ಈ ಬಾರಿ ಚುನಾವಣೆಯಲ್ಲಿ ಪ್ರಚಾರ ಕಾರ್ಯಕ್ಕೆ ಇಳಿಯುತ್ತಾರಾ ನಟ ಶಿವರಾಜ ಕುಮಾರ್…?

ಹಾಸನ, ಸೋಮವಾರ, 16 ಏಪ್ರಿಲ್ 2018 (06:13 IST)

: ಈ ಬಾರಿಯ ಚುನಾವಣೆಯಲ್ಲಿ  ಸಿನಿಮಾ ತಾರೆಯರು ಕೂಡ ರಾಜಕೀಯ ಪಕ್ಷಗಳ ಪರವಾಗಿ ಪ್ರಚಾರಕ್ಕೆ ಇಳಿದಿರುವ ವಿಷಯ ಈಗಾಗಲೇ ಎಲ್ಲರಿಗೂ ತಿಳಿದೆ ಇದೆ. ಆದರೆ ನಟ ಶಿವರಾಜ್ ಕುಮಾರ್ ಅವರು ಮಾತ್ರ ಯಾವುದೇ ಪಕ್ಷ ಹಾಗೂ ಅಭ್ಯರ್ಥಿಯ ಪರವಾಗಿ ಪ್ರಚಾರದಲ್ಲಿ ಭಾಗವಹಿಸುವುದಿಲ್ಲ ಎಂಬುದಾಗಿ ತಿಳಿಸಿದ್ದಾರೆ.

ನಗರದ ಎಸ್.ಬಿ.ಜಿ. ಚಿತ್ರಮಂದಿರಕ್ಕೆ ಭೇಟಿ ನೀಡಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ‘ಪತ್ನಿ ಗೀತಾ ಶಿವರಾಜ್ ಕುಮಾರ್ ಅವರು ಮಧು ಬಂಗಾರಪ್ಪ ಪರ ಮಾತ್ರ ಪ್ರಚಾರ ಮಾಡಲಿದ್ದಾರೆ. ನಾನು ಪ್ರಚಾರಕ್ಕೆ ಬರಬೇಕೆಂದು ಅವರು ಬಯಸುವುದಿಲ್ಲ. ಅವರಿಗೂ ಗೊತ್ತು ನನ್ನ ಅಭಿಮಾನಿಗಳು ಎಲ್ಲ ಪಕ್ಷಗಳಲ್ಲೂ ಇದ್ದಾರೆಂದು. ನಾನೊಬ್ಬ ಕಲಾವಿದ, ಈ ಹಿಂದೆ ಪತ್ನಿ ಚುನಾವಣೆಗೆ ಸ್ಪರ್ಧೆ ಮಾಡಿದ್ದರಿಂದ ಅವರ ಪರವಾಗಿ ಪ್ರಚಾರ ಮಾಡಿದ್ದೆ ಅಷ್ಟೇ ‘ ಎಂದು ಹೇಳಿದ್ದಾರೆ.

 

