ಈ ಸಿಹಿತಿಂಡಿ ಎಂದರೆ ನಟಿ ರಾಧಿಕಾಗೆ ಪಂಚಪ್ರಾಣವಂತೆ

ಬೆಂಗಳೂರು, ಶನಿವಾರ, 9 ಜೂನ್ 2018 (05:42 IST)

ಬೆಂಗಳೂರು : ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ತಮ್ಮ ಇಷ್ಟ ಕಷ್ಟಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿರುವ ಸ್ಯಾಂಡಲ್ ವುಡ್ ನಟಿ ರಾಧಿಕಾ ಪಂಡಿತ್ ಅವರು ಇದೀಗ ಫೇಸ್‌ಬುಕ್‌ನಲ್ಲಿ ತಮ್ಮಗಿಷ್ಟವಾದ ಸಿಹಿತಿಂಡಿಯೊಂದರ ಕುರಿತು ಪೋಸ್ಟ್ ಮಾಡಿದ್ದಾರೆ.


ನಟಿ ರಾಧಿಕಾ ಪಂಡಿತ್ ಅವರಿಗೆ ಕಾಡು ಮಾವಿನ ಹಣ್ಣಿನಿಂದ ತಯಾರಿಸುವ ಅಂಬೆ ಕೋಳು ಎಂಬ ಸಿಹಿ ತಿಂಡಿ ತುಂಬಾ ಇಷ್ಟವಂತೆ. ಈ ತಿಂಡಿಯ ಜೊತೆಗಿನ ತಮ್ಮ ಫೋಟೋವನ್ನು ಅಪ್ಲೋಡ್ ಮಾಡಿ ಅದರ ಬಗ್ಗೆ ಮಾಹಿತಿ ನೀಡಿದ್ದಾರೆ.
ಅಂಬೆ ಕೋಳು ಎಂಬುದು ಕೊಂಕಣಿ ಭಾಗದ ಜನಪ್ರಿಯ ಸಿಹಿ ತಿನಿಸಾಗಿದ್ದು, ತಾವು ಇದರ ಅಭಿಮಾನಿ ಎಂದು ರಾಧಿಕಾ ಹೇಳಿದ್ದಾರೆ. ಹಾಗೇ ಚಿಕ್ಕಂದಿನಲ್ಲಿ ಬೇಸಿಗೆ ಕಾಲದಲ್ಲಿ ಅಂಬೆ ಕೋಳನ್ನು ಸವಿಯುತ್ತಿದ್ದು, ಈಗಲೂ ತಮಗೆ ಅಂಬೆ ಕೋಳು ಎಂದರೆ ಪಂಚಪ್ರಾಣ ಎಂದಿದ್ದಾರೆ. ಹಾಗೇ ತಮ್ಮ ಅಭಿಮಾನಿಗಳಲ್ಲಿ ಮಾವಿನ ಹಣ್ಣಿನಿಂದ ಮಾಡಿದ ಯಾವ ತಿನಿಸು ನಿಮಗಿಷ್ಟ ಎಂದು ರಾಧಿಕಾ ಕೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ವೈರಲ್ ಆಯ್ತು 'ಡಾನ್ಸಿಂಗ್ ಅಂಕಲ್' ವೀಡಿಯೋ

ಡಾನ್ಸಿಂಗ್ ಅಂಕಲ್ ಎಂದೇ ಕರೆಸಿಕೊಂಡಿರುವ ಪ್ರೊಫೆಸರ್ ಸಂಜೀವ್ ಶ್ರೀವಾಸ್ತವ್ ಇಂಟರ್‌ನೆಟ್‌ ಜಗತ್ತಿನಲ್ಲಿ ...

news

ಗ್ರಾಮೀಣ ಮಕ್ಕಳೊಂದಿಗೆ ಕ್ರಿಕೆಟ್ ಆಡಿದ ಸಿಎಂ ಪುತ್ರ ನಿಖಿಲ್

ಮಂಡ್ಯ: ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಸಿನಿಮಾ ಚಿತ್ರೀಕರಣ ವೇಳೆ ಗ್ರಾಮದ ಮಕ್ಕಳೊಂದಿಗೆ ಕೆಲ ಕಾಲ ...

news

ಮಾಸ್ತಿಗುಡಿ ಪ್ರಕರಣ ; ತಲೆಮರೆಸಿಕೊಂಡಿದ್ದ ಆರೋಪಿ ನಟ ದುನಿಯಾ ವಿಜಯ್ ಅರೆಸ್ಟ್

ಬೆಂಗಳೂರು : ಮಾಸ್ತಿಗುಡಿ ಚಿತ್ರದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ತಲೆಮರೆಸಿಕೊಂಡಿದ್ದ ನಟ ದುನಿಯಾ ...

news

ಕೆಲಸವಿಲ್ಲದಕ್ಕೆ ಇಂಥ ಕೆಲಸ ಮಾಡಿದ್ರಾ ನಟ ಉದಯ್ ಚೋಪ್ರಾ

ಮುಂಬೈ : ಬಾಲಿವುಡ್ ನಟಿ ರಾಣಿ ಮುಖರ್ಜಿ ಅವರ ಮೈದುನ ಉದಯ್ ಚೋಪ್ರಾ ಅವರು ತಮ್ಮ ಮನೆಯನ್ನು ಮಾರಾಟ ...

Widgets Magazine
Widgets Magazine