೋರಿದ ವ್ಯಕ್ತಿಯನ್ನು ಸೂಚಿಸಿ, ಕೊರಳಿಗೆ ಬೋರ್ಡ್ ಹಾಕುವಂತೆ ಬಿಗ್ ಬಾಸ್ ಸೂಚಿಸಿದ್ದರು. ಅದರಂತೆ ಕ್ಯಾಪ್ಟನ್ ಶೃತಿ ಕಳಪೆ ಪ್ರದರ್ಶನ ಬೋರ್ಡ್ ಸ್ಪರ್ಧಿ ದಿವಾಕರ್ ಗೆ ನೀಡಿದರು. ಆದರೆ ಇದರಿಂದ ಕುಪಿತಗೊಂಡ ದಿವಾಕರ್ ಬೋರ್ಡ್ ಹಾಕಿಕೊಳ್ಳಲು ನಿರಾಕರಿಸಿದರು.

ನಾನು ಉತ್ತಮವಾಗಿ ಆಟವಾಡಿದ್ದೇನೆ. ನನಗೆ ಕಳಪೆ ಬೋರ್ಡ್ ಯಾಕೆ? ನಾನು ಅನಕ್ಷರಸ್ಥ, ನೀವೆಲ್ಲಾ ಎಜುಕೇಟೆಡ್ಸ್. ಹೀಗಿರುವಾಗ ನಿಮಗೆ ತಿಳಿಯೋದಿಲ್ವಾ ಎಂದು ಶೃತಿಯನ್ನು ದಿವಾಕರ್ ತರಾಟೆಗೆ ತೆಗೆದುಕೊಂಡ್ರು.

ಹೀಗೆ ಶುರುವಾದ ಫಲಕದ ಗೊಂದಲ ರಾತ್ರಿಯಾದರೂ ಮುಗಿಯಲಿಲ್ಲ. ಕ್ಯಾಪ್ಟನ್‌ ನಿರ್ಧಾರ ಸರಿಯಾಗಿದೆ ಎಂದು ಕೆಲವರು ಸಮರ್ಥಿಸಿಕೊಂಡ್ರೆ, ಇನ್ನು ಕೆಲವರು ದಿವಾಕರ್ ಪರ ವಹಿಸಿದ್ರು. ಎಷ್ಟೇ ಒತ್ತಾಯ ಮಾಡಿದ್ರು ದಿವಾಕರ್‌ ಕಳಪೆ ಬೋರ್ಡ್ ಹಾಕಿಕೊಳ್ಳಲು ಸಮ್ಮತಿಸಲಿಲ್ಲ.

ಕಡೆಗೆ ಈ ಗೊಂದಲ ನಿವಾರಿಸಲು ಬಿಗ್‌ಬಾಸ್‌ ಎಂಟ್ರಿ ನೀಡಬೇಕಾಯಿತು. ಬೋರ್ಡ್ ಹಾಕಿಸಲು ವಿಫಲವಾದ ಕ್ಯಾಪ್ಟನ್‌ ಹಾಗೂ ಮೊಂಡುತನ ಪ್ರದರ್ಶಿಸಿದ ದಿವಾಕರ್‌ ನ್ನು ಬಿಗ್ ಬಾಸ್ ತಪ್ಪಿಸ್ಥರು ಎಂದರು. ಈ ವಾರ ಮನೆಯಿಂದ ಹೊರ ಹೋಗಲು ಇಬ್ಬರನ್ನೂ ನೇರವಾಗಿ ನಾಮಿನೇಟ್‌ ಮಾಡುವ ಮೂಲಕ ಬಿಗ್ ಬಾಸ್ ಶಿಕ್ಷೆ ನೀಡಿದ್ರು.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಐಂದ್ರಿತಾ ಜತೆ ಪ್ರೇಮ ಒಪ್ಪಿಕೊಂಡ ದಿಗಂತ್?

ಬೆಂಗಳೂರು: ಇತ್ತೀಚೆಗಷ್ಟೇ ಚಿರು ಸರ್ಜಾ ಮತ್ತು ಮೇಘನಾ ರಾಜ್ ರಿಯಲ್ ಲೈಫ್ ನಲ್ಲೂ ಜೋಡಿಯಾಗವುದಾಗಿ ...

news

ಮತ್ತೆ ಕಿರುತೆರೆಯತ್ತ ಮುಖ ಮಾಡಿದ ಚಿನ್ನು ಆಲಿಯಾಸ್ ಕವಿತಾ ಗೌಡ

ಬೆಂಗಳೂರು: ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮಿ ಬಾರಮ್ಮ ಧಾರವಾಹಿಯಿಂದ ಹೊರ ಬಂದು ...

news

ಕನ್ನಡವೆಂದರೆ ಬಾಲಿವುಡ್ ಬೆಡಗಿ ದೀಪಿಕಾಗೆ ಇಷ್ಟೊಂದು ಅಸಡ್ಡೆಯೇ?

ಮುಂಬೈ: ಕನ್ನಡ ನಾಡಿನವಳಾಗಿದ್ದುಕೊಂಡು, ಇಲ್ಲಿಯೇ ಮೊದಲು ಬಣ್ಣ ಹಚ್ಚಿ ನಂತರ ಖ್ಯಾತಿ ಪಡೆದ ದೀಪಿಕಾ ...

news

ಕ್ರೈಂ ಬ್ರಾಂಚ್ ಮಹಿಳಾ ಪೊಲೀಸ್ ಅಧಿಕಾರಿಗಳಿಂದ ಪ್ರಭಾಸ್ ಪೂಜೆ!

ಹೈದರಾಬಾದ್: ಬಾಹುಬಲಿ ಚಿತ್ರವಾದ ಮೇಲೆ ಜಗತ್ತಿನ ಯಾವ ಮೂಲೆಯಿಂದೆಲ್ಲಾ ಪ್ರಭಾಸ್ ಆರಾಧಿಸುವವರು ಇದ್ದಾರೆ ...

Widgets Magazine
Widgets Magazine