ಹಾಗೇ ‘ಚುನಾವಣೆಯಲ್ಲಿ ಉತ್ತಮ ಆಡಳಿತ ನೀಡುವ ಹಾಗೂ ಜನರಿಗಾಗಿ ದುಡಿಯುವ ಪಕ್ಷ ಆಯ್ಕೆಯಾಗಬೇಕು. ಚುನಾವಣೆಯಲ್ಲಿ ನೀಡಿದ ಭರವಸೆ ಈಡೆರಿಸುವ ಮೂಲಕ ಜನರ ನಂಬಿಕೆ ಉಳಿಸಿಕೊಳ್ಳಲು ಪಕ್ಷ ಶ್ರಮಿಸಬೇಕು. ಪ್ರಕೃತಿಗೆ ಹೊಂದಿಕೊಂಡು ಬದುಕಿದಾಗ ಒಳ್ಳೆಯ ಮಳೆಯಾಗುತ್ತದೆ. ಹಾಗೇ ಉತ್ತಮ ಅಭ್ಯರ್ಥಿಗಳು ಆಡಳಿತಕ್ಕೆ ಬಂದರೆ ಮಾತ್ರ ಉತ್ತಮ ರೀತಿಯಲ್ಲಿ ಬದಲಾವಣೆ ಸಾಧ್ಯ. ಚುನಾವಣೆಯಲ್ಲಿ ಹಣ, ಹೆಂಡ ಹಂಚುವುದು ಸಲ್ಲದು. ಮತದಾರರು ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ ಸೂಕ್ತ ಅಭ್ಯರ್ಥಿಯ ಆಯ್ಕೆಗೆ ಶ್ರಮಿಸಬೇಕು. ಎಲ್ಲರೂ ಮತದಾನ ಮಾಡಬೇಕು. ಏಕೆಂದರೆ, ಒಂದು ಮತದಿಂದ ಒಬ್ಬ ಉತ್ತಮ ಅಭ್ಯರ್ಥಿ ಸೋಲಬಾರದು ಎಂದು ಅವರು ತಿಳಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

‘ಹೆಬ್ಬೆಟ್ಟು ರಾಮಕ್ಕ’ ಚಿತ್ರಕ್ಕೆ ಅತ್ಯುತ್ತಮ ಕನ್ನಡ ಪ್ರಾದೇಶಿಕ ಚಿತ್ರ ಪ್ರಶಸ್ತಿ; ಸಂತಸ ವ್ಯಕ್ತಪಡಿಸಿದ ನಟಿ ತಾರಾ

ಬೆಂಗಳೂರು : ನಟಿ ತಾರಾ ಅಭಿನಯದ ‘ಹೆಬ್ಬೆಟ್ಟು ರಾಮಕ್ಕ’ ಚಿತ್ರ ಅತ್ಯುತ್ತಮ ಕನ್ನಡ ಪ್ರಾದೇಶಿಕ ಚಿತ್ರ ...

news

ವಂಚನೆ ಪ್ರಕರಣದಡಿಯಲ್ಲಿ ದೋಷಿ ಎಂದು ಸಾಬೀತಾದ ಬಾಲಿವುಡ್ ನ ಹಾಸ್ಯನಟ ರಾಜ್ ಪಾಲ್ ಯಾದವ್

ಮುಂಬೈ : ವಂಚನೆ ಪ್ರಕರಣದಡಿಯಲ್ಲಿ ಬಾಲಿವುಡ್ ನ ಹಾಸ್ಯನಟ ರಾಜ್ ಪಾಲ್ ಯಾದವ್ ಹಾಗೂ ಅವರ ಪತ್ನಿ ಯನ್ನು ...

news

ಚಿತ್ರರಂಗಕ್ಕೆ ಕಾಲಿಡುತ್ತಿದೆ ಅಮಿತಾಬ್ ಬಚ್ಚನ್ ರವರ ಮೂರನೇ ತಲೆಮಾರು!

ಮುಂಬೈ : ಬಾಲಿವುಡ್ ನಲ್ಲಿ ಸ್ಟಾರ್ ನಟ ಎಂದು ಹೆಸರುಮಾಡಿರುವ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಕುಟುಂಬದ ...

news

ಕ್ರೇಜಿ ಕ್ವೀನ್ ರಕ್ಷಿತಾರವರು ಮತ್ತೆ ನಟಿಸುವುದಾದರೆ ಅದು ಈ ನಟನ ಜೊತೆಯಂತೆ

ಬೆಂಗಳೂರು : ನಟನಾ ಲೋಕದಿಂದ ದೂರ ಉಳಿದ ಸ್ಯಾಂಡಲ್ ವುಡ್ ನ ಕ್ರೇಜಿ ಕ್ವೀನ್ ರಕ್ಷಿತಾ ಅವರು ಇದೀಗ ತಮ್ಮ ...

Widgets Magazine
Widgets Magazine