ನಟ ಜೆಕೆ ಸಿನಿಮಾ ಟೈಟಲ್ ಬಗ್ಗೆ ಉಪೇಂದ್ರ ಅಭಿಮಾನಿಗಳು ಗರಂ ಆಗಿದ್ಯಾಕೆ?

ಬೆಂಗಳೂರು, ಬುಧವಾರ, 29 ಆಗಸ್ಟ್ 2018 (06:50 IST)

ಬೆಂಗಳೂರು : ಸ್ಯಾಂಡಲ್ ವುಡ್ ನಲ್ಲಿ ಸಿನಿಮಾ ಟೈಟಲ್ ಬಗ್ಗೆ ಆಗಾಗ ವಿವಾದಗಳು ತಲೆಎತ್ತುತ್ತಿದ್ದು, ಇದೀಗ ಮತ್ತೆ ಸಿನಿಮಾವೊಂದರ ಟೈಟಲ್ ಕುರಿತು ಅಭಿಮಾನಿಗಳು ಪುಲ್ ಗರಂ ಆಗಿದ್ದಾರೆ.


ಜಯರಾಮ್ ಕಾರ್ತಿಕ್ ಅಭಿನಯದ 'ಮೇ ಫಸ್ಟ್' ಚಿತ್ರವು ಕಳೆದ ಶುಕ್ರವಾರ ತೆರೆ ಕಂಡಿತ್ತು. ಈ ಚಿತ್ರದಲ್ಲಿ ನಾಯಕ ಜೆ.ಕೆ ಅವರಿಗೆ 'ಸೂಪರ್ ಸ್ಟಾರ್' ಎಂಬ ಹೆಸರನ್ನು ನೀಡಲಾಗಿದೆ. ಈ ಬಗ್ಗೆಇದೀಗ  ರಿಯಲ್ ಸ್ಟಾರ್ ಉಪೇಂದ್ರ ಅವರ ಅಭಿಮಾನಿಗಳು ಗರಂ ಆಗಿದ್ದಾರೆ.


'ಸೂಪರ್ ಸ್ಟಾರ್’ ಟೈಟಲ್ ಉಪ್ಪಿ ಅವರಿಗೆ ಸೇರಿದೆ. ಬುದ್ಧಿವಂತನ ಸಹನೆ ಪರೀಕ್ಷೆ ಮಾಡಬೇಡಿ. ಆ ಟೈಟಲ್ ಬಳಸಿಕೊಂಡಿದ್ದಕ್ಕೆ ಉಪೇಂದ್ರ ಅವರ ಬಳಿ ಕ್ಷಮೆ ಕೇಳಬೇಕು' ಎಂದು ಉಪೇಂದ್ರ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದಾರೆ.


ಈ ಬಗ್ಗೆ ಪ್ರತಿಕ್ರಿಯಿಸಿರುವ ಜೆಕೆ 'ಈ ಸಿನಿಮಾ ನೋಡಿದರೆ ಸೂಪರ್ ಸ್ಟಾರ್ ಟೈಟಲ್ ಇಟ್ಟಿದ್ದು ಏಕೆ ಎಂದು ಗೊತ್ತಾಗುತ್ತದೆ. ಇದು ಒಂದು ದೃಶ್ಯದಲ್ಲಿ ಮಾತ್ರ ಬರುತ್ತದೆ. ನಾನೇನೂ ತಪ್ಪು ಮಾಡಿಲ್ಲ. ದಯವಿಟ್ಟು ಅಭಿಮಾನಿಗಳು ಬೇಸರ ಮಾಡಿಕೊಳ್ಳಬಾರದು. ನಾನು ಸಹ ಉಪೇಂದ್ರರ ಅಭಿಮಾನಿ. ಅವರ ಜೊತೆಗೆ ನಾನು ಸ್ಪರ್ಧೆಗೆ ನಿಲ್ಲುವುದಕ್ಕೆಆಗುವುದಿಲ್ಲ' ಎಂದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ನಟ ಹೃತಿಕ್ ರೋಷನ್ ವಿರುದ್ಧ ವಂಚನೆ ಪ್ರಕರಣ ದಾಖಲು

ಮುಂಬೈ : ಬಾಲಿವುಡ್ ನಟ ಹೃತಿಕ್ ರೋಷನ್ ವಿರುದ್ಧ ಚೆನ್ನೈನ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ ...

news

ಯಶ್ ಜೋಹರ್‌ಗೆ ರಾಖಿ ಕಟ್ಟಿ ರಕ್ಷಾಬಂಧನವನ್ನು ಆಚರಿಸಿದ ಆಲಿಯಾ ಭಟ್..

ಪ್ರಸ್ತುತ ಆಲಿಯಾ ಬ್ರಹ್ಮಾಸ್ತ್ರ ಹಾಗೂ ಕಲಂಕ್ ಈ ಎರಡು ಚಿತ್ರಗಳ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈ ...

news

ಮೆಗಾಸ್ಟಾರ್ ಚಿರಂಜೀವಿ ಸೈ.ರಾ. ಚಿತ್ರದಲ್ಲಿ ಕಿಚ್ಚ ಸುದೀಪ್ ಪಾತ್ರವೇನು ಗೊತ್ತಾ?

ಹೈದರಾಬಾದ್ : ಟಾಲಿವುಡ್​ನ ಸೂಪರ್ ಸ್ಟಾರ್ ಚಿರಂಜೀವಿ ನಟಿಸುತ್ತಿರುವ ಸೈ.ರಾ. ಚಿತ್ರದಲ್ಲಿ ಸ್ಯಾಂಡಲ್​ವುಡ್ ...

news

ಗೋಲ್ಡನ್ ಸ್ಟಾರ್ ಗಣೇಶ್ ಗೆ ಪಿತೃ ವಿಯೋಗ

ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅವರ ತಂದೆ ರಾಮಕೃಷ್ಣಪ್ಪ ಅನಾರೋಗ್ಯದ ಕಾರಣದಿಂದಾಗಿ ಖಾಸಗಿ ...

Widgets Magazine